ದೇಶಸೇವೆಗೆ ಜೀವನ ಅರ್ಪಿಸಿದ ಗಣ್ಯರ ಸ್ಮರಣೆ ಅತ್ಯಗತ್ಯ: ರಮೇಶ್ ಗುಪ್ತ

KannadaprabhaNewsNetwork |  
Published : Dec 30, 2024, 01:03 AM IST
29ಮಾಗಡಿ1 : ಮಾಗಡಿ ಪಟ್ಟಣದ ವಾಸವಿ ಶಾಲೆಯ ವಾರ್ಷಿಕೋತ್ಸವ ಕಾರ್ಯಕ್ರಮದಲ್ಲಿ ಇತ್ತೀಚಿಗಷ್ಟೇ ನಿಧನರಾದ ಗಣ್ಯರಿಗೆ ಶ್ರದ್ಧಾಂಜಲಿ ಅರ್ಪಿಸಲಾಯಿತು. | Kannada Prabha

ಸಾರಾಂಶ

ಒಬ್ಬೊಬ್ಬ ಗಣ್ಯ ವ್ಯಕ್ತಿಯೂ ಕೂಡ ದೇಶಕ್ಕೆ ದೊಡ್ಡ ಕೊಡುಗೆಯನ್ನು ನೀಡಿದ್ದು, ಅವರ ಅವಧಿಯಲ್ಲಿ ಸಾಕಷ್ಟು ಅಭಿವೃದ್ಧಿ ಕಾರ್ಯಗಳು ಆಗಿವೆ. ವಾರ್ಷಿಕೋತ್ಸವದಲ್ಲಿ ನಮ್ಮನ್ನು ಅಗಲಿದ ಗಣ್ಯರಿಗೆ ಸಂತಾಪ ಸೂಚಿಸಿ ಇಂದಿನ ಮಕ್ಕಳಿಗೆ ಅವರ ಸಾಧನೆಯನ್ನು ತೋರಿಸುವುದು ಪುಣ್ಯದ ಕೆಲಸವಾಗಿದೆ.

ಕನ್ನಡಪ್ರಭ ವಾರ್ತೆ ಮಾಗಡಿ

ದೇಶಕ್ಕಾಗಿ ತಮ್ಮ ತನು, ಮನವನ್ನು ಅರ್ಪಿಸಿ ಸೇವೆ ಮಾಡಿದ ಗಣ್ಯರಿಗೆ ಶಾಲಾ ವಾರ್ಷಿಕೋತ್ಸವದಂದು ನಮನ ಸಲ್ಲಿಸಲಾಗುತ್ತಿದೆ ಎಂದು ವಾಸವಿ ಶಿಕ್ಷಣ ಟ್ರಸ್ಟ್‌ನ ಅಧ್ಯಕ್ಷ ಎಸ್.ಟಿ. ರಮೇಶ್ ಗುಪ್ತ ಹೇಳಿದರು.

ಪಟ್ಟಣದ ವಿದ್ಯಾನಿಕೇತನ ಶಾಲೆಯ ವಾರ್ಷಿಕೋತ್ಸವ ಕಾರ್ಯಕ್ರಮದಲ್ಲಿ ಇತ್ತೀಚಿಗಷ್ಟೇ ನಿಧನರಾದ ಗಣ್ಯರಿಗೆ ನುಡಿ ನಮನ ಸಲ್ಲಿಸಿ ಮಾತನಾಡಿದ ಅವರು, ರತನ್ ಟಾಟಾ, ಮಾಜಿ ಮುಖ್ಯಮಂತ್ರಿ ಎಸ್.ಎಂ. ಕೃಷ್ಣ, ಪ್ರಧಾನಿ ಮನಮೋಹನ್ ಸಿಂಗ್ ಹಾಗೂ ರಸ್ತೆ ಅಪಘಾತದಲ್ಲಿ ಮೃತಪಟ್ಟ ಭಾರತೀಯ ಧೀರ ಯೋಧರ ಸ್ಮರಣೆಯನ್ನು ಪ್ರತಿಯೊಬ್ಬ ಭಾರತೀಯನೂ ಮಾಡಿಕೊಳ್ಳಬೇಕು. ತಮ್ಮ ತಮ್ಮ ಕ್ಷೇತ್ರದಲ್ಲಿ ದೇಶಕ್ಕಾಗಿ ದೊಡ್ಡ ಸಾಧನೆಯನ್ನು ಮಾಡಿ ದೇಶಕ್ಕೆ ಮಾದರಿ ಪ್ರಜೆಗಳಾಗಿ ರೂಪುಗೊಂಡಿದ್ದು, ಇವರ ಆದರ್ಶಗಳನ್ನು ಇಂದಿನ ಪೀಳಿಗೆಯ ಮಕ್ಕಳು ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳುವ ಮೂಲಕ ದೇಶಕ್ಕೆ ಸೇವೆ ಸಲ್ಲಿಸುವ ಕೆಲಸ ಮಾಡಬೇಕು ಎಂದು ಹೇಳಿದರು.

ಒಬ್ಬೊಬ್ಬ ಗಣ್ಯ ವ್ಯಕ್ತಿಯೂ ಕೂಡ ದೇಶಕ್ಕೆ ದೊಡ್ಡ ಕೊಡುಗೆಯನ್ನು ನೀಡಿದ್ದು, ಅವರ ಅವಧಿಯಲ್ಲಿ ಸಾಕಷ್ಟು ಅಭಿವೃದ್ಧಿ ಕಾರ್ಯಗಳು ಆಗಿವೆ. ವಾರ್ಷಿಕೋತ್ಸವದಲ್ಲಿ ನಮ್ಮನ್ನು ಅಗಲಿದ ಗಣ್ಯರಿಗೆ ಸಂತಾಪ ಸೂಚಿಸಿ ಇಂದಿನ ಮಕ್ಕಳಿಗೆ ಅವರ ಸಾಧನೆಯನ್ನು ತೋರಿಸುವುದು ಪುಣ್ಯದ ಕೆಲಸವಾಗಿದೆ. ವಾರ್ಷಿಕೋತ್ಸವ ಕಾರ್ಯಕ್ರಮವು ದೇಶವನ್ನು ಅಗಲಿದ ಗಣ್ಯರಿಗೆ ಅರ್ಪಿಸಲಾಗಿದೆ ಎಂದು ತಿಳಿಸಿದರು.

ವೇದಿಕೆ ಕಾರ್ಯಕ್ರಮ ರದ್ದು:

ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಅವರ ನಿಧನದ ಹಿನ್ನೆಲೆಯಲ್ಲಿ ದೇಶಾದ್ಯಂತ ಏಳು ದಿನಗಳ ಕಾಲ ಶೋಕಾಚರಣೆ ಇರುವುದರಿಂದ ವೇದಿಕೆ ಕಾರ್ಯಕ್ರಮ ರದ್ದುಗೊಳಿಸಿ ನಮ್ಮನ್ನು ಅಗಲಿದ ಗಣ್ಯರಿಗೆ ಶ್ರದ್ಧಾಂಜಲಿ ಅರ್ಪಿಸಿ ಶಾಲಾ ಮಕ್ಕಳ ಪ್ರತ್ಯೋತ್ಸವ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು.

ಶಾಲಾ ಮಕ್ಕಳು ನಡೆಸಿಕೊಟ್ಟ ನೃತ್ಯ ಪ್ರದರ್ಶನವು ನೆರೆದಿದ್ದ ಸಾರ್ವಜನಿಕರಿಗೆ ಮನರಂಜನೆ ನೀಡಿತು.ಕಾರ್ಯಕ್ರಮದಲ್ಲಿ ವಾಸವಿ ಶಾಲೆಯ ಮುಖ್ಯ ಶಿಕ್ಷಕ ಡಿ.ಸಿ. ವಸಂತ್ ಕುಮಾರ್, ಇ.ಎಸ್. ಮಯೂರ, ವಾಸವಿ ಶಿಕ್ಷಣ ಟ್ರಸ್ಟ್ ನ ಕಾರ್ಯದರ್ಶಿ ಎಂ.ಕೆ.ಸುರೇಶ್ ಬಾಬು, ಉಪಾಧ್ಯಕ್ಷ ಬಿ.ಕೆ. ರಂಗನಾಥ್, ಜಂಟಿ ಕಾರ್ಯದರ್ಶಿ ಆರ್.ಎನ್. ನಾಗೇಂದ್ರ ಬಾಬು, ಕಾರ್ಯದರ್ಶಿ ಎಸ್‌.ಬಿ. ನಾಗೇಶ್, ಟ್ರಸ್ಟಿಗಳಾದ ಬಿ.ಎನ್. ರಾಜು, ಎಸ್.ಆರ್. ಸುರೇಶ್, ಎಂ.ಪಿ.ಜಯಶಂಕರ್, ಎಸ್.ಎನ್. ನಾಗರಾಜು, ದೈಹಿಕ ಶಿಕ್ಷಕ ಪಂಚಾಕ್ಷರಿ ಸೇರಿ ಶಾಲಾ ಶಿಕ್ಷಕರು, ಪೋಷಕರು ಭಾಗವಹಿಸಿದ್ದರು.

PREV

Recommended Stories

ಧರ್ಮಸ್ಥಳ ಗ್ರಾಮ ಕೇಸ್‌ ರೀತಿ ಶ್ವಾನ ಮೂಳೆ ಪತ್ತೆಗೆ ಎಸ್‌ಐಟಿ?
ಎಸ್ಸೆಸ್ಸೆಲ್ಸಿ- ಪಿಯು : ಈ ವರ್ಷವೂ 3 ಪರೀಕ್ಷೆ ಉದ್ದೇಶ ಫೇಲ್‌