ಕಾರ್ಯಾಗಾರ, ರಾಷ್ಟ್ರೀಯ ಆಯುರ್ವೇದ ಸಮ್ಮೇಳನಕನ್ನಡಪ್ರಭ ವಾರ್ತೆ ಕೊಪ್ಪಳ
ನಗರದ ಶಿವಶಾಂತಮಂಗಲಭವನದಲ್ಲಿ ಶ್ರೀ ಗವಿಸಿದ್ಧೇಶ್ವರ ಆರ್ಯುವೇದ ಮಹಾವಿದ್ಯಾಲಯದಲ್ಲಿ ಹಮ್ಮಿಕೊಂಡಿದ್ದ ಮಾನಸಂ –೨೦೨೪– ರಾಷ್ಟ್ರೀಯ ಆಯುರ್ವೇದ ಸಮ್ಮೇಳನ ಹಾಗೂ ಕಾರ್ಯಾಗಾರ ಹಾಗೂ ರಾಷ್ಟ್ರೀಯ ಆಯುರ್ವೇದ ಸಮ್ಮೇಳನ ಉದ್ಘಾಟಿಸಿ ಮಾತನಾಡಿದರು.
ಈ ಪದ್ಧತಿಗಳಲ್ಲಿ ಹೇಳಲಾದ ಪ್ರತಿಯೊಂದು ಅಂಶಗಳ ಪಾಲನೆ ಅನಿವಾರ್ಯವೆಂದು ಹೇಳುವುದರ ಜೊತೆಗೆ ಮಾಡುವುದು ಸರಿಯಾದ ವಿಧಾನವನ್ನು ಅನುಸರಿಸಿದರೇ ಖಂಡಿತವಾಗಿಯೂ ಉತ್ತಮ ಆರೋಗ್ಯ ಕಾಪಾಡಿಕೊಳ್ಳಬಹುದು ಎಂದರು.ಡಾ. ಬಸವರಾಜ ತುಬಾಕಿ ಮಾತನಾಡಿ, ಆಯುರ್ವೇದ ಮೂಲಕ ಸಂಶೋಧನೆಗೈದ ಹಲವು ಚಿಕಿತ್ಸಾ ಕ್ರಮಗಳನ್ನು ಈಗಾಗಲೇ ಲಭ್ಯವಿದ್ದು, ಸೂಕ್ತ ಮಾರ್ಗದರ್ಶನದೊಂದಿಗೆ ಅನುಸರಿಸುವ ಅಗತ್ಯವಿದೆ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಪ್ರಾಂಶುಪಾಲ ಡಾ. ಮಹಾಂತೇಶ ಸಾಲಿಮಠ ವಹಿಸಿದ್ದರು. ಎರಡು ದಿನದ ಸಮ್ಮೇಳನದಲ್ಲಿ ಡಾ. ಮಹೇಶ ಸಾಲಿಮಠ ಹಾಗೂ ಡಾ. ಮಂಗಳಾ ಸಜ್ಜನರ, ಸ್ವಸ್ಥವೃತ್ತ ವಿಭಾಗದ ಡಾ. ಪ್ರಭು ನಾಗಲಾಪೂರ, ಡಾ. ಸೋಮನಾಥ.ಎಸ್, ಡಾ. ಆಶಾ ಎಸ್.ಎ., ಡಾ. ಅಮಲ್ ಎಸ್. ಚಂದ್ರನ್, ಡಾ. ನವೀನಕುಮಾರ ಮತ್ತು ಕಾಯಚಿಕಿತ್ಸಾ ವಿಭಾಗದ ಡಾ. ಮಂಜುಳಾ ಕರ್ಲವಾಡ, ಡಾ. ರಾಜಶೇಖರ ಶೆಟ್ಟರ್, ಡಾ. ಶ್ರೀಧರಯ್ಯ ಹಿರೇಮಠ ಸೇರಿ ಒಟ್ಟು ೧೪ ಜನರು ಆಯುರ್ವೇದ ಮತ್ತು ಯೋಗದ ಮೂಲಕ ಮನಸ್ಸಿನ ನಿಯಂತ್ರಣ, ಮಾನಸಿಕ ರೋಗದ ಚಿಕಿತ್ಸಾ ಪದ್ಧತಿ ಹಾಗೂ ವಿವಿಧ ವಿಷಯಗಳ ಮೇಲೆ ಉಪನ್ಯಾಸ ನೀಡಿದರು.
ಡಾ. ಪವಿತ್ರಾ ಜಿ. ಹಾಗೂ ಅನ್ನಪೂರ್ಣ ಕಾರ್ಯಕ್ರಮದ ನಿರೂಪಿಸಿದರು. ಸಮ್ಮೇಳನದ ಸಂಘಟನಾ ಕಾರ್ಯದರ್ಶಿ ಡಾ. ಪ್ರಭು ನಾಗಲಾಪೂರ ಸ್ವಾಗತಿಸಿ, ವಂದಿಸಿದರು.