ಶಾಸಕ ಸಿಮೆಂಟ್‌ ಮಂಜು ಹುಟ್ಟುಹಬ್ಬಕ್ಕೆ ಆರೋಗ್ಯ ತಪಾಸಣಾ ಶಿಬಿರ

KannadaprabhaNewsNetwork |  
Published : Dec 25, 2025, 01:15 AM IST
24ಎಚ್ಎಸ್ಎನ್5 :  | Kannada Prabha

ಸಾರಾಂಶ

ಶಾಸಕ ಸಿಮೆಂಟ್ ಮಂಜು ಹುಟ್ಟುಹಬ್ಬದ ಹಿನ್ನೆಲೆಯಲ್ಲಿ ಗುರುವೇಗೌಡ ಕಲ್ಯಾಣ ಮಂಟಪದಲ್ಲಿ ಆಯೋಜಿಸಲಾಗಿದ್ದ ಉಚಿತ ಆರೋಗ್ಯ ತಪಾಸಣಾ ಶಿಬಿರ ಉದ್ಘಾಟಿಸಿ ಮಾತನಾಡಿ, ಆತ್ಮಪೂರ್ವಕ ಸೇವೆ ಬದುಕಿನುದ್ದಕ್ಕೂ ಬರಲಿದೆ. ಸ್ವಾರ್ಥದಿಂದ ಮಾಡಿದ ಸೇವೆ ಕ್ಷಣಿಕ. ಬಡವರ ಸೇವೆ ಮಾಡುವುದರಿಂದ ದೇವರ ಕೃಪೆಗೆ ಪಾತ್ರರಾಗ ಬಹುದು. ಹುಟ್ಟಿದ ನಾಡು, ಹೆತ್ತತಾಯಿ ಸ್ವರ್ಗಕ್ಕೆ ಸಮ. ಈ ಇಬ್ಬರಿಗೂ ಆತ್ಮಪೂರ್ವಕ ಸೇವೆ ಮಾಡಿದರೆ ಮತ್ಯಾವ ದೇವಸ್ಥಾನಕ್ಕೂ ಹೋಗುವುದು ಬೇಕಿಲ್ಲ. ಇಂತಹ ಸೇವೆಯನ್ನು ಶಾಸಕರು ಮಾಡುತ್ತಿದ್ದು ಇವರ ಸಕ್ರೀಯತೆ ಮುಂದಿನ ದಿನಗಳಲ್ಲಿ ಉನ್ನತ ಸ್ಥಾನ ದೊರಕಿಸಿಕೊಡುವುದರಲ್ಲಿ ಯಾವುದೆ ಅನುಮಾನವಿಲ್ಲ ಎಂದರು.

ಕನ್ನಡಪ್ರಭ ವಾರ್ತೆ ಸಕಲೇಶಪುರ

ಕರುಳು ಹಾಗೂ ಕೊರಳಿನ ಮಾತುಗಳ ನಡುವೆ ವ್ಯತ್ಯಾಸ ತಿಳಿಯುವುದು ಅಗತ್ಯ ಎಂದು ಹಾಸನ ಆದಿಚುಂಚನಗಿರಿ ಶಾಖಾಮಠದ ಶ್ರೀ ಶಂಭುನಾಥ ಸ್ವಾಮೀಜಿ ಹೇಳಿದರು. ಶಾಸಕ ಸಿಮೆಂಟ್ ಮಂಜು ಹುಟ್ಟುಹಬ್ಬದ ಹಿನ್ನೆಲೆಯಲ್ಲಿ ಗುರುವೇಗೌಡ ಕಲ್ಯಾಣ ಮಂಟಪದಲ್ಲಿ ಆಯೋಜಿಸಲಾಗಿದ್ದ ಉಚಿತ ಆರೋಗ್ಯ ತಪಾಸಣಾ ಶಿಬಿರ ಉದ್ಘಾಟಿಸಿ ಮಾತನಾಡಿ, ಆತ್ಮಪೂರ್ವಕ ಸೇವೆ ಬದುಕಿನುದ್ದಕ್ಕೂ ಬರಲಿದೆ. ಸ್ವಾರ್ಥದಿಂದ ಮಾಡಿದ ಸೇವೆ ಕ್ಷಣಿಕ. ಬಡವರ ಸೇವೆ ಮಾಡುವುದರಿಂದ ದೇವರ ಕೃಪೆಗೆ ಪಾತ್ರರಾಗ ಬಹುದು. ಹುಟ್ಟಿದ ನಾಡು, ಹೆತ್ತತಾಯಿ ಸ್ವರ್ಗಕ್ಕೆ ಸಮ. ಈ ಇಬ್ಬರಿಗೂ ಆತ್ಮಪೂರ್ವಕ ಸೇವೆ ಮಾಡಿದರೆ ಮತ್ಯಾವ ದೇವಸ್ಥಾನಕ್ಕೂ ಹೋಗುವುದು ಬೇಕಿಲ್ಲ. ಇಂತಹ ಸೇವೆಯನ್ನು ಶಾಸಕರು ಮಾಡುತ್ತಿದ್ದು ಇವರ ಸಕ್ರೀಯತೆ ಮುಂದಿನ ದಿನಗಳಲ್ಲಿ ಉನ್ನತ ಸ್ಥಾನ ದೊರಕಿಸಿಕೊಡುವುದರಲ್ಲಿ ಯಾವುದೆ ಅನುಮಾನವಿಲ್ಲ ಎಂದರು.ಯಸಳೂರು ತೆಂಕಲಗೂಡು ಬೃಹನ್ಮಠದ ಶ್ರೀ ಚನ್ನಸಿದ್ದೇಶ್ವರ ಶಿವಚಾರ್ಯ ಸ್ವಾಮೀಜಿ ಆಶೀರ್ವಚನ ನೀಡಿ, ಬದುಕು ಮಾದರಿಯಾಗಿರಬೇಕು ಹೀಗೇ ಬದುಕಬೇಕು ಎಂದು ಬದುಕಿದಾಗ ಬದುಕಿಗೆ ಅರ್ಥ ಬರಲಿದೆ. ಸಾಧಕರು ನಮ್ಮ ಮಾದರಿಗಳಾಗಬೇಕು, ಆದರೆ ಇಂದಿನ ಯುವಜನಾಂಗಕ್ಕೆ ಯಾರ್ಯಾರೋ ಮಾದರಿಯಾಗುತ್ತಿದ್ದಾರೆ. ಅಧಿಕಾರ ಬಂದಾಗ ಅಹಂಕಾರ ಬಂದರೆ ಒಳ್ಳಿತಲ್ಲ. ದೊಡ್ಡವರಾದಂತೆ ಸರಳತೆ ಮೈಗೂಡಿಸಿಕೊಳ್ಳಬೇಕು ಎಂದರು. ಕಿರಕೊಡ್ಲಿಮಠದ ಶ್ರೀ ಸದಾಶಿವಸ್ವಾಮೀಜಿ ಆಶೀವರ್ಚನ ನೀಡಿ, ಹುಟ್ಟುಹಬ್ಬಗಳು ಆಚರಣೆ, ಅಬ್ಬರದ ಬದಲಾಗಿ ಸಾರ್ವಜನಿಕರಿಗೆ ಸಹಾಯವಾಗುವಂತಿರಬೇಕು. ಇಂದು ನಡೆಯುತ್ತಿರುವ ಶಾಸಕರ ಹುಟ್ಟುಹಬ್ಬ ಮುಂದಿನ ದಿನಗಳಲ್ಲಿ ಎಲ್ಲರಿಗೂ ಮಾದರಿಯಾಗಲಿ ಹೆಚ್ಚೆಚ್ಚು ಒಳ್ಳೆಯ ಕಾರ್ಯಗಳು ನಡೆಯಲಿ ಎಂದರು.ಕಲ್ಮಠದ ಶ್ರೀ ಮಹಾಂತಸ್ವಾಮೀಜಿ ಮಾತನಾಡಿ, ಇಂದು ವೈಟ್ ಕಾಲರ್‌ ರಾಜಕಾರಣ ಕಣ್ಮರೆಯಾಗಿದ್ದು ಜನಪ್ರತಿನಿಧಿಗಳ ನಡೆನುಡಿಯನ್ನು ಜನರು ಸೂಕ್ಷ್ಮವಾಗಿ ಗಮನಿಸುತ್ತಿದ್ದು ಉತ್ತಮ ಕಾರ್ಯಗಳನ್ನು ಮಾಡಿದವರು ಮಾತ್ರ ಹೆಚ್ಚುದಿನ ಸಾರ್ವಜನಿಕ ಜೀವನದಲ್ಲಿ ಇರಲು ಸಾಧ್ಯ. ಆದ್ದರಿಂದ ಜನರಿಗೆ ಸಹಾಯಕವಾಗುವಂತ ಆರೋಗ್ಯ ಶಿಬಿರದಂತಹ ಕಾರ್ಯಗಳು ಜನರ ಮೆಚ್ಚುಗೆಗಳಿಸಲು ಸಾಧ್ಯವಾಗಿದೆ ಎಂದರು.ಕಾರ್ಜುವಳ್ಳಿ ಹಿರೇಮಠದ ಶ್ರೀ ಸದಾಶಿವಶಿವಚಾರ್ಯ ಸ್ವಾಮೀಜಿ ಮಾತನಾಡಿ, ಜನನ, ಮರಣ ಮಾನವನ ಜೀವನದಲ್ಲಿ ಒಂದು ಪುಸ್ತಕವಿದ್ದಂತೆ. ಈ ಪುಸ್ತಕವನ್ನು ನಾವು ಹೇಗೆ ಬರೆದುಕೊಳ್ಳುತ್ತಿವೆ ಎಂಬುದು ನಮಗೆ ಬಿಟ್ಟಿದ್ದು, ನಮ್ಮ ವರ್ತನೆಗಳಿಂದಲೇ ಸ್ವರ್ಗ, ನರಕಗಳು ನಿಶ್ಚಯವಾಗಲಿದೆ. ಆದ್ದರಿಂದ ನಮ್ಮ ವರ್ತನೆಗಳ ಬಗ್ಗೆ ಹೆಚ್ಚು ಜಾಗರೂಕರಾಗಿರಬೇಕು. ಹೆಚ್ಚೆಚ್ಚು ಕ್ರಿಯಾಶೀಲರಾಗಿದ್ದಾಗ ಸಾಧನೆ ಮಾಡಬಹುದು. ಇದಕ್ಕೆ ಶಾಸಕ ಸಿಮೆಂಟ್ ಮಂಜು ಉದಾಹರಣೆ. ಆದ್ದರಿಂದ ಸೋಮಾರಿತನ ಹೊಡೆದೋಡಿಸಬೇಕು ಎಂದರು. ವೇದಿಕೆಯಲ್ಲಿ ಸಂಕಲಾಪುರಮಠದ ಕಿರಿಯ ಶ್ರೀ ಶಾಂತವೀರ ಮಲ್ಲಿಕಾರ್ಜುನ ಸ್ವಾಮೀಜಿ, ಹಾಸನ ತಣ್ಣೀರುಹಳ್ಳಮಠದ ಶ್ರೀ ವಿಜಯಕುಮಾರ ಸ್ವಾಮೀಜಿ, ಮುಖಂಡರಾದ ಪ್ರತಾಪ್, ವಳಲಹಳ್ಳಿ ಅಶ್ವಥ್, ನೇತ್ರ ಮಂಜುನಾಥ್, ಹಾಸನ ಕಿಮ್ಸ್ ಆಸ್ಪತ್ರೆಯ ನಿರ್ದೇಶಕ ಡಾ. ರಾಜಣ್ಣ ಮುಂತಾದವರಿದ್ದರು.

*ಹೇಳಿಕೆ1

ತಾವು ಕೊಟ್ಟ ಅಧಿಕಾರವನ್ನು ಶಕ್ತಿಮೀರಿ ಒಳ್ಳೇಯ ಕೆಲಸಕ್ಕೆ ಬಳಸಿಕೊಳ್ಳುತ್ತೇನೆ. ನನ್ನಿಂದ ಜನರಿಗೆ ಯಾವುದೇ ದ್ರೋಹವಾಗುವುದಿಲ್ಲ. ನನ್ನ ಕಟ್ಟಕಡೆಯ ಜೀವನದವರೆಗೂ ಕ್ಷೇತ್ರದ ಅಭಿವೃದ್ಧಿಗೆ ಶ್ರಮಿಸುತ್ತೇನೆ.

ಸಿಮೆಂಟ್ ಮಂಜು, ಶಾಸಕ

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಸಿದ್ದು 2028ರವರೆಗೂ ಸಿಎಂ, ಇಳಿಸಲು ಆಗೋಲ್ಲ: ಜಮೀರ್‌
ಫೆ.೮ರಂದು ಶ್ರೀ ರಾಮಲಿಂಗೇಶ್ವರ ಮಠ ಲೋಕಾರ್ಪಣೆ