ಮುಂಡಗೋಡದಲ್ಲಿ ಭಾರಿ ಗಾಳಿ ಮಳೆಗೆ ಅವಾಂತರ ಸೃಷ್ಟಿ

KannadaprabhaNewsNetwork | Published : Apr 9, 2025 12:30 AM

ಸಾರಾಂಶ

ವಿದ್ಯುತ್ ಕಂಬ, ಮೊಬೈಲ್ ಟವರ್ ಗಳು ನೆಲಕ್ಕುರುಳಿವೆ. ಹಲವು ಮೇಲ್ಚಾವಣಿ ಹಾರಿ ಹೋಗಿ ಮನೆಗಳಿಗೆ ಹಾನಿಯುಂಟಾಗಿದ್ದು, ಬಾರಿ ಅವಾಂತರ ಸೃಷ್ಟಿಯಾಗಿದೆ.

ಮುಂಡಗೋಡ: ಪಟ್ಟಣ ಸೇರಿದಂತೆ ತಾಲೂಕಿನ ವಿವಿಧೆಡೆ ಮಂಗಳವಾರ ಸಂಜೆ ಸುರಿದ ಭಾರಿ ಗಾಳಿ ಮಳೆಗೆ ಹಲವು ಮರಗಳು, ವಿದ್ಯುತ್ ಕಂಬ, ಮೊಬೈಲ್ ಟವರ್ ಗಳು ನೆಲಕ್ಕುರುಳಿವೆ. ಹಲವು ಮೇಲ್ಚಾವಣಿ ಹಾರಿ ಹೋಗಿ ಮನೆಗಳಿಗೆ ಹಾನಿಯುಂಟಾಗಿದ್ದು, ಬಾರಿ ಅವಾಂತರ ಸೃಷ್ಟಿಯಾಗಿದೆ.

ತಾಲೂಕಿನ ಸಾಲಗಾಂವ ಮತ್ತು ಪಟ್ಟಣದ ಹೊರ ವಲಯ ಶಿರಸಿ ರಸ್ತೆಯ ಲೊಯೋಲಾ ಶಾಲೆ ಬಳಿ ಸೇರಿದಂತೆ ವಿವಿಧೆಡೆ ಭಾರಿ ಗಾತ್ರದ ಮಾವಿನ ಮರ ರಸ್ತೆ ಮೇಲೆ ಉರುಳಿದ ಪರಿಣಾಮ ಶಿರಸಿ-ಹುಬ್ಬಳ್ಳಿ ರಸ್ತೆ ಸಂಚಾರ ಸಂಪೂರ್ಣ ಸ್ಥಗಿತಗೊಂಡಿತ್ತು. ಇದರಿಂದ ವಾಹನಗಳೆಲ್ಲ ಸುತ್ತು ಹಾಕಿ ಹೋಗಬೇಕಾಯಿತು. ಅದೃಷ್ಟವಶಾತ ಮರಗಳು ಯಾವುದೇ ವಾಹನದ ಮೇಲೆ ಬಿಳದೆ ಇರುವುರಿಂದ ಯಾವುದೇ ಪ್ರಾಣಾಪಾಯ ಸಂಬವಿಸಿಲ್ಲ.

ಪಟ್ಟಣದ ಅಯ್ಯಪ್ಪಸ್ವಾಮಿ ದೇವಾಲಯದ ಆವರಣದಲ್ಲಿದ್ದ ಮೊಬೈಲ್ ಟವರ್ ಗಾಳಿ ಮಳೆಗೆ ನೆಲಕ್ಕುರುಳಿದ್ದು, ಸುತ್ತಮುತ್ತಲಿನ ಜನ ಬಯಬೀತಗೊಂಡು ಓಡಿ ಹೋಗಿದ್ದಾರೆ. ಪಟ್ಟಣದ ಕೆಲವೆಡೆ ಮರಗಳು ಬಿದ್ದು, ಚರಂಡಿಗಳಲ್ಲಿ ಕಸ ಕಡ್ಡಿ ತುಂಬಿಕೊಂಡಿದ್ದರಿಂದ ಗಟಾರ್ ಸಂಪೂರ್ಣ ಬ್ಲಾಕ್ ಆಗಿ ಕೆಲ ಮನೆಗಳಿಗೆ ಕೊಳಚೆ ನೀರು ನುಗ್ಗಿದ ಪರಿಣಾಮ ಸಾರ್ವಜನಿಕರು ಕೊಳಚೆ ನೀರನ್ನು ಹೊರಹಾಕಲು ಪರದಾಡಬೇಕಾಯಿತು.

ಪಟ್ಟಣದ ದೇಶಪಾಂಡೆನಗರ, ನಂದೀಶ್ವರನಗರ, ಗಾಂಧಿನಗರ ಹಾಗೂ ನಹರುನಗರ ಸೇರಿದಂತೆ ವಿವಿಧ ಬಡಾವಣೆಯ ಹಲವು ಮನೆಗಳ ಮೇಲ್ಚಾವಣಿ ಹಾರಿ ಹೋಗಿದ್ದು, ಹಲವರು ಸೂರು ಕಳೆದುಕೊಂಡು ರೋದಿಸುತ್ತಿರುವ ದೃಶ್ಯಗಳು ಕಂಡಬಂದವು.

ವಿದ್ಯುತ್ ವ್ಯತ್ಯಯ: ಗಾಳಿ ಮಳೆಗೆ ಹಲವು ಕಡೆಗಳಲ್ಲಿ ಗಿಡ ಮರಗಳು, ವಿದ್ಯುತ್ ಕಂಬಗಳು ಉರುಳಿ ಅಲ್ಲಲ್ಲಿ ವಿದ್ಯುತ್ ಲೈನ್ ಹರಿದು ಬಿದ್ದಿದ್ದರಿಂದ ಸಂಜೆ ೫ ಘಂಟೆಗೆ ಹೋದ ವಿದ್ಯತ್ ರಾತ್ರಿಯಾದರೂ ಬರಲಿಲ್ಲ. ಪಟ್ಟಣ ಸಂಪೂರ್ಣ ಕತ್ತಲು ಆವರಿಸಿತ್ತು. ಇದರಿಂದ ಸಾರ್ವಜನಿಕರು ತೀವ್ರ ತೊಂದರೆ ಅನುಭವಿಸಬೇಕಾಯಿತು.ಪೋಟೊ: ೮ಎಮ್.ಎನ್.ಡಿ೧,೪,೩,೪,೫- ಮುಂಡಗೋಡ: ಪಟ್ಟಣ ಸೇರಿದಂತೆ ತಾಲೂಕಿನ ವಿವಿಧೆಡೆ ಮಂಗಳವಾರ ಸಂಜೆ ಸುರಿದ ಭಾರಿ ಗಾಳಿ ಮಳೆಗೆ ಹಲವು ಮರಗಳು, ವಿದ್ಯುತ್ ಕಂಬ, ಮೊಬೈಲ್ ಟವರ್ ಗಳು ನೆಲಕ್ಕುರುಳಿವೆ. ಹಲವು ಮೇಲ್ಚಾವಣಿ ಹಾರಿ ಹೋಗಿ ಮನೆಗಳಿಗೆ ಹಾನಿಯುಂಟಾಗಿದ್ದು, ಬಾರಿ ಅವಾಂತರ ಸೃಷ್ಟಿಯಾಗಿದೆ

ಮಂಗಳವಾರ ಸಂಜೆ ಪಟ್ಟಣದಲ್ಲಿ ಸುರಿದ ಸುನಾಮಿ ಗಾಳಿ ಮಳೆಗೆ ಪಟ್ಟಣದ ಬಸವಣ್ಣ ಹಾಗೂ ವೀರಭದ್ರೇಶ್ವರ ದೇವರ ಜಾತ್ರೆಯಲ್ಲಿ ಹಾಕಲಾಗಿದ್ದ ಅಂಗಡಿ ಮುಗ್ಗಟ್ಟು ವ್ಯಾಪಾರಸ್ಥರ ಸಾಮಗ್ರಿಗಳು ಹಾಗೂ ಟೆಂಟ್ ಗಳು ಹಾರಿ ಹೋಗಿವೆ. ವಿವಿಧ ಜೋಕಾಲಿಗಳು ಚೆಲ್ಲಾಪಿಲ್ಲಿಯಾಗಿ ಬಿದ್ದಿವೆ. ಗಾಳಿ ಮಳೆಯ ರಬಸಕ್ಕೆ ಹಲವು ಬೈಕ್ ಗಳು ದೂರ ದೂರ ಹೋಗಿ ಬಿದ್ದಿವೆ. ಒಟ್ಟಾರೆ ಜಾತ್ರಾ ವ್ಯಾಪಾರಸ್ಥರ ಬದುಕು ದುಸ್ತರವಾಗಿದೆ.

Share this article