ಕನ್ನಡಪ್ರಭ ವಾರ್ತೆ ಕಲಬುರಗಿ
ನಿರಂತರ ಮಳೆಯಿಂದಾಗಿ ಶನಿವಾರ ಕೆಲಸಕ್ಕೆ ಹೋಗುವವರು ಮನೆಯಿಂದ ಹೊರಗೆ ಬರುವಾಗ ಕೊಡೆ ಆಸರೆ ಪಡೆಯದರು. ಅನೇಕರು ರೇನ್‌ಕೋಟ್‌ನೊಂದಿಗೆ ಹೊರಗೆ ಬಂದರೆ ಇನ್ನೂ ಹಲವರು ತೊಯ್ದು ತೊಪ್ಪೆಯಾದ ನೋಟಗಲು ಕಂಡವು.
ಇನ್ನು ಶೀಲೆಗೆ ಹೋಗುವ ಮಕ್ಕಳಂತೂ ನಿರಂತರ ಸಣ್ಣಗೆ ಸುರಿದ ಮಳೆಯಲ್ಲಿಯೇ ನೆನೆಯುತ್ತಲೇ ಶಾಲೆಗೆ ಹೋದ ನೋಟಗಳು ಕಂಡು ಬಂದವು. ನಗರದಲ್ಲಿ ಪ್ರಮುಖ ವೃತ್ತಗಳು, ಸೂಪರ್ ಮಾರ್ಕೆಟ್ ಇಲ್ಲೆಲ್ಲಾ ಮಳೆಯ ತಂಪಿನ ವಾತಾವರಣದಲ್ಲಿ ಜನತೆಗೆ ಕಿಡಿಯಲು ಬಿಸಿ ಚಹಾ, ಸವಿಯಲು ಮೆಕ್ಕೆಜೋಳ, ಶೇಂಗಾ ವ್ಯಾಪಾರ ಭರ್ಜರಿಯಾಗಿ ಸಾಗಿದೆ.ಅನೇಕ ಕಡೆಗಳಲ್ಲಿ ಜನ ತಾವು ಜೊತೆಗೆ ತಂದಿದ್ದ ಕಡ್ತಗಳನ್ನೇ ತಲೆ ಮೇಲೆ ಆಸರೆ ಮಾಡಿಕೊಂಡು ಮಳೆಯಿಂದ ಬಚಾವ್ ಆಗುವ ಪ್ರಯತ್ನ ಮಾಡಿದ್ದಾರೆ.
ಇದಲ್ಲದೆ ಚಿಂಚೋಳಿ, ಕಲಬುರಗಿ ತಾಲೂಕು, ಜೇವರ್ಗಿ, ಕಮಲಾಪುರ, ಸೇಡಂ ಇಲ್ಲೆಲ್ಲಾ ಜಿಟಿಜಿಟಿ ಮಳೆ ಸುರಿದಿದೆ. ಅಫಜಲ್ಪೂರದಲ್ಲಿ ಮೋಡ ಕವಿದ ವಾತಾವರಣವಿದ್ದು ಯಾವಾಗಾದರೂ ಮಳೆ ಸುರಿಯವುವ ಲಕ್ಷಣಗಳಿವೆ.