ಕಾಮನಹಳ್ಳಿಯ ಹೊಲದಲ್ಲೇ ನಡೆದಿದೆ ಹೆಲಿಕಾಪ್ಟರ್ ದುರಸ್ತಿ ಕಾರ್ಯ

KannadaprabhaNewsNetwork |  
Published : Nov 13, 2026, 02:15 AM IST
12ಬಿಎನ್‌ಕೆ1 | Kannada Prabha

ಸಾರಾಂಶ

ತಾಂತ್ರಿಕ ದೋಷದಿಂದ ಬಂಕಾಪುರ ಸಮೀಪದ ಕಾಮನಹಳ್ಳಿ ಗ್ರಾಮದ ಬಳಿ ರಾಷ್ಟ್ರೀಯ ಹೆದ್ದಾರಿ-48ರ ಪಕ್ಕದ ಹೊಲದಲ್ಲಿ ತುರ್ತು ಭೂಸ್ಪರ್ಶ ಮಾಡಿದ್ದ ಭಾರತೀಯ ವಾಯುಪಡೆಯ ಹೆಲಿಕಾಪ್ಟರ್ ದುರಸ್ತಿ ಕಾರ್ಯ ಹೊಲದಲ್ಲೇ ಮುಂದುವರೆದಿದ್ದು, ವಾಯುಪಡೆಯ ತಾಂತ್ರಿಕ ಸಿಬ್ಬಂದಿ ಸ್ಥಳದಲ್ಲೇ ಹೆಲಿಕಾಪ್ಟರ್‌ನ ವಿವಿಧ ಭಾಗಗಳನ್ನು ಪರಿಶೀಲಿಸಿ ದೋಷ ಸರಿಪಡಿಸುವ ಕಾರ್ಯ ಕೈಗೊಂಡಿದ್ದಾರೆ.

ಬಂಕಾಪುರ: ತಾಂತ್ರಿಕ ದೋಷದಿಂದ ಬಂಕಾಪುರ ಸಮೀಪದ ಕಾಮನಹಳ್ಳಿ ಗ್ರಾಮದ ಬಳಿ ರಾಷ್ಟ್ರೀಯ ಹೆದ್ದಾರಿ-48ರ ಪಕ್ಕದ ಹೊಲದಲ್ಲಿ ತುರ್ತು ಭೂಸ್ಪರ್ಶ ಮಾಡಿದ್ದ ಭಾರತೀಯ ವಾಯುಪಡೆಯ ಹೆಲಿಕಾಪ್ಟರ್ ದುರಸ್ತಿ ಕಾರ್ಯ ಹೊಲದಲ್ಲೇ ಮುಂದುವರೆದಿದ್ದು, ವಾಯುಪಡೆಯ ತಾಂತ್ರಿಕ ಸಿಬ್ಬಂದಿ ಸ್ಥಳದಲ್ಲೇ ಹೆಲಿಕಾಪ್ಟರ್‌ನ ವಿವಿಧ ಭಾಗಗಳನ್ನು ಪರಿಶೀಲಿಸಿ ದೋಷ ಸರಿಪಡಿಸುವ ಕಾರ್ಯ ಕೈಗೊಂಡಿದ್ದಾರೆ.

ಸೋಲೂರಿನಿಂದ ಬೆಳಗಾವಿಗೆ ತೆರಳುತ್ತಿದ್ದ ವಾಯುಪಡೆಯ ZD 4050 ನೋಂದಣಿ ಸಂಖ್ಯೆಯ ಹೆಲಿಕಾಪ್ಟರ್‌ನಲ್ಲಿ ಮಾರ್ಗಮಧ್ಯೆ ತಾಂತ್ರಿಕ ದೋಷ ಕಾಣಿಸಿಕೊಂಡಿತ್ತು. ಮುನ್ನೆಚ್ಚರಿಕೆ ಕ್ರಮವಾಗಿ ಪೈಲಟ್ ಕಾಮನಹಳ್ಳಿ ಗ್ರಾಮದ ಸಮೀಪದ ರೈತರ ಹೊಲದಲ್ಲಿ ಹೆಲಿಕಾಪ್ಟರ್ ಅನ್ನು ಸುರಕ್ಷಿತವಾಗಿ ಇಳಿಸಿದ್ದರು. ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಆಗಮಿಸಿದ ವಾಯುಪಡೆಯ ತಾಂತ್ರಿಕ ತಂಡ ಪರಿಶೀಲನೆ ನಡೆಸಿ ದುರಸ್ತಿ ಕಾರ್ಯ ಆರಂಭಿಸಿದೆ. ದೋಷ ಸಂಪೂರ್ಣವಾಗಿ ಸರಿಪಡಿಸಿದ ಬಳಿಕ ಹೆಲಿಕಾಪ್ಟರ್ ಮತ್ತೆ ಹಾರಾಟ ಆರಂಭಿಸುವ ಕುರಿತು ಅಧಿಕಾರಿಗಳು ನಿರ್ಧರಿಸಿದ್ದಾರೆ.

ಹೆಲಿಕಾಪ್ಟರ್‌ನಲ್ಲಿ ದೀಪಕ್ ಶರ್ಮಾ ಸೇರಿದಂತೆ ಆರು ಸಿಬ್ಬಂದಿ ಇದ್ದು, ಎಲ್ಲರೂ ಸುರಕ್ಷಿತವಾಗಿದ್ದಾರೆ. ಘಟನೆಯಲ್ಲಿ ಯಾವುದೇ ಪ್ರಾಣಹಾನಿ ಅಥವಾ ಗಾಯ ಸಂಭವಿಸಿಲ್ಲ. ಹೊಲದಲ್ಲಿ ಹೆಲಿಕಾಪ್ಟರ್ ನಿಂತಿರುವುದನ್ನು ವೀಕ್ಷಿಸಲು ಸುತ್ತಮುತ್ತಲಿನ ಗ್ರಾಮಸ್ಥರು ಸ್ಥಳಕ್ಕೆ ಆಗಮಿಸುತ್ತಿದ್ದಾರೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಇಂದು ಗುಲಾಬಿ ಮೆಟ್ರೋ ಮಾರ್ಗ ಉದ್ಘಾಟನೆ- ಮಾರ್ಗದಲ್ಲಿರುವ 6 ನಿಲ್ದಾಣಗಳು
ಚಲ್ಲಘಟ್ಟ ಮೆಟ್ರೋ ಡಿಪೋ ಬಳಿ ಅಂಡರ್‌ಪಾಸ್‌