ಡಂಬಳ ಹೋಬಳಿಯಲ್ಲಿ ರಾತ್ರಿ ಇಡೀ ಧಾರಾಕಾರ ಮಳೆ

KannadaprabhaNewsNetwork | Published : May 18, 2025 11:54 PM
Follow Us

ಸಾರಾಂಶ

ಡಂಬಳ ಸೇರಿ ಹೋಬಳಿಯ ಗ್ರಾಮಗಳಲ್ಲಿ ಭಾನುವಾರ ರಾತ್ರಿ ಇಡೀ ಧಾರಕಾರವಾಗಿ ಮಳೆ ಸುರಿದಿದೆ.

ಡಂಬಳ: ಡಂಬಳ ಸೇರಿ ಹೋಬಳಿಯ ಗ್ರಾಮಗಳಲ್ಲಿ ಭಾನುವಾರ ರಾತ್ರಿ ಇಡೀ ಧಾರಾಕಾರವಾಗಿ ಮಳೆ ಸುರಿದಿದೆ.

ಪೇಠಾ ಆಲೂರ, ಕದಾಂಪುರ, ಸಸ್ಯಕಾಶಿ ಕಪ್ಪತ್ತಗುಡ್ಡ, ಡೋಣಿ ತಾಂಡಾ, ಅತ್ತಿಕಟ್ಟಿ ತಾಂಡಾ, ಶಿವಾಜಿ ನಗರ, ಚುರ್ಚಿಹಾಳ, ಹೊಸ ಡಂಬಳ, ಮೇವುಂಡಿ, ಬರದೂರ, ಯಕ್ಲಾಸಪೂರ, ಹೈತಾಪೂರ, ಹಳ್ಳಿಕೇರಿ, ಹಳ್ಳಿಗುಡಿ ಗ್ರಾಮಗಳಲ್ಲಿ ರಾತ್ರಿ ಇಡೀ ಗುಡುಗು ಸಿಡಿಲುಗಳ ಮಧ್ಯೆ ಧಾರಾಕಾರವಾಗಿ ಮಳೆ ಆಗಿದೆ.

ಹಳ್ಳ ಕೊಳ್ಳಗಳಿಗೆ ಉದ್ದಗಲಕ್ಕೂ ನಿರ್ಮಿಸಿರುವ ಬಾಂದಾರಗಳು ತುಂಬಿ ಹರಿಯುವುದರ ಮೂಲಕ ಹಳ್ಳದ ಬಾಂದಾರ ತುಂಬಿದ್ದರಿಂದ ಸುತ್ತಮುತ್ತಲಿನ ರೈತರು ಹರ್ಷ ವ್ಯಕ್ತಪಡಿಸಿದ್ದಾರೆ.

ಡಂಬಳ ಹೋಬಳಿಯ ಬಹುತೇಕ ಬಡಾವಣೆಗಳು ಅಸ್ವಚ್ಛತೆಯಿಂದ ಕೂಡಿದ್ದು, ಮಳೆಯಿಂದಾಗಿ ತ್ಯಾಜ್ಯವು ಮಳೆಗೆ ಹರಿದು ಚರಂಡಿ ನೀರು ಹಳ್ಳಗಳಿಗೆ ಹರಿದು ಹೋದ ಹಿನ್ನೆಲೆ ಸ್ವಚ್ಛವಾಗಿರುವುದು ಮತ್ತು ಚರಂಡಿ ನೀರು ರಸ್ತೆ ಮೇಲೆ ಹರಿದಿದೆ.

ಗ್ರಾಮದಲ್ಲಿ ರಾತ್ರಿ ಇಡೀ ಸುರಿದ ಮಳೆಗೆ ಮುಂಗಾರು ಬಿತ್ತನೆಗೆ ಸಹಕಾರಿಯಾಗಲಿದೆ ಎನ್ನುತ್ತಾರೆ ರೈತರು.

ಡಂಬಳ ಹೋಬಳಿಯ ಬಹುತೇಕ ಹಳ್ಳಗಳಿಗೆ ಬಾಂದಾರಗಳನ್ನು ಈ ಭಾಗದ ಶಾಸಕರಾದ ಜಿ.ಎಸ್. ಪಾಟೀಲರು ನಿರ್ಮಿಸಿದ್ದಾರೆ. ಪ್ರತಿ ವರ್ಷ ನಾವು ಬಾಂದಾರನಿಂದ ನೀರನ್ನು ಪಡೆದುಕೊಂಡು ಉತ್ತಮ ಬೆಳೆ ಹೊಂದಲು ಮತ್ತು ನಮ್ಮ ಭಾಗದ ಸಾವಿರಾರು ಕೊಳವೆಬಾವಿಗಳಲ್ಲಿ ನೀರು ಉತ್ತಮವಾಗಿ ಸಿಗಲು ಸಹಕಾರಿಯಾಗಿದೆ ಡಂಬಳ ಗ್ರಾಮದ ರೈತ ಬಸುರಾಜ ಪೂಜಾರ, ಜಾಕೀರ ಮೂಲಿಮನಿ ಹೇಳಿದರು.

ಉತ್ತಮ ಮಳೆ ಸುರಿದಿರುವುದು ರೈತರಿಗೆ ಮತ್ತು ನಮಗೂ ಸಂತೋಷ ತಂದಿದೆ. ರೋಣ ಕ್ಷೇತ್ರ ಸೇರಿದಂತೆ ಡಂಬಳ ಭಾಗದ ಕೆರೆಗಳಿಗೆ ಮತ್ತು ಕಾಲುವೆಗಳಿಗೆ ಆದ್ಯತೆ ನೀಡಲಾಗುತ್ತಿದೆ. ಈಗಾಗಲೇ ನಿರ್ಮಿಸಿದ ಬಾಂದಾರಗಳು ಮಳೆಯಿಂದಾಗಿ ತುಂಬಿ ಹರಿಯುತ್ತಿದ್ದು. ಇನ್ನೂ ಹಳ್ಳಗಳಲ್ಲಿ ಬಾಂದಾರಗಳನ್ನು ನಿರ್ಮಿಸಲು ಯೋಜನೆಯನ್ನು ಹಾಕಿಕೊಳ್ಳವುದರ ಮೂಲಕ ನೀರನ್ನು ಹಿಡಿದಿಟ್ಟುಕೊಳ್ಳುವಂತೆ ಮಾಡುವುದರ ಮೂಲಕ ರೈತರಿಗೆ ಇನ್ನಷ್ಟು ಸಹಕಾರಿ ಕೆಲಸ ಕ್ಷೇತ್ರಾಧ್ಯಂತ ಮಾಡಲಾಗುವುದು ಶಾಸಕ ಜಿ.ಎಸ್‌. ಪಾಟೀಲ ಹೇಳಿದರು.