ಆರೋಗ್ಯವಂತರು ರಕ್ತದಾನ ಮಾಡಿ ಜೀವ ಉಳಿಸಬಹುದು

KannadaprabhaNewsNetwork |  
Published : Jun 29, 2025, 01:33 AM IST
ಹನ್ಯಾಳು ಗ್ರಾಮದಲ್ಲಿ ನಾಡಪ್ರಭು ಕೆಂಪೇಗೌಡರ ಜಯಂತಿ ಪ್ರಯುಕ್ತ ರಕ್ತದಾನ ಶಿಬಿರದಲ್ಲಿ  ಜನರು ರಕ್ತ ನೀಡುತ್ತಿರುವುದು. | Kannada Prabha

ಸಾರಾಂಶ

ಆರೋಗ್ಯವಂತ ವ್ಯಕ್ತಿ ರಕ್ತದಾನ ಮಾಡುವುದರಿಂದ ಜನರ ಜೀವ ಉಳಿಸಬಹುದು ಎಂದು ಜಿಲ್ಲಾ ಪಂಚಾಯತಿ ಮಾಜಿ ಸದಸ್ಯರು ಎಚ್.ಎಸ್. ಶಂಕರ್‌ ತಿಳಿಸಿದರು. ರಾಮನಾಥಪುರ ಹೋಬಳಿ ಶಾಸಕರ ಸ್ವಗ್ರಾಮ ಹನ್ಯಾಳು ಗ್ರಾಮದ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಇಂದು ಕೆಂಪೇಗೌಡರ ಜನ್ಮ ದಿನದ ಪ್ರಯುಕ್ತ ರಕ್ತದಾನ ಶಿಬಿರವನ್ನು ಇಂಡಿಯಾನಾ ಆಸ್ಪತ್ರೆ ವತಿಯಿಂದ ಆಯೋಜಿಸಲಾಗಿತ್ತು. ಹೃದ್ರೋಗ, ಕೀಲುಮೂಳೆ, ಕಣ್ಣು ತಪಾಸಣೆ, ಇ.ಸಿ.ಜಿ. ಬಿ.ಪಿ. ಶುಗರ್ ಮುಂತಾದ ಕಾಯಿಲೆ ಹಾಗೂ ಸುಮಾರು 250 ಕ್ಕೂ ಹೆಚ್ಚು ಜನ ಹೃದಯ ತಪಾಸಣೆ ನಡೆಯಿತು ಹಾಗೂ ಸುಮಾರು 25 ಯೂನಿಟ್ ರಕ್ತದಾನವನ್ನು ಜನರು ನೀಡಿದರು.

ಕನ್ನಡಪ್ರಭ ವಾರ್ತೆ ರಾಮನಾಥಪುರ

ಆರೋಗ್ಯವಂತ ವ್ಯಕ್ತಿ ರಕ್ತದಾನ ಮಾಡುವುದರಿಂದ ಜನರ ಜೀವ ಉಳಿಸಬಹುದು ಎಂದು ಜಿಲ್ಲಾ ಪಂಚಾಯತಿ ಮಾಜಿ ಸದಸ್ಯರು ಎಚ್.ಎಸ್. ಶಂಕರ್‌ ತಿಳಿಸಿದರು.

ರಾಮನಾಥಪುರ ಹೋಬಳಿ ಶಾಸಕರ ಸ್ವಗ್ರಾಮ ಹನ್ಯಾಳು ಗ್ರಾಮದ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಇಂದು ಕೆಂಪೇಗೌಡರ ಜನ್ಮ ದಿನದ ಪ್ರಯುಕ್ತ ರಕ್ತದಾನ ಶಿಬಿರವನ್ನು ಇಂಡಿಯಾನಾ ಆಸ್ಪತ್ರೆ ವತಿಯಿಂದ ಆಯೋಜಿಸಲಾಗಿತ್ತು. ಹೃದ್ರೋಗ, ಕೀಲುಮೂಳೆ, ಕಣ್ಣು ತಪಾಸಣೆ, ಇ.ಸಿ.ಜಿ. ಬಿ.ಪಿ. ಶುಗರ್ ಮುಂತಾದ ಕಾಯಿಲೆ ಹಾಗೂ ಸುಮಾರು 250 ಕ್ಕೂ ಹೆಚ್ಚು ಜನ ಹೃದಯ ತಪಾಸಣೆ ನಡೆಯಿತು ಹಾಗೂ ಸುಮಾರು 25 ಯೂನಿಟ್ ರಕ್ತದಾನವನ್ನು ಜನರು ನೀಡಿದರು. ನಂತರ ಮಾತನಾಡಿದ ಶಂಕರ್‌, ಮನುಷ್ಯ ವೈಜ್ಞಾನಿಕವಾಗಿ ಎಷ್ಟೇ ಪ್ರಗತಿ ಹೊಂದಿದರೂ ರಕ್ತಕ್ಕೆ ಪರ್ಯಾಯ ಅಥವಾ ಬದಲಿಯಾದವನ್ನು ಕಂಡು ಹಿಡಿಯಲು ಸಾಧ್ಯವಾಗಿಲ್ಲ. ಆದ್ದರಿಂದ ರಕ್ತದ ಅವಶ್ಯಕತೆ ಇರುವ ಸಂದರ್ಭದಲ್ಲಿ ಮತ್ತೊಬ್ಬರು ದಾನವಾಗಿ ನೀಡಿದ ರಕ್ತದಿಂದ ಮಾತ್ರ ಕೊರತೆಯನ್ನು ನೀಗಿಸಬಹುದಾಗಿದೆ ಎಂದು ಶಂಕರ್‌ ತಿಳಿಸಿದರು.

ಈ ಸಂದರ್ಭದಲ್ಲಿ ಕೀಲುಮೂಳೆ ತಜ್ಞರು ಡಾ. ನಮೀಮ್ ಸಿದ್ದಿಕ್, ಹೃದ್ರೋಗ ತಜ್ಞರು ಡಾ. ನಿರೂಪ್, ಫಿಜೀಷಯನ್ ತಜ್ಞರು ಡಾ. ಭಾನುಪ್ರಕಾಶ್, ರಕ್ತನಿಧಿ ಘಟಕದ ಪ್ರಕಾಶ್, ಸಮಾಜ ಸೇವಕರು ಅಶೋಕ್, ಗ್ರಾಮ ಪಂಚಾಯತಿ ಮಾಜಿ ಅಧ್ಯಕ್ಷರು ಗುಂಡಣ್ಣ, ನಿವೃತ್ತ ಮುಖ್ಯ ಶಿಕ್ಷಕರು ಕಾಳಬೋಯಿ, ಕೆಂಪೇಗೌಡ ಯುವಕರ ಸಂಘದ ಸದಸ್ಯರು, ಸುಬ್ಬಲಕ್ಷ್ಮಿ, ಪುರುಷೋತ್ತಮ, ಮುಖ್ಯ ಶಿಕ್ಷಕರು ರವಿಕುಮಾರ್, ಶಿಕ್ಷಕ ಸಂತೋಷ, ರಾಮಯ್ಯ ಮುಂತಾದವರು ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಸಹಕಾರದಿಂದ ಸಮೃದ್ಧಿ - ಸಹಕಾರ ಭಾರತಿಯಿಂದ ಸಹಕಾರ ಕ್ಷೇತ್ರದ ಬಲವರ್ಧನೆ
ದ್ವೇಷಭಾಷಣ ಬಿಲ್‌ಗೆ ಸಹಿ ಬೇಡ : ಗೌರ್ನರ್‌ಗೆ ಬಿಜೆಪಿ