ಆರ್ಥಿಕ ಸಂಪತ್ತಿಕ್ಕಿಂತ, ಆರೋಗ್ಯ ಸಂಪತ್ತು ಮುಖ್ಯ

KannadaprabhaNewsNetwork |  
Published : Oct 15, 2025, 02:06 AM IST
ಚಿಕ್ಕಮಗಳೂರು ನಗರದ ಜೀವನಸಂಧ್ಯಾ ವೃದ್ದಾಶ್ರಮದಲ್ಲಿ ಸ್ಪರ್ಶ ಆಸ್ಪತ್ರೆ ಹಾಗೂ ಆರೋಗ್ಯ ಭಾಗ್ಯ ಕನ್ನಡ ಚಾನಲ್‌ನಿಂ ದ ಮಂಗಳವಾರ ಆಯೋಜಿಸಿದ್ಧ ಆರೋಗ್ಯ ತಪಾಸಣೆ ಶಿಬಿರಕ್ಕೆ ಹಿರಿಯ ವಕೀಲ ನಟರಾಜ್ ಚಾಲನೆ ನೀಡಿದರು | Kannada Prabha

ಸಾರಾಂಶ

ಮನುಷ್ಯನಿಗೆ ಆರ್ಥಿಕ ಸಂಪತ್ತಿಕ್ಕಿಂತ, ಆರೋಗ್ಯ ಸಂಪತ್ತು ಅತಿ ಮುಖ್ಯ. ಆರೋಗ್ಯದಲ್ಲಿ ವ್ಯತ್ಯಾಸ ಕಂಡುಬಂದಲ್ಲಿ ಮನೆಮದ್ದಿನಿಂದಲೇ ಸರಿಪಡಿಸಿಕೊಂಡು ಶಾರೀರಿಕವಾಗಿ ಸದೃಢರಾಗಬಹುದು ಎಂದು ಹಿರಿಯ ವಕೀಲ ನಟರಾಜ್ ಹೇಳಿದರು.

ಚಿಕ್ಕಮಗಳೂರು: ಮನುಷ್ಯನಿಗೆ ಆರ್ಥಿಕ ಸಂಪತ್ತಿಕ್ಕಿಂತ, ಆರೋಗ್ಯ ಸಂಪತ್ತು ಅತಿ ಮುಖ್ಯ. ಆರೋಗ್ಯದಲ್ಲಿ ವ್ಯತ್ಯಾಸ ಕಂಡುಬಂದಲ್ಲಿ ಮನೆಮದ್ದಿನಿಂದಲೇ ಸರಿಪಡಿಸಿಕೊಂಡು ಶಾರೀರಿಕವಾಗಿ ಸದೃಢರಾಗಬಹುದು ಎಂದು ಹಿರಿಯ ವಕೀಲ ನಟರಾಜ್ ಹೇಳಿದರು.ನಗರದ ಜೀವನಸಂಧ್ಯಾ ವೃದ್ಧಾಶ್ರಮದಲ್ಲಿ ಸ್ಪರ್ಶ ಆಸ್ಪತ್ರೆ ಹಾಗೂ ಆರೋಗ್ಯ ಭಾಗ್ಯ ಕನ್ನಡ ಚಾನಲ್‌ನಿಂದ ಮಂಗಳವಾರ ಆಯೋಜಿಸಿದ್ಧ ಆರೋಗ್ಯ ತಪಾಸಣೆ ಶಿಬಿರಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.ದೇಹದಲ್ಲಾಗುವ ಸಣ್ಣಪುಟ್ಟ ಅನಾರೋಗ್ಯ ವ್ಯತ್ಯಾಸಗಳಿಗೆ ಮಾನವರು ಮನೆಮದ್ದಿನಿಂದಲೇ ಚಿಕಿತ್ಸೆ ಪಡೆದುಕೊಳ್ಳಬಹುದೆಂಬ ನಿಟ್ಟಿನಲ್ಲಿ ಆರೋಗ್ಯ ಭಾಗ್ಯ ಕನ್ನಡ ಚಾನಲ್ ಹಲವಾರು ವರ್ಷಗಳಿಂದ ಸೇವೆ ಒದಗಿ ಸುತ್ತಿದ್ದು, ಇದರ ಸದ್ಬಳಕೆಯನ್ನು ಸಾರ್ವಜನಿಕರು ಪಡೆದುಕೊಂಡು ಯಶಸ್ವಿಗೊಳಿಸುತ್ತಿರುವುದು ಹೆಮ್ಮೆಯ ಸಂಗತಿ ಎಂದರು.ಮುಪ್ಪಿನ ವಯಸ್ಸಿನಲ್ಲಿ ಹಿರಿಯರು ಹೆಚ್ಚು ಆರೋಗ್ಯದ ಕಡೆ ಗಮನಹರಿಸಬೇಕು. ಜೀರ್ಣಕ್ರಿಯೆಗೆ ಅನುಕೂಲವಾಗುವ ಆಹಾರ ಪದಾರ್ಥಗಳನ್ನು ಸೇವಿಸಬೇಕು. ಜೊತೆಗೆ ಹಣ್ಣುಹಂಪಲು, ತರಕಾರಿಗಳಿಗೆ ಹೆಚ್ಚಿನ ಆದ್ಯತೆ ನೀಡಿದರೆ ಇನ್ನಷ್ಟು ದಿನಗಳು ಆರೋಗ್ಯದಿಂದ ಜೀವಿಸಲು ಸಾಧ್ಯವಾಗಲಿದೆ ಎಂದರು.ಈ ಸಂದರ್ಭದಲ್ಲಿ ಪ್ರೆಸ್‌ಕ್ಲಬ್ ಉಪಾಧ್ಯಕ್ಷ ಎ.ಎನ್.ಮೂರ್ತಿ, ವಕೀಲ ವಿ.ಕೆ.ರಘು, ಆರೋಗ್ಯ ಭಾಗ್ಯ ಕನ್ನಡ ಚಾನಲ್‌ನ ಮುಖ್ಯಸ್ಥ ಶಿವರಾಜ್, ವೃದ್ಧಾಶ್ರಮದ ಮುಖ್ಯವ್ಯವಸ್ಥಾಪಕ ಹರಿಸಿಂಗ್ ಹಾಗೂ ಹಿರಿಯರು, ಸ್ಪರ್ಶ ಆಸ್ಪತ್ರೆ ಸಿಬ್ಬಂದಿಗಳು ಉಪಸ್ಥಿತರಿದ್ದರು.

ಸ್ಪರ್ಶ ಆಸ್ಪತ್ರೆ ಮುಖ್ಯಸ್ಥ ಡಾ.ಚಂದ್ರಶೇಖರ್ ಸರ್ಜಾ ಪ್ರಾಸ್ತಾವಿಕವಾಗಿ ಮಾತನಾಡಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಮರಳು ಮಾಫಿಯಾದಿಂದ ಶಾಸಕಿ ಕರೆಮ್ಮಗೆ ಬೆದರಿಕೆ
ಉಡುಪಿಯ ಕೃಷ್ಣಮಠದಲ್ಲಿ ಇನ್ನು ಭಕ್ತರಿಗೆ ಕಟ್ಟುನಿಟ್ಟಿನ ನಿಯಮ ಜಾರಿ