ಕನ್ನಡಪ್ರಭ ವಾರ್ತೆ ರಬಕವಿ-ಬನಹಟ್ಟಿ
ರಬಕವಿಯ ಶ್ರೀನೀಲಕಂಠೇಶ್ವರ ದೇವಸ್ಥಾನದಲ್ಲಿ ೧೯ ದಿನಗಳವರೆಗೆ ನಡೆದ ಯೋಗ, ಧ್ಯಾನ, ಸರಳ ವ್ಯಾಯಾಮ ಶಿಬಿರದ ಸಮಾರೋಪ ಸಮಾರಂಭದಲ್ಲಿ ಶಿಬಿರಾರ್ಥಿಗಳಿಂದ ಸನ್ಮಾನ ಸ್ವೀಕರಿಸಿ ಅವರು ಮಾತನಾಡಿ, ನಾವು ಅಗತ್ಯವಾದ ವಸ್ತುಗಳನ್ನೇನನ್ನಾದರೂ ಖರೀದಿಸಬಹುದು. ಆದರೆ, ಆರೋಗ್ಯ ಖರೀದಿಸಲು ಸಾಧ್ಯವಿಲ್ಲ. ಆರೋಗ್ಯದಿಂದ, ಆನಂದದಿಂದ ಒಳ್ಳೆಯ ಬದುಕು. ಆ ಬದುಕಿಗಾಗಿ ನಿರಂತರ ಹೋರಾಡುತ್ತೇವೆ. ಉತ್ತಮ ಆರೋಗ್ಯವುಳ್ಳವರು ಹೆಚ್ಚಿನ ಕೆಲಸಗಳನ್ನ ಮಾಡುವ ಸಾಮರ್ಥ್ಯ ಹೊಂದಿರುತ್ತಾರೆ ಎಂದರು.
ಕಸಾಪ ಅಧ್ಯಕ್ಷ ಮ.ಕೃ.ಮೇಗಾಡಿ, ಹಿರಿಯರಾದ ಈರಪ್ಪ ಮನ್ಮಿ ಮಾತನಾಡಿ, ಧ್ಯಾನದ ಮಹತ್ವ, ಉಸಿರಾಟ ಕ್ರಿಯೆ, ಉಪಯುಕ್ತ ಆಸನಗಳನ್ನು ತಿಳಿಸಿಕೊಟ್ಟ ಉಮರಾಣಿಯವರಿಗೆ ಅಭಿನಂದಿಸಿದರು.ಭಾಗೀರಥಿ ಕವಟಗೊಪ್ಪ, ಸುಮಾ ಹೊಸಮನಿ, ಮಹಾನಂದ ಬೆಳಗಲಿ, ಮಹಾದೇವಿ ಗುದಿಗೆಪ್ಪಗೋಳ, ಈರಣ್ಣ ಗಣಮುಖಿ ಶಿಬಿರಾರ್ಥಿಗಳು ಈ ಸಂದರ್ಭದಲ್ಲಿ ಮಾತನಾಡಿದರು.ನಿವೃತ್ತ ಶಿಕ್ಷಕಿ ಶ್ರೀದೇವಿ ಪರಮಶೆಟ್ಟಿ ಪ್ರಾಸ್ತಾವಿಕವಾಗಿ ಮಾತನಾಡಿದರು. ವಿಜಯಲಕ್ಷ್ಮಿ ಬೆಳಗಲಿ ಸ್ವಾಗತಿಸಿದರು. ಹಿರಿಯರಾದ ಬಸವರಾಜ ತೇರಣಿ ವಂದಿಸಿದರು. ಕಪಲಬಾತ, ಅನುಲೋಮ ವಿಲೋಮ, ಬಸ್ತಿಕಾ, ಉಸಿರಾಟ ಕ್ರಮ, ಧ್ಯಾನ, ಸರಳ ವ್ಯಾಯಾಮ, ಶವಾಸನ, ಕೃತಜ್ಞತೆ ಸಮರ್ಪಣೆ ಯೋಗದ ಕುರಿತು ಸಂವಾದ, ಪರಸ್ಪರ ಸಮಾಲೋಚನೆ ನಡೆದವು.