ತರೀಕೆರೆ; ವೋಲ್ವೋ ಗ್ರೂಪ್ ಮತ್ತು ನಾರಾಯಣ ಹೆಲ್ತ್ ಸಹಯೋಗದಲ್ಲಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸೇವೆಗಳು ಕರ್ನಾಟಕ ಸರ್ಕಾರದ ಬೆಂಬಲದೊಂದಿಗೆ ಪಟ್ಟಣದ ಬಯಲು ರಂಗ ಮಂದಿರದಲ್ಲಿ ವೆಲ್‌ನೆಸ್ ಆನ್ ವ್ಹೀಲ್ಸ್ ಸಂಚಾರಿ ವೈದ್ಯಕೀಯ ಶಿಬಿರ, ಉಚಿತ ಹೃದಯ ಮತ್ತು ಕ್ಯಾನ್ಸರ್ ತಪಾಸಣೆ ಕಾರ್ಯಕ್ರಮ ಏರ್ಪಡಿಸಲಾಗಿತ್ತು. ಶಿಬಿರದಲ್ಲಿ ಉಚಿತ ಇಸಿಜಿ, ಎಕೋ, ಎಕ್ಸ್‌ರೇ, ಮೆಮೋಗ್ರಫಿ ಕಾಲ್ಪೋಸ್ಕೂಪಿ ಮತ್ತು ವೈದ್ಯರ ಸಮಾಲೋಚನೆಯನ್ನು ತಾಲೂಕು ಆರೋಗ್ಯಾಧಿಕಾರಿಗಳು ಡಾ. ಚಂದ್ರಶೇಖರ್ ಬಿ. ಜಿ. ಹಸಿರು ಬಾವುಟ ಹಾರಿಸುವ ಮೂಲಕ ಚಾಲನೆಗೊಳಿಸಿದರು. ತಾಲೂಕು ಪಂಚಾಯಿತಿ ಕಾರ್ಯನಿರ್ವಾಹಣಾಧಿಕಾರಿ ಡಾ.ದೇವೇಂದ್ರಪ್ಪ, ಕಾರ್ಯಕ್ರಮದಲ್ಲಿ ವ್ಯವಸ್ಥಾಪಕರು ದೇವರಾಜು, ಆರೋಗ್ಯ ಇಲಾಖೆ ಶಿವಪ್ಪ, ರಾಜು, ಪ್ರಶಾಂತ್, ಹರ್ಷವರ್ಧನ್ ತಾಲೂಕು ಪಂಚಾಯಿತಿ ಸಿಬ್ಬಂದಿ, ಸಂಚಾರಿ ಸಮುದಾಯ ಆರೋಗ್ಯ ಕೇಂದ್ರದ ಸಿಬ್ಬಂದಿ ಭಾಗವಹಿಸಿದ್ದರು, ಆರೋಗ್ಯ ತಪಾಸಣೆಗೆ ನೋಂದಾಯಿಸಿದವರ ಸಂಖ್ಯೆ 80 ಇವರಲ್ಲಿ ಇಸಿಜಿ-60, ಎಕೋ 20, ಮೆಮೋಗ್ರಫಿ-10, ರಕ್ತ ತಪಾಸಣೆ 30 ಎಕ್ಸ್‌ರೇ-1 ಕಾಲ್ಪೋಸ್ಕೂಪಿ-೩ ಇಷ್ಟು ಫಲಾನುಭವಿಗಳು ತಪಾಸಣೆಗೊಳಪಟ್ಟರು ಎಂದು ವ್ಯವಸ್ಥಾಪಕರು ತಿಳಿಸಿದರು.
ತರೀಕೆರೆಯಲ್ಲಿ ನಡೆದ ವೆಲ್‌ನೆಸ್ ಆನ್ ವೀಲ್ಸ್ ಸಂಚಾರಿ ವೈದ್ಯಕೀಯ ಶಿಬಿರ, ಉಚಿತ ಹೃದಯ ಮತ್ತು ಕ್ಯಾನ್ಸರ್ ತಪಾಸಣೆ ಕಾರ್ಯಕ್ರಮಕ್ಕೆ ತಾಲೂಕು ಆರೋಗ್ಯಾಧಿಕಾರಿ ಡಾ.ಬಿ.ಜಿ.ಚಂದ್ರಶೇಖರ್ ಚಾಲನೆ ನೀಡಿದರು.