ಕಲಬುರಗಿ ಜಿಲ್ಲಾದ್ಯಂತ ಹುಬ್ಬ ಮಳೆ ಹಬ್ಬ

KannadaprabhaNewsNetwork |  
Published : Sep 01, 2024, 01:46 AM IST
ಫೋಟೋ- ವಾಡಿ ರೇನ್‌ಫಾಲ್‌ವಾಡಿಯಲ್ಲಿ ಶುಕ್ರವಾರ ರಾತ್ರಿಯಿಂದ ಶುರುವಾಗಿರುವ ಮಳೆಗೆ ಅಲ್ಲಲ್ಲಿ ನೀರು ನಿಂತು ಜನಜೀವನ ಅಸ್ತವ್ಯಸ್ತಗೊಂಡಿದೆ. | Kannada Prabha

ಸಾರಾಂಶ

ವಾಡಿ ಪಟ್ಟಣದಲ್ಲಿ ನಿನ್ನೆ ರಾತ್ರಿಯಿಂದ ಧಾರಾಕಾರ ಮಳೆಗೆ ಜನಜೀವನ ಅಸ್ತವ್ಯಸ್ತವಾಗಿದೆ. ಶುಕ್ರವಾರ ವಾರ ದಿನ ಪೂರ್ತಿ ಮೋಡ ಕವಿದ ವಾತಾವರಣದಿಂದ ಕೊಡಿತ್ತು. ರಾತ್ರಿ ಒಂಬತ್ತು ಗಂಟೆಯಿಂದ ಮಳೆಯ ಆರ್ಭಟ ಶುರುವಗಿದ್ದು ಶನಿವಾರವೂ ಮುಂದುವರಿದಿದೆ.

ಕನ್ನಡಪ್ರಭ ವಾರ್ತೆ ಕಲಬುರಗಿ

ಮಗಿ ಮಳೆ ಒಂದೇ ಸವನೆ ಸುರಿದು ಇನ್ನೇನು ಇಂದಿನಿಂದ ಹುಬ್ಬ ಮಳೆ ಶುರುವಾಗಿದ್ದು ಈ ಮಳೆಯಾದರೂ ತುಸು ವಿರಾಮ ಕೊಡಲಿ ಎಂದು ಬಯಸಿದ್ದ ತೊಗರಿ ರೈತರ ನಿರೀಕ್ಷೆ, ಬಯಕೆಗಳು ಹುಸಿಯಾಗಿವೆ. ಹುಬ್ಬ ಮಳೆ ಮೊದಲ ದಿನವೇ ಭರ್ಜರಿಯಗಿ ಸುರಿಯಲರಂಭಿಸಿದೆ.

ಶುಕ್ರವಾರ ರಾತ್ರಿಯಿಂದಲೇ ಜಿಲ್ಲಾದ್ಯಂತ ಹಲವೆಡೆ ಹುಬ್ಬ ಮಳೆ ಸುರಿಯುತ್ತಿದೆ. ಶನಿವಾರ ಬೆಳಗಿನ ಜಾವವೂ ಮಳೆ ಸುರಿಯೋದು ಮುಂದುವರಿದಿದೆ. ವಾಡಿ, ಕಲಬುರಗಿ, ಯಡ್ರಾಮಿ, ಜೇವರ್ಗಿ, ಚಿತ್ತಾಪುರ, ಕಾಳಗಿ ಇಲ್ಲಲ್ಲಾ ಶುಕ್ರವಾರ ರಾತ್ರಿಯಿಂದಲೇ ಮಳೆ ಆರಂಭವಾಗಿದ್ದು ನಿರಂತರ ಸುರಿಯುತ್ತಿದೆ.

ವಾಡಿ ಪಟ್ಟಣದಲ್ಲಿ ನಿನ್ನೆ ರಾತ್ರಿಯಿಂದ ಧಾರಾಕಾರ ಮಳೆಗೆ ಜನಜೀವನ ಅಸ್ತವ್ಯಸ್ತವಾಗಿದೆ. ಶುಕ್ರವಾರ ವಾರ ದಿನ ಪೂರ್ತಿ ಮೋಡ ಕವಿದ ವಾತಾವರಣದಿಂದ ಕೊಡಿತ್ತು. ರಾತ್ರಿ ಒಂಬತ್ತು ಗಂಟೆಯಿಂದ ಮಳೆಯ ಆರ್ಭಟ ಶುರುವಗಿದ್ದು ಶನಿವಾರವೂ ಮುಂದುವರಿದಿದೆ.

ಪಟ್ಟಣದ ಕೊಲಿ ಕಾರ್ಮಿಕರರು ಮಳೆಯಲ್ಲಿಯೇ ತಮ್ಮ ಕಾರ್ಯ ದಲಿ ತೊಡಗಿದ್ದು. ಇದುವರೆಗೂ ಈ ಬಾಗದಲ್ಲಿ ಮಳೆ ತುಸು ಕೊರತೆಯಾಗಿತ್ತು, ಈ ಮಳೆಯಿಂದಾಗಿ ರೈತರ ಮನದಲ್ಲಿ ಸಂತಸ ಮನೆಮಾಡಿದೆ. ರಸ್ತೆ ತುಂಬಾ ಮಳೆ ನೀರು ಜೊತೆಗೆ ಚರಂಡಿ ನೀರು ಸೇರಿದ್ದು. ಬಡಾವಣೆಯ ಕೆಲವು ಮನೆಗಳಿಗೆ ನುಗ್ಗಿರುವುದರಿಂದ ನಿವಾಸಿಗಳು ತೊಂದರೆ ಅನುಭವಿಸುತ್ತಿದ್ದಾರೆ.

ನಿನ್ನೆ ರಾತ್ರಿಯಿಂದ ಸತತವಾಗಿ ಸೇಡಂ ತಾಲೂಕಿನಲ್ಲಿ ಜಿಟಿ ಜಿಟಿ ಮಳೆ ಸುರಿದಿದೆ. ಶನಿವಾರವೂ ಮಳೆ ಇಲ್ಲಿ ಮುಂದುವರಿದಿದೆ. ನಿನ್ನೆ ರಾತ್ರಿ ಒಂದು ಗಂಟೆ ಕಾಲ ಯಡ್ರಾಮಿ ತಾಲೂಕಿನಲ್ಲಿ ಮಳೆ ಆಗಿದೆ. ಇದರಿಂದ ರೈತರು ಖುಷಿಯಲ್ಲಿದ್ದಾರೆ. ಶನಿವಾರ ಯಡ್ರಾಮಿಯ ಹಲವು ಭಾಗಗಳಲ್ಲಿ ಮೋಡ ಕವಿತ ವಾತಾವರಣ ಕಂಡಿದ್ದು ಸಂಜೆಯೊಳಗೆ ಮಳೆ ಸುರಿಯುವ ಲಕ್ಷಣಗಳಿವೆ.

ಅಫಜಲ್ಪುರ, ಆಳಂದ, ಕಲಬುರಗಿ, ಜೇನರ್ಗಿ, ಸೇಡಂ ಕೆಲವು ಭಾಗಗಳಲ್ಲಿ ತೊಗರಿಯಲ್ಲಿನ ಕಸ ತೆಗೆದು ಹಸನು ಮಾಡೋದು, ಹೆಸರು ರಾಶಿಗೂ ಮಳೆ ಅವಕಾಶ ನೀಡದಂತೆ ಸುರಿಯುತ್ತಿದೆ. ಹೀಗಾಗಿ ರೈತರು ಮಳೆ ತುಸು ವಿರಾಮ ಕೊಡಲಿ ಎಂದು ಕಾಯುವಂತಾಗಿದೆ. ತೊಗರಿಗೆ ಕಾಂಡ ಮಚ್ಚೆ ರೋಗ ಕಾಡುತತಿದ್ದು ರೈತರು ಔಷಧಿ ಸಿಂಪರಣೆಗೆ ಮೊರೆ ಹೋಗಿದ್ದಾರೆ.

ವರದಿಗಳ ಪ್ರಕಾರ ಅಫಜಲ್ಪುರದಲ್ಲಿ ಶುಕ್ರವಾರ ಮಳೆರಾಯ ವಿರಾಮ ನೀಡಿದ್ದಾನೆ. ಇಲ್ಲಿನ ಯಾವ ಹೋಬಳಿಯಲ್ಲೂ ಮಳೆ ಸುರಿದಿಲ್ಲ. ಇನ್ನು ಚಿತ್ತಾಪುರದ ನಾಲವಾರದಲ್ಲಿ 47, ಗುಂಡಗುರ್ತಿ, ದಂಡೋತಿಯಲ್ಲಿ ತಲಾ 15 ಮಿಮೀ ಮಳೆಯಾಗಿದೆ.

ಸೇಡಂ ತಾಲೂಕಿನಾದ್ಯಂತ ಶುಕ್ರವಾರ ರಾತ್ರಿ ಬಿರುಸಿನ ಮಳೆಯಗಿದೆ. ಇಲ್ಲಿನ ಸೇಡಂ- 52, ಆಡಕಿ- 58, ಮುಧೋಳ- 69, ಕೋಡ್ಲಾ, 62, ಕೋಲಕುಂದಾ 89 ಮಿಮೀ ಮಳೆ ಸುರಿದಿದೆ. ಕಾಳಗಿ ತಾಲೂಕಿನಲ್ಲಿ ಸರಾಸರಿ 50 ಮಮೀ ಮಳೆ ಇಲ್ಲಿನ ಕಾಳಗಿ, ಕೋಡ್ಲಿ, ಹೇರೂ ರ್‌ ಹೋಬಳಿಗಳಲ್ಲಿ ಸುರಿದಿದೆ. ಚಿಂಚೋಳಿ.ಯ ಕೊಂಚಾವರಮ್‌ 60 ಮಿಮೀ, ಉಳಿದಂತೆ ನಿಡಗುಂದಾ, ಐನಾಪೂರ, ಕೋಡ್ಲಿ ಇಲ್ಲೆಲ್ಲಾ ರಾಸರಿ 45 ಮಿಮೀ ಮಳೆ ಸುರಿದಿದೆ.

ಯಡ್ರಾಮಿಯಲ್ಲಿ 23 ಮಿಮೀ, ಜೇವರ್ಗಿ ಹಾಗೂ ಆಂದೋಲಾದಲ್ಲಿ ತಲಾ 30 ಕ್ಕೂ ಹೆಚ್ಚು ಮೀಮಿ ಮಳೆಯಾಗಿದೆ. ಹುಬ್ಬ ಮಳೆ ಮೊದಲ ದಿನವೇ ಜಿಲ್ಲಾದ್ಯಂತ ವ್ಯಾಪ್ಸಿ ಹಲವೆಡೆ ಕಾಡುತ್ತಿದ್ದ ಮಳೆ ಕೊತೆ ನೀಗಿಸಿದೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಹುಬ್ಬಳ್ಳಿ ವಿವಸ್ತ್ರ ಕೇಸ್‌ನಲ್ಲಿ ತಲೆದಂಡಕ್ಕೆ ಬಿಜೆಪಿ ಗಡುವು
ಶೀಘ್ರ ‘ಬಾಕಿ ಲಕ್ಷ್ಮಿ’ ಬಿಡುಗಡೆ - ಬಿಪಿಎಲ್‌ ರದ್ದಾದವರಿಗೆ ಇಲ್ಲ ಗೃಹಲಕ್ಷ್ಮಿ ಹಣ