ಬಸವ ಜಯಂತಿ ಪ್ರಯುಕ್ತ ಗೋಶಾಲೆಯ ದನಕರುಗಳ ಆರೋಗ್ಯ ತಪಾಸಣೆ

KannadaprabhaNewsNetwork |  
Published : Apr 22, 2026, 02:15 AM IST
ಗೋಶಾಲೆಯ ಸಂರಕ್ಷಿತ ದನಕರುಗಳ ಆರೋಗ್ಯ ತಪಾಸಣೆ ನಡೆಸಲಾಯಿತು. | Kannada Prabha

ಸಾರಾಂಶ

ಬಸವ ಜಯಂತಿಯನ್ನು ಹೀಗೂ ಆಚರಿಸಬಹುದು ಎಂಬುದನ್ನು ವೀರಶೈವ ಮಹಾಸಭಾ ವಾಸ್ತವಿಕತೆಗೆ ಹೆಚ್ಚಿನ ಒತ್ತು ನೀಡಿ ಮೂಕ ಪ್ರಾಣಿಗಳ ಆರೋಗ್ಯ ತಪಾಸಣೆ ಅಗತ್ಯ ಚಿಕಿತ್ಸೆಯನ್ನು ನುರಿತ ಪಶು ವೈದ್ಯರುಗಳಿಂದ ಒದಗಿಸಿತು.

ಗದಗ: ಗೋವುಗಳ ಆರೋಗ್ಯ ತಪಾಸಣೆ, ಗೋಶಾಲಾದಲ್ಲಿ ಪೋಷಣೆಗೊಳ್ಳುತ್ತಿರುವ ಸಂರಕ್ಷಿತ ದನಕರುಗಳನ್ನು ನಿರ್ವಹಿಸುವ, ಕಾಳಜಿ ವಹಿಸುವ ಬಗೆ, ಗೋವುಗಳ ಮಹತ್ವ ಕುರಿತು ಜಾಗೃತಿ ಮೂಡಿಸುವ ಕಾರ್ಯಕ್ರಮವನ್ನು ಅಖಿಲ ಭಾರತ ವೀರಶೈವ ಮಹಾಸಭಾ ತಾಲೂಕು ಘಟಕ ಹಮ್ಮಿಕೊಳ್ಳುವ ಮೂಲಕ ಬಸವ ಜಯಂತಿ ಹಾಗೂ ರೇಣುಕಾಚಾರ್ಯ ಜಯಂತಿಯನ್ನು ವೈಚಾರಿಕ ಮತ್ತು ವಿನೂತನ ರೀತಿಯಲ್ಲಿ ಆಚರಿಸಿತು.ಸೋಮವಾರ ಬಸವ ಜಯಂತಿ ಕಾರ್ಯಕ್ರಮವನ್ನು ಸಂಭ್ರಮ, ಸಡಗರದೊಂದಿಗೆ ಆಚರಿಸಲಾಯಿತು. ಆದರೆ ಮೆರವಣಿಗೆ, ಭಾಷಣ, ಘೋಷಣೆ ವೇದಿಕೆಯ ಕಾರ್ಯಕ್ರಮಕ್ಕೆ ಸೀಮಿತಗೊಳ್ಳದೇ ಬಸವ ಜಯಂತಿಯನ್ನು ಹೀಗೂ ಆಚರಿಸಬಹುದು ಎಂಬುದನ್ನು ವೀರಶೈವ ಮಹಾಸಭಾ ವಾಸ್ತವಿಕತೆಗೆ ಹೆಚ್ಚಿನ ಒತ್ತು ನೀಡಿ ಮೂಕ ಪ್ರಾಣಿಗಳ ಆರೋಗ್ಯ ತಪಾಸಣೆ ಅಗತ್ಯ ಚಿಕಿತ್ಸೆಯನ್ನು ನುರಿತ ಪಶು ವೈದ್ಯರುಗಳಿಂದ ಒದಗಿಸಿತು.ಗದುಗಿನ ಪಾಂಜರಪೋಳದ ಮಹಾವೀರ ಗೋಶಾಲಾದಲ್ಲಿ ಏರ್ಪಡಿಸಿದ್ದ ಸರಳ ಸಾಂಕೇತಿಕ ಕಾರ್ಯಕ್ರಮದಲ್ಲಿ ಹಿರಿಯ ಪಶು ವೈದ್ಯ ಡಾ. ಪ್ರಕಾಶ ಜಟ್ಟೆಣ್ಣವರ, ಡಾ. ಎಸ್.ಎಸ್. ಜಿನಗಾ, ಡಾ. ಆರ್.ವೈ. ಗುರಿಕಾರ ಅವರು ಗೋವುಗಳ ಆರೋಗ್ಯ, ಕೈಗೊಳ್ಳಬೇಕಾದ ಮುಂಜಾಗ್ರತಾ ಕ್ರಮ, ಪಶು ಆಹಾರ ಕುರಿತು ಮಾತನಾಡಿ, ಕೋವಿಡ್ ಸಂದರ್ಭದಲ್ಲಿ ಪಶು ಪ್ರಾಣಿಗಳು ಅದರಲ್ಲೂ ಬಿಡಾಡಿ ದನಕರುಗಳು ಆಹಾರ, ನೀರು, ನೆರಳಿಗಾಗಿ ಪರಿತಪಿಸುವಂತಾಗಿದ್ದನ್ನು ವಿವರಿಸಿ ಸಕಲ ಪ್ರಾಣಿ ಪಶುಗಳಿಗೆ ದಯೆ ತೋರಿಸಬೇಕೆಂದರು. ಗೋಶಾಲೆಯಲ್ಲಿರುವ ದನಕರುಗಳ ಆರೋಗ್ಯ ತಪಾಸಣೆ ನಡೆಸಿದರು. ಮುಖ್ಯ ಅತಿಥಿ ಅಖಿಲ ಭಾರತ ವೀರಶೈವ ಮಹಾಸಭಾ ಜಿಲ್ಲಾ ಘಟಕದ ಅಧ್ಯಕ್ಷ ಶರಬಸಪ್ಪ ಗುಡಿಮನಿ, ಪತ್ರಕರ್ತ ಬಸವರಾಜ ದಂಡಿನ, ವೀರಶೈವ ಮಹಾಸಭಾ ತಾಲೂಕು ಘಟಕದ ಅಧ್ಯಕ್ಷೆ ಲತಾ ಮುತ್ತಿನಪೆಂಡಿಮಠ ಮುಂತಾದವರು ಮಾತನಾಡಿದರು. ಗೋಸೇವಾ ಸಮಿತಿಯ ಉಪಾಧ್ಯಕ್ಷ ಪ್ರಕಾಶ ಬಂದಾ, ಮಹಾಸಭಾದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮುರುಘರಾಜೇಂದ್ರ ಬಡ್ನಿ, ಶೈಲೇಶ್ ಬಾಗಮಾರ ಉಪಸ್ಥಿತರಿದ್ದರು.ಎಸ್.ಜಿ. ಹಿರೇಮಠ, ಶೇಡುಸಿಂಗ್ ಜಮಾದಾರ, ವೀರಣ್ಣ ಮಾನೇದ, ಶಿವಕುಮಾರ ಬೇವಿನಮರದ, ಪ್ರಭು ಕಾಬಳ್ಳಿ, ಮೋಹನ ದೊಡ್ಡಕುಂಡಿ, ಶೋಭಾ ಗುಗ್ಗರಿ, ಸಾವಿತ್ರಿ ಹೂಗಾರ, ಸುರೇಶ ಚಿತ್ತರಗಿ, ವಿಜಯಕುಮಾರ ಹಿರೇಮಠ, ರಮೇಶ ಪಿಳ್ಳೆ ಸೇರಿದಂತೆ ಮುಂತಾದವರಿದ್ದರು. ಮಹಾಸಭಾದ ತಾಲೂಕು ಪ್ರಧಾನ ಕಾರ್ಯದರ್ಶಿ ಸಂಗಮೇಶ ಕವಳಿಕಾಯಿ ನಿರೂಪಿಸಿ, ವಂದಿಸಿದರು. ಕಾರ್ಯಕ್ರಮದಲ್ಲಿ ಗಣ್ಯರು, ಮಹಿಳೆಯರು ಹಾಗೂ ಗೋವು ಪ್ರೇಮಿಗಳು ಪಾಲ್ಗೊಂಡಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಸರ್ವ ಜನಾಂಗದ ಏಳ್ಗೆಗೆ ಶ್ರಮಿಸುವ ರಾಜ್ಯ ಸರ್ಕಾರ
ಅಶಿಸ್ತು ಮುಂದುವರೆಸಿದರೆ ಸೂಕ್ತ ಕ್ರಮ