- ಹಿರೇಕಲ್ಮಠದಲ್ಲಿ ವಿಶ್ವ ಯೋಗ ದಿನಾಚರಣೆಯಲ್ಲಿ ಶಾಸಕ ಡಿ.ಜಿ.ಶಾಂತನಗೌಡ
ಕನ್ನಡಪ್ರಭ ವಾರ್ತೆ ಹೊನ್ನಾಳಿ
ಜೀವನದಲ್ಲಿ ಯೋಗಭ್ಯಾಸ ಆರೋಗ್ಯಯುತ ಜೀವನಕ್ಕೆ ದಾರಿ ಮಾಡಿಕೊಡುತ್ತದೆ. ಆದರೆ, ಭೋಗ ಅನಾರೋಗ್ಯದಿಂದ ಆಸ್ಪತ್ರೆ ಕಡೆಗೆ ದಾರಿ ಮಾಡುತ್ತದೆ. ಇಂದಿನ ಒತ್ತಡದ ಜೀವನಶೈಲಿಯಲ್ಲಿ ಯೋಗಾಸನ, ಪ್ರಾಣಾಯಾಮಗಳು ಆರೋಗ್ಯ ಸಂರಕ್ಷಣೆಗೆ ಸಹಕಾರಿಯಾಗಿವೆ ಎಂದು ಶಾಸಕ ಡಿ.ಜಿ. ಶಾಂತನಗೌಡ ಹೇಳಿದರು.ಪಟ್ಟಣದ ಹಿರೇಕಲ್ಮಠದಲ್ಲಿ ಶನಿವಾರ ಪತಂಜಲಿ ಯೋಗ ಸಮಿತಿ, ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರೀಯ ವಿಶ್ವವಿದ್ಯಾಲಯ ತಾಲೂಕು ಘಟಕ, ಪತ್ರಕರ್ತರ ಸಂಘದ ಸಹಯೋಗದಲ್ಲಿ ಹಮ್ಮಿಕೊಂಡಿದ್ದ 11ನೇ ಅಂತರ ರಾಷ್ಟ್ರೀಯ ಯೋಗ ದಿನ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. ಯೋಗಕಲೆಯು ಭಾರತದ ಋಷಿಮುನಿಗಳಿಂದ ವರದಾನವಾಗಿ ಬಂದಿದೆ ಎಂದು ಹೇಳಿದರು.
ಅಧ್ಯಕ್ಷತೆ ವಹಿಸಿದ್ದ ಪತಂಜಲಿ ಯೋಗ ಸಮಿತಿ ಅಧ್ಯಕ್ಷ ಪ್ರಕಾಶ್ ಹೆಬ್ಬಾರ್ ಮಾತನಾಡಿ, ಯೋಗ ಭಾರತ ವಿಶ್ವಕ್ಕೆ ನೀಡಿರುವ ಪವಿತ್ರ ಕೊಡುಗೆಯಾಗಿದೆ. ಯೋಗದಿಂದ ಮನುಷ್ಯ ಆರೋಗ್ಯವಾಗಿರುತ್ತಾನೆ ಎಂದು ಹೇಳಿದರು. ಸಿಡಿಪಿಒ ಜ್ಯೋತಿ ಇತರರು ಮಾತನಾಡಿದರು. ಉಪನ್ಯಾಸಕ ಮಂಜುನಾಥ್ ಗೊಲ್ಲರಹಳ್ಳಿ ಉಪನ್ಯಾಸ ನೀಡಿದರು. ಹಿರೇಕಲ್ಮಠ ಮಠದ ಆವರಣದಲ್ಲಿ ನೂರಾರು ಜನರು ಸಾಮೂಹಿಕವಾಗಿ ಯೋಗಾಭ್ಯಾಸ ಪ್ರದರ್ಶನ ಮಾಡಿದರು.
ಬ್ರಹ್ಮಕುಮಾರಿ ಸಂಸ್ಥೆಯ ಜ್ಯೋತಿ ಅಕ್ಕ, ಯೋಗ ಶಿಕ್ಷಕ ಶ್ರೀಕಾಂತ ಕುರ್ಡೇಕರು, ಪತಂಜಲಿ ಸಮಿತಿಯ ರುದ್ರೇಶ್, ರಾಘವೇಂದ್ರ ವೈಶ್ಯರ್, ಜಗದೀಶ್ ಆಚಾರ್, ಸುರೇಶ್ ಕುಂಬಾರ ಚನ್ನೇಶ ಜಕ್ಕಾಳಿ, ದಿಲೀಪ್ ಕುಮಾರ್, ಅರುಣ್ ಕುಮಾರ್, ಎನ್.ಕೆ.ಆಂಜನೇಯ, ನರಸಿಂಹಪ್ಪ ಕೆ.ಚಂದ್ರಪ್ಪ, ಅಂಬಿಕಾ ಪ್ರಕಾಶ್ ಹೆಬ್ಬಾರ, ಮೀನಾ ಗಣೇಶ್, ದಾಕ್ಷಾಯಣಿ, ಶೀಲಾ ಯಶೋಧ, ರವಿಕುಮಾರ್, ಸಚ್ಚಿನ್, ಅನುಷಾ ಗಿರೀಶ್, ಎನ್.ಎಂ. ಸಯ್ಯದ್,ಮುಂತಾದವರು ಭಾಗವಹಿಸಿದ್ದರು.
(ಟಾಪ್ ಕೋಟ್)
- ಎಂ.ಪಿ. ರೇಣುಕಾಚಾರ್ಯ, ಮಾಜಿ ಸಚಿವ.
-21ಎಚ್.ಎಲ್.ಐ1.ಜೆಪಿಜಿ: