ಬೆಳ್ತಂಗಡಿ: ಬೆಂಗಳೂರಿನಿಂದ ಶ್ರೀ ಕ್ಷೇತ್ರ ಧರ್ಮಸ್ಥಳಕ್ಕೆ ಮಾಜಿ ಸಚಿವ ಹಾಗೂ ರಾಜಾಜಿನಗರದ ಶಾಸಕ ಸುರೇಶ ಕುಮಾರ್ ಅವರು ಸೈಕಲ್ ಯಾತ್ರೆ ಕೈಗೊಂಡು ಧರ್ಮಸ್ಥಳದಲ್ಲಿ ಶ್ರೀ ಮಂಜುನಾಥ ಸ್ವಾಮಿಯ ದರ್ಶನ ಪಡೆದರು.ಬುಧವಾರ ಮುಂಜಾನೆ ಬೆಂಗಳೂರಿನಿಂದ ಹೊರಟ ಅವರು ನ.10ರಂದು ಶ್ರೀ ಕ್ಷೇತ್ರ ಧರ್ಮಸ್ಥಳ ತಲುಪಿ ತನ್ನ ಸೈಕಲ್ ಯಾತ್ರೆಯನ್ನು ಸಮಾಪ್ತಿಗೊಳಿಸಿದ್ದಾರೆ. ದಿ ರಾಜಾಜಿನಗರ ಪೆಡಲ್ ಪವರ್ ತಂಡದ ಮೂಲಕ ಎಂಟು ಜನ ಸಹಸವಾರರ ಜತೆಗೆ ಮೂರು ದಿನಗಳ ಸೈಕಲ್ ಯಾತ್ರೆಯನ್ನು ಯಶಸ್ವಿಯಾಗಿ ಪೂರೈಸಿದ ಶಾಸಕ ಸುರೇಶ ಕುಮಾರ್, ಶ್ರೀ ಕ್ಷೇತ್ರ ಧರ್ಮಸ್ಥಳ ತಲುಪಿ ಶ್ರೀ ಸ್ವಾಮಿಯ ಸೇವೆಗೈದಿದ್ದಾರೆ. ಸುರೇಶ ಕುಮಾರ್ ಜತೆಗೆ ಅಯ್ಯಪ್ಪ, ಸಾಗರ್ ನಾಯ್ಡು, ಹರೀಶ್, ರಾಘವ್, ದಿವಾಕರ್, ಮೋಹನ್, ಬಾಲು ಮತ್ತು ಕಿರಣ್ ಸಹಸವಾರರಾಗಿ ಪಾಲ್ಗೊಂಡಿದ್ದರು.
2014ರ ನವೆಬರ್‌ನಲ್ಲಿ ಶಾಸಕ ಸುರೇಶ್ ಕುಮಾರ್, ಎಂಟು ದಿನಗಳ ಕಾಲ ಬೆಂಗಳೂರಿನಿಂದ ಧರ್ಮಸ್ಥಳಕ್ಕೆ ಪಾದಯುತ್ರೆ ಮೂಲಕ ಸಾಗಿ ಬಂದಿದ್ದರು.ರೇಶ ಕುಮಾರ್ )