ಕುಕನೂರು: ತಾಲೂಕಿನ ಕೋಮಲಾಪುರ ಗ್ರಾಮದ ಸರ್ಕಾರಿ ಹಿರಿಯ ಪ್ರೌಢಶಾಲೆಯ ಮುಖ್ಯ ಶಿಕ್ಷಕನ ಎರಡನೇ ಪತ್ನಿ ಪತಿ ಮನೆಗೆ ಬಂದಿಲ್ಲ ಎಂದು ಶಾಲೆಗೆ ಬಂದು ನಿತ್ಯ ಗಲಾಟೆ ಮಾಡುತ್ತಿದ್ದು, ಇದರಿಂದ ಮಕ್ಕಳ ವಿದ್ಯಾಭ್ಯಾಸದ ಮೇಲೆ ಪರಿಣಾಮ ಬೀರುತ್ತಿದೆ ಎಂದು ಗ್ರಾಮಸ್ಥರು ಸಹ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಮನೆಗೆ ಬರುವ ವಿಚಾರಕ್ಕೆ ಕಳೆದ ನಾಲ್ಕೈದು ತಿಂಗಳಿಂದ ನಿತ್ಯ ಶಾಲೆಗೆ ಬಂದು ಚೆನ್ನಮ್ಮ ಗಲಾಟೆ ಮಾಡುತ್ತಿದ್ದರು. ಶಿಕ್ಷಕ ಮತ್ತು ಎರಡನೇ ಪತ್ನಿ ಚೆನ್ನಮ್ಮ ಗಲಾಟೆಗೆ ಬೇಸತ್ತು ಜನರು ಬುಧವಾರ ಇಬ್ಬರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಪ್ರತಿನಿತ್ಯ ಶಾಲಾ ಮಕ್ಕಳು ಮತ್ತು ಗ್ರಾಮಸ್ಥರು ಈ ಮಹಿಳೆಯ ಗಲಾಟೆ ಕಣ್ಣಾರೆ ಕಂಡಿದ್ದಾರೆ. ನಿಮ್ಮ ಮನೆ ಜಗಳ ಶಾಲೆವರೆಗೂ ತರಬೇಡಿ, ಇದರಿಂದ ಮಕ್ಕಳ ವಿದ್ಯಾಭ್ಯಾಸದ ಮೇಲೆ ಪರಿಣಾಮ ಬೀರುತ್ತದೆ ಎಂದು ತರಾಟೆಗೆ ತೆಗೆದುಕೊಂಡಿದ್ದಾರೆ. ಇವರ ಜಗಳದಿಂದ ಮಕ್ಕಳ ಮೇಲೆ ಪರಿಣಾಮ ಬೀರುತ್ತಿದೆ. ಇದರ ಬಗ್ಗೆ ಅಧಿಕಾರಿಗಳು ಮತ್ತು ಕುಟುಂಬಸ್ಥರು ಇವರ ಸಮಸ್ಯೆ ಬಗೆಹರಿಸಬೇಕಿದೆ ಎಂದು ಸಹ ಗ್ರಾಮಸ್ಥರು ಒತ್ತಾಯಿಸಿದ್ದಾರೆ.
ಶಾಲೆಯಲ್ಲಿ ಶಿಕ್ಷಕ ತಮ್ಮ ಪತ್ನಿ ಜತೆಗೆ ನಿತ್ಯ ಗಲಾಟೆ ಮಾಡುವುದರಿಂದ ಶಾಲೆ ಮಕ್ಕಳ ಮೇಲೆ ಇದು ಪರಿಣಾಮ ಬೀರುತ್ತಿದೆ. ಆ ಮಹಿಳೆಗೆ ಸಹ ನಾವು ಹಲವಾರು ಬಾರಿ ಹೇಳಿದ್ದೇವೆ. ಆದರೂ ಸಹ ಆಕೆ ಮುಖ್ಯ ಶಿಕ್ಷಕರ ಜತೆ ನಿತ್ಯ ತಮ್ಮ ಕೌಟುಂಬಿಕ ಕಲಹ ಮಾಡುತ್ತಿದ್ದಾರೆ. ಇದರಿಂದ ಮಕ್ಕಳ ವಿದ್ಯಾಭ್ಯಾಸಕ್ಕೆ ತೊಂದರೆ ಆಗಿದೆ ಎಂದು ಕೋಮಲಾಪೂರ ಗ್ರಾಮಸ್ಥರು ತಿಳಿಸಿದ್ದಾರೆ.ಶಾಲೆಯ ಎಸ್.ಡಿ.ಎಂ.ಸಿ ಮಂಡಳಿಯವರು ಮುಖ್ಯ ಶಿಕ್ಷಕನ ಜತೆ ಅವರ ಎರಡನೇ ಪತ್ನಿ ಶಾಲೆಯಲ್ಲಿ ಗಲಾಟೆ ಮಾಡುವ ವಿಚಾರ ತಿಳಿಸಿದ್ದಾರೆ. ಈ ಬಗ್ಗೆ ಸೂಕ್ತ ಕ್ರಮ ಜರುಗಿಸಲಾಗುವುದು ಎಂದು ಯಲಬುರ್ಗಾ ಬಿಇಒ ಅಶೋಕಗೌಡ ತಿಳಿಸಿದ್ದಾರೆ.