ಸಿದ್ದಾಪುರದಲ್ಲಿ ಭಾರಿ ಮಳೆ, ಹಲವೆಡೆ ಅನಾಹುತ

KannadaprabhaNewsNetwork |  
Published : Jun 17, 2025, 01:00 AM ISTUpdated : Jun 17, 2025, 01:01 AM IST
ಫೋಟೊಪೈಲ್-೧೬ಎಸ್ಡಿಪಿ೨- ಸಿದ್ದಾಪುರ ತಾಲೂಕಿನ ಹಾರ್ಸಿಕಟ್ಟಾದಲ್ಲಿ ಮನೆ ಹಾನಿಯಾಗಿರುವದು. | Kannada Prabha

ಸಾರಾಂಶ

ತಾಲೂಕಿನಲ್ಲಿ ಅಬ್ಬರದ ಮಳೆ ಸುರಿಯುತ್ತಿದ್ದು, ಸೋಮವಾರ ಬೆಳಗಿನಜಾವದ ೨೪ ಗಂಟೆಗಳಲ್ಲಿ ೭೮.೫ ಮಿ.ಮೀ. ಮಳೆಯಾಗಿದೆ.

ಸಿದ್ದಾಪುರ: ತಾಲೂಕಿನಲ್ಲಿ ಅಬ್ಬರದ ಮಳೆ ಸುರಿಯುತ್ತಿದ್ದು, ಸೋಮವಾರ ಬೆಳಗಿನಜಾವದ ೨೪ ಗಂಟೆಗಳಲ್ಲಿ ೭೮.೫ ಮಿ.ಮೀ. ಮಳೆಯಾಗಿದೆ. ಈವರೆಗೆ ೭೩೧.೨ ಮಿ.ಮೀ. ಮಳೆಯಾಗಿದೆ.ಭಾನುವಾರ ದೊಡ್ಮನೆಯ ಗಣಪತಿ ಬೀರಾ ಹಸ್ಲರ್ ಎನ್ನುವವರ ವಾಸದ ಮನೆಯ ಚಾವಣಿ ಕುಸಿದು ಅಂದಾಜು ₹೪೦ ಸಾವಿರ ಹಾನಿಯಾಗಿದೆ. ಸೋಮವಾರ ಹಾರ್ಸಿಕಟ್ಟಾದ ಕಾನಕೊಪ್ಪ ಮಜರೆಯ ಹಸೀನಾ ಅಲ್ಲಾಬಕ್ಷಸಾಬ್ ಅವರ ವಾಸದ ಪಕ್ಕ ಮನೆಯ ಹಿಂದಿನ ರಸ್ತೆಗೆ ಅಡ್ಡಲಾಗಿ ಕಟ್ಟಲಾದ ತಡೆಗೋಡೆ ಕುಸಿದು ಮನೆಯ ಸಿಮೆಂಟ್ ಶೀಟ್ ಹಾಗೂ ಗೃಹೋಪಯೋಗಿ ವಸ್ತುಗಳು ಹಾಳಾಗಿವೆ. ಅಂದಾಜು ₹೮೦ ಸಾವಿರ ಹಾನಿಯಾಗಿದೆ. ಬಾಳಗೋಡ ಗ್ರಾಮದ ಈಶ್ವರ ಕೆರಿಯಾ ನಾಯ್ಕ ಅವರ ವಾಸ್ತವ್ಯದ ಮನೆಯ ಚಾವಣಿ ಹಾಗೂ ಗೋಡೆ ಕುಸಿದು ₹೪೫ ಸಾವಿರ ಹಾನಿಯಾಗಿದೆ. ಅವರ ಕುಟುಂಬಕ್ಕೆ ಅರಣ್ಯ ಸಮಿತಿ ಸಭಾಭವನದಲ್ಲಿ ಉಳಿಯಲು ವ್ಯವಸ್ಥೆ ಕಲ್ಪಿಸಲಾಗಿದೆ. ಕ್ಯಾದಗಿ ಗ್ರಾಮದ ಕೃಷ್ಣಮೂರ್ತಿ ಸುಬ್ರಾಯ ಭಟ್ಟ ಅವರ ವಾಸ್ತವ್ಯದ ಮನೆಯ ಚಾವಣಿ ಮೇಲೆ ಬೃಹತ್ ಗಾತ್ರದ ಮಾವಿನಮರ ಬಿದ್ದು ಅಂದಾಜು ₹೭೦ ಸಾವಿರ ಹಾನಿಯಾಗಿದೆ.

ಪಟ್ಟಣದ ರವೀಂದ್ರನಗರದಲ್ಲಿ ವಿದ್ಯುತ್ ಕಂಬದ ಮೇಲೆ ಮರ ಬಿದ್ದ ಪರಿಣಾಮ ಸಾವಿತ್ರಿ ಅಂಬಿಗ ಅವರ ವಾಸದ ಮನೆಯ ಚಾವಣಿಯ ಹೆಂಚುಗಳಿಗೆ ಅಂದಾಜು ₹೫ ಸಾವಿರ ಹಾನಿಯಾಗಿದೆ.ಸಿದ್ದಾಪುರ ತಾಲೂಕಿನ ಹಾರ್ಸಿಕಟ್ಟಾದಲ್ಲಿ ಮನೆ ಹಾನಿಯಾಗಿದೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಸ್ವಾರ್ಥಕ್ಕಾಗಿ ಬ್ಲ್ಯಾಕ್‌ಮೇಲ್‌ ಮಾಡಲು ಇಷ್ಟವಿಲ್ಲ: ಡಿಸಿಎಂ
ಒಪಿಎಸ್‌ ಜಾರಿಗೆ ಸರ್ಕಾರಕ್ಕೆ ಒತ್ತಾಯಿಸುವೆ-ಖಾಲಿ ಹುದ್ದೆಗಳನ್ನು ಭರ್ತಿ ಮಾಡಲು ಒತ್ತಾಯ