ಭಾರೀ ಮಳೆ ಮನೆಗೋಡೆ ಕುಸಿತ; ದೇಗುಲಕ್ಕೆ ನುಗ್ಗಿದ ನೀರು

KannadaprabhaNewsNetwork |  
Published : Oct 22, 2024, 12:04 AM IST
21ಕೆಎಂಎನ್ ಡಿ16 | Kannada Prabha

ಸಾರಾಂಶ

ಮಳವಳ್ಳಿ ಪಟ್ಟಣದ ಹೊರಕೋಟೆ ಬಳಿಯ ಭಾಗ್ಯಮ್ಮ, ಸರೋಜಮ್ಮ, ಶಿವಕುಮಾರ್ ಅವರ ಮನೆ ಸಂಪೂರ್ಣ ಕುಸಿದುಬಿದ್ದಿದೆ. ಆದರೆ, ಯಾವುದೇ ಪ್ರಾಣಾಪಾಯ ಸಂಭವಿಸಲಿಲ್ಲ. ಸರೋಜಮ್ಮ ಮಾತನಾಡಿ, ಕೂಲಿ ಮಾಡಿ ಜೀವನ ಸಾಗಿಸುವ ನಮಗೆ ಭಾರೀ ಮಳೆಯಿಂದ ಮನೆ ಕುಸಿದು ಬಿದ್ದಿರುವುದು ದಾರಿ ಕಾಣದಂತಾಗಿದೆ.

ಕನ್ನಡಪ್ರಭ ವಾರ್ತೆ ಮಳವಳ್ಳಿ

ಭಾರೀ ಮಳೆಯಿಂದ ಮನೆ ಗೋಡೆ ಕುಸಿದು, ದೇವಸ್ಥಾನಕ್ಕೆ ನೀರು ನುಗ್ಗಿರುವ ಘಟನೆ ಕಳೆದ ಭಾನುವಾರ ರಾತ್ರಿ ಪಟ್ಟಣದಲ್ಲಿ ನಡೆದಿದೆ.

ಪಟ್ಟಣದ ಹೊರಕೋಟೆ ಬಳಿಯ ಭಾಗ್ಯಮ್ಮ, ಸರೋಜಮ್ಮ, ಶಿವಕುಮಾರ್ ಅವರ ಮನೆ ಸಂಪೂರ್ಣ ಕುಸಿದುಬಿದ್ದಿದೆ. ಆದರೆ, ಯಾವುದೇ ಪ್ರಾಣಾಪಾಯ ಸಂಭವಿಸಲಿಲ್ಲ. ಸರೋಜಮ್ಮ ಮಾತನಾಡಿ, ಕೂಲಿ ಮಾಡಿ ಜೀವನ ಸಾಗಿಸುವ ನಮಗೆ ಭಾರೀ ಮಳೆಯಿಂದ ಮನೆ ಕುಸಿದು ಬಿದ್ದಿರುವುದು ದಾರಿ ಕಾಣದಂತಾಗಿದೆ. ಸರ್ಕಾರ ಕೂಡಲೇ ಪರಿಹಾರ ನೀಡಬೇಕೆಂದು ಒತ್ತಾಯಿಸಿದರು.

ಸ್ಥಳಕ್ಕೆ ರಾಜಸ್ವನಿರೀಕ್ಷಕ ಚೇತನ್ ಹಾಗೂ ಪುರಸಭೆ ಅಧಿಕಾರಿಗಳು ಭೇಟಿ ನೀಡಿ ಸರ್ಕಾರಕ್ಕೆ ವರದಿ ಸಲ್ಲಿಸುವುದಾಗಿ ಹೇಳಿದರು.

ಮತ್ತೊಂದೆಡೆ ಪಟ್ಟಣದ ಕನಕಪುರ ರಸ್ತೆಯ ನಿಡಘಟ್ಟ ಗ್ರಾಮಕ್ಕೆ ಹೋಗುವ ರಸ್ತೆ ಬದಿಯಲ್ಲಿ ಶನೇಶ್ವರ ದೇವಸ್ಥಾನಕ್ಕೆ ನೀರು ನುಗ್ಗಿದ ಪರಿಣಾಮ ಹಲವು ತೊಂದರೆಯಾಗಿವೆ.ಪುರಸಭೆ ಮಾಜಿ ಅಧ್ಯಕ್ಷ ಎಂ.ಎ.ಚಿಕ್ಕರಾಜು ಮಾತನಾಡಿ, ಕನಕಪುರ ಮಳವಳ್ಳಿ ರಾಷ್ಟ್ರೀಯ ಹೆದ್ದಾರಿ ಅವೈಜ್ಞಾನಿಕ ಕಾಮಗಾರಿಯಿಂದ ದೇವಸ್ಥಾನಕ್ಕೆ ನೀರು ನುಗ್ಗಿದೆ. ಕೂಡಲೇ ಸಂಬಂಧಪಟ್ಟ ಅಧಿಕಾರಿಗಳು ನೀರನ್ನು ತೆರವುಗೊಳಿಸಿ ಇಂತಹ ಘಟನೆ ಮರುಕಲಿಸದಂತೆ ಎಚ್ಚರವಹಿಸಬೇಕೆಂದು ಆಗ್ರಹಿದ್ದಾರೆ.

ಮಾರ್ಕೋನಹಳ್ಳಿ ಜಲಾಶಯ ಭರ್ತಿ, ಶಿಂಷಾ ನದಿಗೆ ಹೆಚ್ಚುವರಿ ನೀರು

ಕನ್ನಡಪ್ರಭ ವಾರ್ತೆ ಮಂಡ್ಯಮಾರ್ಕೋನಹಳ್ಳಿ ಜಲಾಶಯ ವ್ಯಾಪ್ತಿಯಲ್ಲಿ ಹೆಚ್ಚು ಮಳೆ ಆಗುತ್ತಿದ್ದು, ಜಲಾಶಯ ಸಂಪೂರ್ಣ ಭರ್ತಿಯಾಗಿದೆ. ಜಲಾಶಯದ ಒಳಹರಿವು ಗಣನೀಯ ಪ್ರಮಾಣದಲ್ಲಿ ಏರಿಕೆಯಾಗುತ್ತಿರುವುದರಿಂದ ಯಾವುದೇ ಸಮಯದಲ್ಲಿ ಜಲಾಶಯದಿಂದ ಶಿಂಷಾ ನದಿಗೆ ನೀರನ್ನು ಹರಿಸುವ ಸಾಧ್ಯತೆ ಇದೆ.

ಒಳಹರಿವಿಗೆ ತಕ್ಕಂತೆ ಜಲಾಶಯದಿಂದ ನೀರನ್ನು ಹೊರಬಿಡಲಾಗುವುದು. ಆದ್ದರಿಂದ ಮಾರ್ಕೋನಹಳ್ಳಿ ಜಲಾಶಯದ ಕೆಳಭಾಗ ಹಾಗೂ ನದಿ ಪಾತ್ರದ ಕುಣಿಗಲ್ ತಾಲೂಕಿನ ಹಳ್ಳಿಗಳಾದ ಮಾರ್ಕೋನಹಳ್ಳಿ, ಕಾಡಶೆಟ್ಟಿಹಳ್ಳಿ, ಬಿಸಿನೆಲೆ, ತೊರೆಹಳ್ಳಿ, ಶಾನುಭಾಗೋನಹಳ್ಳಿ, ಕಿರಂಗೂರು, ಪಡುವಗೆರೆ, ಬೆಟ್ಟಹಳ್ಳಿ, ದೊಡ್ಡಕಲ್ಲಹಳ್ಳಿ, ವಳಗೆರಪುರ, 14ನೇ ಮೈಲಿ ಬಂಗಲಿ, ಚಂದನಹಳ್ಳಿ, ಅಂಚಿಪುರ, ಕೀಲಾರ. ಉಂಗ್ರ, ತೊರೆಬೊಮ್ಮನಹಳ್ಳಿ, ಕೊಡವತ್ತಿ, ಹನುಮಂತನಗರ ಹಾಗೂ ನಾಗಮಂಗಲ ತಾಲೂಕಿನ ಮಲ್ಲನಕೊಪ್ಪಲು, ದೊಡ್ಡ ಉಪ್ಪಳ, ತಿಗಳರಕೊಪ್ಪಲು, ಬಳ್ಳಕೆರೆ, ಹದಮಗೆರೆ, ಅರಕೆರೆ. ಚೊಟ್ಟನಹಳ್ಳಿ, ಕೂಡಗಬಾಳು, ಕೌಡ್ಲೆ, ಯಡವನಹಳ್ಳಿ, ಬೆಕ್ಕಳಲೆ, ಪಟೇಲನಕೊಪ್ಪಲು, ಕಿರಂಗೂರು ಹಾಗೂ ಇನ್ನಿತರೆ ಶಿಂಷಾ ನದಿ ಪಾತ್ರದ ಗ್ರಾಮಗಳ ಸಾರ್ವಜನಿಕರಿಗೆ ಹಾಗೂ ಜಾನುವಾರುಗಳಿಗೆ ಅಪಾಯ, ಅನಾಹುತ ಆಗದಂತೆ, ಸುರಕ್ಷಿತ ಸ್ಥಳದಲ್ಲಿ ಇರಲು, ತೆರಳಲು ಎಡೆಯೂರು ಹೇಮಾವತಿ ನಾಲಾ ಉಪ ವಿಭಾಗ ಕಾವೇರಿ ನೀರಾವರಿ ನಿಗಮ ನಿಯಮಿತದ ಸಹಾಯಕ ಕಾರ್ಯಪಾಲಕ ಎಂಜಿನಿಯರ್ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

PREV

Recommended Stories

ತುಮಕೂರಲ್ಲಿ 20 ನವಿಲುಗಳ ಸಾವು
ರಾಜ್ಯದಲ್ಲಿ 4 ಹಾಲಿನ ಮಾದರಿ ಗುಣಮಟ್ಟ ಕಡಿಮೆ