ಜಿಲ್ಲೆಯ ಮಲೆನಾಡು ತಪ್ಪಲಿನ ರೈತರ, ಅದಿವಾಸಿಗಳ ಅಹವಾಲು ಆಲಿಸಲು ಬಂದಿದ್ದ ಸಿಎಂ ಡಿ.ಕೆ. ಶಿವಕುಮಾರ್ ಸಭೆಯ ಅಂತ್ಯದಲ್ಲಿ ರೈತಸಂಘದಿಂದ ಸಣ್ಣ ಪ್ರತಿಭಟನೆಯನ್ನು ಎದುರಿಸಬೇಕಾಯಿತು. ಜಿಲ್ಲೆಯ ಉತ್ತರ ತುದಿ ಬೈಂದೂರಿನಿಂದ, ನೂತನ ಪಟ್ಟಣ ಪಂಚಾಯಿತಿಯಿಂದ ಗ್ರಾಪಂಗಳನ್ನು ಕೈ ಬಿಡುವಂತೆ ಆಗ್ರಹಿಸಿ ಸಿಎಂಗೆ ಮನವಿ ನೀಡಲು ಬಂದಿದ್ದ ರೈತ ಸಂಘ ಪ್ರಮುಖರು ಬಂದಿದ್ದರು, ಅವರು ಈ ಬೇಡಿಕೆಯನ್ನು ಮುಂದಿಟ್ಟುಕೊಂಡು ಕಳೆದ 410 ದಿನಗಳಿಂದ ಹೋರಾಟ ನಡೆಸುತ್ತಿದ್ದಾರೆ.
ಹೆಬ್ರಿ: ಜಿಲ್ಲೆಯ ಮಲೆನಾಡು ತಪ್ಪಲಿನ ರೈತರ, ಅದಿವಾಸಿಗಳ ಅಹವಾಲು ಆಲಿಸಲು ಬಂದಿದ್ದ ಸಿಎಂ ಡಿ.ಕೆ. ಶಿವಕುಮಾರ್ ಸಭೆಯ ಅಂತ್ಯದಲ್ಲಿ ರೈತಸಂಘದಿಂದ ಸಣ್ಣ ಪ್ರತಿಭಟನೆಯನ್ನು ಎದುರಿಸಬೇಕಾಯಿತು. ಜಿಲ್ಲೆಯ ಉತ್ತರ ತುದಿ ಬೈಂದೂರಿನಿಂದ, ನೂತನ ಪಟ್ಟಣ ಪಂಚಾಯಿತಿಯಿಂದ ಗ್ರಾಪಂಗಳನ್ನು ಕೈ ಬಿಡುವಂತೆ ಆಗ್ರಹಿಸಿ ಸಿಎಂಗೆ ಮನವಿ ನೀಡಲು ಬಂದಿದ್ದ ರೈತ ಸಂಘ ಪ್ರಮುಖರು ಬಂದಿದ್ದರು, ಅವರು ಈ ಬೇಡಿಕೆಯನ್ನು ಮುಂದಿಟ್ಟುಕೊಂಡು ಕಳೆದ 410 ದಿನಗಳಿಂದ ಹೋರಾಟ ನಡೆಸುತ್ತಿದ್ದಾರೆ. ತಮ್ಮ ಬೇಡಿಕೆಯನ್ನು ಈಡೇರಿಸುವಂತೆ ಸಿಎಂಗೆ ಮೊದಲೇ ಮನವಿ ಸಲ್ಲಿಸಿದ್ದು, ಈ ಸಭೆಯಲ್ಲಿ ಈ ಬಗ್ಗೆ ಸಿಎಂ ಮಾತನಾಡುತ್ತಾರೆ ಎಂಬ ಭರವಸೆಯಿಂದ ಈ ರೈತರು ಆಗಮಿಸಿದ್ದರು.
ಆದರೇ ಸಿಎಂ ತಮ್ಮ ಭಾಷಣದಲ್ಲಿ ಸಿಎಂ ಈ ಬೇಡಿಕೆ ಬಗ್ಗೆ ಚಕಾರ ಎತ್ತಲಿಲ್ಲ, ಇದರಿಂದ ಆಕ್ರೋಶಗೊಂಡ ಬೈಂದೂರು ರೈತರು, ಸಿಎಂ ಭಾಷಣ ಮುಗಿಸಿ ತೆರಳುತ್ತಿರುವಾಗ ತಮ್ಮ ಹಸಿರು ಶಾಲು ತಿರುವುತ್ತಾ ನ್ಯಾಯ ಬೇಕು ನ್ಯಾಯ ಬೇಕು ಎಂದು ಘೋಷಣೆ ಕೂಗಿದರು. ಇದನ್ನು ಗಮನಿಸಿದ ಸಿಎಂ ಸ್ಥಳಕ್ಕೆ ಬಂದ ರೈತರ ಅಹವಾಲು ಆಲಿಸಿದರು, ಬೆಂಗಳೂರಿಗೆ ಬನ್ನಿ ಬೇಡಿಕೆ ಬಗ್ಗೆ ಚರ್ಚೆ ಮಾಡೋಣ ಎಂದು ಭರವಸೆ ನೀಡಿದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.