ದೇಶದ ಭವಿಷ್ಯ ಮತದಾನವನ್ನು ಅವಲಂಭಿಸಿದೆ

KannadaprabhaNewsNetwork | Published : Mar 20, 2024 1:20 AM

ಸಾರಾಂಶ

ರಾಜಕಾರಣದಲ್ಲಿ‌‌ ಮತವು ಹಣ‌ ಹಾಗೂ ಇತರ‌ ಅಮೀಶಗಳಿಗೆ ಮಾರಟವಾಗುತ್ತಿದೆ. ಶ್ರೀಮಂತರು, ಅವಿದ್ಯಾವಂತರು ಆಯ್ಕೆಯಾಗಿ‌ ದೇಶವನ್ನು ಅಭದ್ರತೆಯ ಹಾದಿಗೆ ಕೊಂಡೋಯ್ಯುತ್ತಿದ್ದಾರೆ. ಇದನ್ನು ತಪ್ಪಿಸಲು ಮತದಾನದಿಂದ ಮಾತ್ರ ಸಾಧ್ಯ

ಕನ್ನಡಪ್ರಭ ವಾರ್ತೆ ಬಂಗಾರಪೇಟೆ

ಭಾರತದಲ್ಲಿ ಪ್ರಜಾಪ್ರಭುತ್ವದ ಬುನಾದಿ ಮತದಾನ. ಭಾರತದಲ್ಲಿ, ಪ್ರತಿಯೊಬ್ಬ ನಾಗರಿಕನಿಗೂ ಅದರಲ್ಲಿ ಭಾಗವಹಿಸುವ ಹಕ್ಕು ಮತ್ತು ಜವಾಬ್ದಾರಿಯಿದೆ,‌ ಮತದಾನದ ಮೂಲಕ ರಾಷ್ಟ್ರದ ಭವಿಷ್ಯವನ್ನು ರೂಪಿಸಲು ಸಕ್ರಿಯವಾಗಿ ಭಾಗವಹಿಸಿ ಜವಾಬ್ದಾರಿಯುತ ನಾಗರಿಕರಾಗಿ ನಿಮ್ಮ ಕರ್ತವ್ಯ ನಿರ್ವಹಿಸಬೇಕು ಎಂದು ಜಿಲ್ಲಾಧಿಕಾರಿ ಅಕ್ರಂಪಾಷ ಹೇಳಿದರು.

ಜಿಲ್ಲಾ ಪಂಚಾಯಿತಿ, ತಾಲ್ಲೂಕು ಪಂಚಾಮಿತಿ ಹಾಗೂ ತಾಲೂಕು ಆಡಳಿತ ಮತ್ತು ಸ್ವೀಪ್ ಸಂಸ್ಥೆ ಸಹಯೋಗದಲ್ಲಿ ಆಯೋಜಿಸಿದ್ದ ಮತದಾನ ಜಾಗೃತಿ ಕಾರ್ಯಕ್ರಮದ ಪಂಜಿನ‌ ಮೆರವಣಿಗೆ ಕಾರ್ಯಕ್ರಮದಲ್ಲಿ ಮಾತನಾಡಿ, ಕಳೆದ ವಿಧಾನ ಸಭೆ ಚುನಾವಣೆಯ ಸಮಯದಲ್ಲಿ ಪಟ್ಟಣದ ಬಹುತೇಕ ವಾರ್ಡ್ ಗಳಲ್ಲಿ ನಿರೀಕ್ಷಿತ ಮಟ್ಟದಲ್ಲಿ ಸಾರ್ವಜನಿಕರು ಮತದಾನ ಮಾಡಲಿಲ್ಲ. ಇಂತಹ ಬೆಳವಣಿಗೆ ಪ್ರಜಾಪ್ರಭುತ್ವ ವ್ಯವಸ್ಥೆಗೆ ಮಾರಕ, ಈ ಹಿನ್ನೆಲೆಯಲ್ಲಿ ಪಟ್ಟಣದಲ್ಲಿ ಜಾಗೃತಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದರು.

ಮತ ಅಪಮೌಲ್ಯ ಮಾಡದಿರಿ

ಜಿಪಂ ಸಿಇಒ ಪದ್ಮ‌ ಬಸವಂತಪ್ಪ ಮಾತನಾಡಿ, ರಾಜಕಾರಣದಲ್ಲಿ‌‌ ಮತವು ಹಣ‌ ಹಾಗೂ ಇತರ‌ ಅಮೀಶಗಳಿಗೆ ಮಾರಟವಾಗುತ್ತಿದೆ. ಹೀಗೆ ಮತದ ಅಪಮೌಲ್ಯದಿಂದ ಪ್ರಜಾಪ್ರಭುತ್ವಕ್ಕೆ ಬೆಲೆ ಕಡಿಮೆಯಾಗುತ್ತಿದ್ದು, ಶ್ರೀಮಂತರು, ಅವಿದ್ಯಾವಂತರು ಆಯ್ಕೆಯಾಗಿ‌ ದೇಶವನ್ನು ಅಭದ್ರತೆಯ ಹಾದಿಗೆ ಕೊಂಡೋಯ್ಯುತ್ತಿದ್ದಾರೆ. ಇದನ್ನು ತಪ್ಪಿಸಲು ಮತದಾನದಿಂದ ಮಾತ್ರ ಸಾಧ್ಯ. ಪ್ರತಿಯೊಬ್ಬರೂ ಮತದಾನ ಮಾಡಿ ಪ್ರಜಾಪ್ರಭುತ್ವ ಉತ್ತಮ ದಾರಿಯಲ್ಲಿ ಸಾಗುವಂತೆ ಮಾಡಬೇಕಿದೆ ಎಂದರು.ದೇಶದ ಭವಿಷ್ಯ ನಿರ್ಧರಿಸುವ ಮತದಾನ

ಮತದಾನ ಎಂಬುದು ವ್ಯಕ್ತಿಯ ಆಯ್ಕೆಯ ಪ್ರಕ್ರಿಯೆವಷ್ಟೇ ಅಲ್ಲ. ಒಂದು ದೇಶದ ಭವಿಷ್ಯವನ್ನು ನಿರ್ಧರಿಸುವ ಆಧಾರ ಸ್ತಂಭ, ಬಲಿಷ್ಠ ರಾಷ್ಟ್ರ ನಿರ್ಮಾಣಕ್ಕಾಗಿ ಮತ್ತು ಪ್ರಜಾಸತಾತ್ಮಕ ಮೌಲ್ಯಗಳ ರಕ್ಷಣೆಗೆ ಎಲ್ಲರೂ ತಪ್ಪದೇ ಮತದಾನ ಮಾಡಬೇಕು ಎಂದು ತಾಲ್ಲೂಕು ಸ್ವೀಪ್ ಸಮಿತಿ ಅಧ್ಯಕ್ಷ ಹಾಗೂ ತಾಪಂ ಇಒ ರವಿಕುಮಾರ್ ಅಭಿಪ್ರಾಯಪಟ್ಟರು. ಪಂಜಿನ ಮೆರವಣಿಗೆಗೆ ಚಾಲನೆ

ಪಟ್ಟಣದ‌ ತಾಲೂಕು ಪಂಚಾಯಿತಿ ಕಛೇರಿಯಿಂದ ಕುವೆಂಪು ವೃತದ ಮಾರ್ಗವಾಗಿ ಪಟ್ಟಣದ ಪ್ರಮುಖ ಬೀದಿಗಳಲ್ಲಿ ನೂರಾರು ಪೌರಕಾರ್ಮಿಕರು, ಅಧಿಕಾರಿಗಳು,‌ ಪಿ,ಡಿ,ಓ, ಅಧಿಕಾರಿಗಳು ಅಂಗನವಾಡಿ ಮತ್ತು ಆಶಾ‌ಕಾರ್ಯಕರ್ತರು ಕೈಯಲ್ಲಿ ಪಂಜು ಹಿಡಿದು ಮೆರವಣಿಗೆ ಮಾಡುವ ಮೂಲಕ ಮತದಾನದ ಮಹತ್ವ ಕುರಿತು ಜಾಗೃತಿ ಮೂಡಿಸಿದರು.ಈ‌ ಸಂಧರ್ಭದಲ್ಲಿ ತಹಸೀಲ್ದಾರ್ ರಶ್ಮಿ, ಪುರಸಭೆ ಅಧಿಕಾರಿ ಮೀನಾಕ್ಷಿ, ಸಿ,ಡಿ,ಟಿ,ಓ, ಮುನಿರಾಜು, ಪಿಡಿಓ ಸಂಘದ ಅಧ್ಯಕ್ಷ ಪಿ. ನಾರಾಯಣಪ್ಪ,‌ ಭಾಸ್ಕರ್, ಶಂಕರ್,‌ ಮಧು ಚಂದ್ರ, ಸರಸ್ವತಿ. ಚೈತ್ರಾ,‌ ಪುರಸಭಾ ಆರೋಗ್ಯ ನಿರೀಕ್ಷಕ ಗೋವಿಂದರಾಜು ಇತರಿದ್ದರು.

Share this article