ಪುತ್ತೂರು ತಾಲೂಕಿನಾದ್ಯಂತೆ ಬಿರುಸಿನ ಮಳೆ, ಕೃತಕ ಪ್ರವಾಹ

KannadaprabhaNewsNetwork | Published : Jun 4, 2024 12:31 AM

ಸಾರಾಂಶ

ಪುತ್ತೂರು ತಾಲೂಕಿನಾದ್ಯಂತ ಸೋಮವಾರ ಸಂಜೆ ಗುಡುಗು ಸಹಿತ ಬಿರುಸಿನ ಮಳೆಯಾಗಿದೆ. ಸಂಜೆ ಸುಮಾರು ೩.೩೦ಕ್ಕೆ ಆರಂಭಗೊಂಡ ಮಳೆಯು ಸಂಜೆ ೫ ಗಂಟೆ ತನಕ ಜೋರಾಗಿ ಸುರಿದಿದೆ. ಮಳೆಗೆ ಪುತ್ತೂರು ನಗರದ ರಸ್ತೆಗಳೆಲ್ಲ ಕೃತಕ ಪ್ರವಾಹದಿಂದ ಆವೃತವಾಗಿತ್ತು. ನಗರದ ಕೋರ್ಟು ರಸ್ತೆಯಲ್ಲಿರುವ ವಿಜಿತ್ ಜ್ಯುವೆಲರ್ಸ್ ಸಹಿತ ಇನ್ನಿತರ ಅಂಗಡಿಗಳಿಗೆ ನೀರು ನುಗ್ಗಿತು.

ಕನ್ನಡಪ್ರಭ ವಾರ್ತೆ ಪುತ್ತೂರು

ಮುಂಗಾರು ಜಿಲ್ಲೆಗೆ ಕಾಲಿಡುತ್ತಿದ್ದಂತೆಯೇ ಪುತ್ತೂರು ತಾಲೂಕಿನಾದ್ಯಂತ ಸೋಮವಾರ ಸಂಜೆ ಗುಡುಗು ಸಹಿತ ಬಿರುಸಿನ ಮಳೆಯಾಗಿದೆ. ಸಂಜೆ ಸುಮಾರು ೩.೩೦ಕ್ಕೆ ಆರಂಭಗೊಂಡ ಮಳೆಯು ಸಂಜೆ ೫ ಗಂಟೆ ತನಕ ಜೋರಾಗಿ ಸುರಿದಿದೆ.

ಮಳೆಗೆ ಪುತ್ತೂರು ನಗರದ ರಸ್ತೆಗಳೆಲ್ಲ ಕೃತಕ ಪ್ರವಾಹದಿಂದ ಆವೃತವಾಗಿತ್ತು. ನಗರದ ಕೋರ್ಟು ರಸ್ತೆಯಲ್ಲಿರುವ ವಿಜಿತ್ ಜ್ಯುವೆಲರ್ಸ್ ಸಹಿತ ಇನ್ನಿತರ ಅಂಗಡಿಗಳಿಗೆ ನೀರು ನುಗ್ಗಿದೆ. ದರ್ಬೆ ಪರಿಸರಲ್ಲಿ ರಸ್ತೆಯೆಲ್ಲಾ ನೀರಿನಿಂದ ಆವೃತವಾಗಿ ನದಿಯಂತಾಗಿತ್ತು. ಇಲ್ಲಿನ ಹಲವು ಅಂಗಡಿಗಳಿಗೆ ನೀರು ನುಗ್ಗಿದೆ. ಸಿಡಿಲು ಮಿಂಚಿನ ಕಾರಣದಿಂದಾಗಿ ಸಂಜೆಯಿಂದ ರಾತ್ರಿಯ ತನಕ ವಿದ್ಯುತ್ ಸಂಪರ್ಕ ಸ್ಥಗಿತಗೊಳಿಸಲಾಗಿತ್ತು.ಭಾರಿ ಮಳೆ, ಸಿಡಿಲು: ಮೂವರಿಗೆ ಗಾಯಕನ್ನಡಪ್ರಭ ವಾರ್ತೆ ಬಂಟ್ವಾಳತಾಲೂಕಿನಲ್ಲಿ ಸೋಮವಾರ ಅಪರಾಹ್ನ ೩ ಗಂಟೆಯಿಂದ ಸುರಿದ ವ್ಯಾಪಕ ಮಳೆಗೆ ಅನೇಕ ಕಡೆ ಹಾನಿ ಸಂಭವಿಸಿದ್ದು, ಕೊಡಂಬೆಟ್ಟು ಗ್ರಾಮದಲ್ಲಿತೋಟದಲ್ಲಿ ಹುಲ್ಲು ಕೊಯ್ಯಲು ಹೋಗಿದ್ದ ಮೂವರು ಮಹಿಳೆಯರು ಸಿಡಿಲು ಬಡಿದ ಗಾಯಗೊಂಡಿದ್ದಾರೆ. ಇಲ್ಲಿನ ಸುಬ್ಬೊಟ್ಟು ನಿವಾಸಿಯಾದ ಅನಿತಾ ಪೂಜಾರಿ (೩೮) ಮತ್ತು ರಾಮಯ್ಯ ಗುರಿ ನಿವಾಸಿ ಸಹೋದರಿಯರಾದ ಲೀಲಾವತಿ (೩೨) ಹಾಗೂ ಮೋಹಿನಿ(೩೦) ಗಾಯಗೊಂಡವರು. ಇವರು ಸಹಿತ ಒಟ್ಟು ಏಳು ಮಂದಿ ಮಹಿಳೆಯರು ತೋಟದಲ್ಲಿ ಹುಲ್ಲು ಕೊಯ್ಯುತ್ತಿದ್ದ ವೇಳೆ ಸಿಡಿಲು ಬಡಿಯಿತು. ಮೂವರಿಗೆ ಗಾಯಗಳಾಗಿದೆ. ತಕ್ಷಣವೇ ಇವರನ್ನು ೧೦೮ ಅಂಬ್ಯುಲೆನ್ಸ್‌ ನೆರವಿನಲ್ಲಿ ಬಂಟ್ವಾಳ ತಾಲೂಕು ಆಸ್ಪತ್ರೆಗೆ ಕರೆತಂದು, ಹೆಚ್ಚಿನ ಚಿಕಿತ್ಸೆಗೆ ಮಂಗಳೂರು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಮೂವರೂ ಚೇತರಿಸಿಕೊಳ್ಳುತ್ತಿದ್ದಾರೆ ಎಂದು ತಿಳಿದುಬಂದಿದೆ. ಉಳಿದಂತೆ ಇರ್ವತ್ತೂರು ಗ್ರಾಮದ ಕುಲಾಲ್ ಎಂಬಲ್ಲಿರುವ ಜೈ ಲಕ್ಷ್ಮಿ ಅವರ ಅಡಿಕೆ ತೋಟ ಹಾಗೂ ತೆಂಗಿನ ಮರಗಳಿಗೆ ಗಾಳಿ ಮಳೆಯಿದ ಹಾನಿಯಾಗಿದೆ. ಇದೇ ಗ್ರಾಮದ ಪ್ರೇಮಲತಾ ಎಂಬವರ ವಾಸ್ತವ್ಯದ ಮನೆಗೆ ತೆಂಗಿನ ಮರಬಿದ್ದು ಹಾನಿ ಸಂಭವಿಸಿದೆ.ವಾಮದಪದವು ಅಜ್ಜಿಬೆಟ್ಟು ಗ್ರಾಮದ ಪಾಂಗಲ್ಪಾಡಿ ನಿವಾಸಿಗಳಾದ ಶೋಭಾ ಹಾಗೂ ಅಪ್ಪಿ ಎಂಬವರ ಮನೆಗಳಿಗೆ ಸಿಡಿಲು ಬಡಿದು ಹಾನಿಯಾಗಿದೆ. ಎರಡೂ ಮನೆಗಳಮನೆಯ ಎಲೆಕ್ಟ್ರಾನಿಕ್ ಉಪಕರಣಗಳು, ವಿದ್ಯುತ್ ಸ್ವಿಚ್ ಹಾಗೂ ವಿದ್ಯುತ್ ವಯರಿಂಗ್ ಗಳಿಗೆ ಹಾನಿಯಾಗಿದ್ದು ಅಪಾರ ನಷ್ಟವಾಗಿದೆ. ಕಂದಾಯ ಇಲಾಖೆ ವತಿಯಿಂದ ತುರ್ತು ಕ್ರಮ ಕೈಗೊಳ್ಳಲಾಗಿದೆ ಎಂದು ತಹಸೀಲ್ದಾರ್‌ ಕಚೇರಿ ಪ್ರಕಟಣೆ ತಿಳಿಸಿದೆ.

Share this article