ಸರ್ಕಾರಿ ಶಾಲಾ ಮಕ್ಕಳಿಗೆ ನೆರವಾಗಿ: ಜಗದೀಶ್ ಚೌಧರಿ

KannadaprabhaNewsNetwork | Published : Jul 1, 2024 1:55 AM

ಸಾರಾಂಶ

ದಾಬಸ್‌ಪೇಟೆ: ಸರ್ಕಾರಿ ಶಾಲಾ ಮಕ್ಕಳಿಗೆ ವಿದ್ಯಾಭ್ಯಾಸ ನೆರವಾಗುವ ಪರಿಕಲ್ಪನೆಯನ್ನು ಪ್ರತಿಯೊಬ್ಬರು ಜೀವನದಲ್ಲಿ ರೂಡಿಸಿಕೊಳ್ಳಬೇಕು ಎಂದು ಬಿಜೆಪಿ ತಾಲೂಕು ಅಧ್ಯಕ್ಷ ಜಗದೀಶ್ ಚೌಧರಿ ಹೇಳಿದರು.

ದಾಬಸ್‌ಪೇಟೆ: ಸರ್ಕಾರಿ ಶಾಲಾ ಮಕ್ಕಳಿಗೆ ವಿದ್ಯಾಭ್ಯಾಸ ನೆರವಾಗುವ ಪರಿಕಲ್ಪನೆಯನ್ನು ಪ್ರತಿಯೊಬ್ಬರು ಜೀವನದಲ್ಲಿ ರೂಡಿಸಿಕೊಳ್ಳಬೇಕು ಎಂದು ಬಿಜೆಪಿ ತಾಲೂಕು ಅಧ್ಯಕ್ಷ ಜಗದೀಶ್ ಚೌಧರಿ ಹೇಳಿದರು.

ಸೋಂಪುರ ಹೋಬಳಿಯ ಕೆಂಗಲ್ ಗ್ರಾಮದಲ್ಲಿ ಹಮ್ಮಿಕೊಂಡಿದ್ದ ಸರ್ಕಾರಿ ಶಾಲಾ ಮಕ್ಕಳಿಗೆ ನೋಟ್ ಪುಸ್ತಕ ಹಾಗೂ ಬ್ಯಾಗ್ ವಿತರಿಸಿ ಮಾತನಾಡಿದರು.

ನಮ್ಮ ಬಳಗದಿಂದ ಕೆಂಗಲ್ ಗ್ರಾಮದ ಶಾಲಾ ವಿದ್ಯಾರ್ಥಿಗಳ ಕಲಿಕೆಗೆ ಸಹಕರಿಸಿದ್ದೇವೆ. ನನಗೆ ರಾಜಕೀಯ ಜನ್ಮ ನೀಡಿದ ಈ ಗ್ರಾಮದ ಸರ್ವಾಂಗೀಣ ಅಭಿವೃದ್ಧಿಗೆ ಸದಾ ಸಿದ್ದನಾಗಿದ್ದೇನೆ. ವೈಯಕ್ತಿಕ ಕಾರಣಗಳಿಂದ ನನ್ನ ಹುಟ್ಟುಹಬ್ಬ ಆಚರಿಸದೇ, ಸರ್ಕಾರಿ ಶಾಲಾ ಮಕ್ಕಳಿಗೆ ಸಹಕರಿಸಿದ್ದೇವೆ ಎಂದರು.

ಜು.7ರಂದು ಅಭಿನಂದನೆ: ನೆಲಮಂಗಲ ತಾಲೂಕಿನ ಹಂಚೀಪುರ ಬಳಿಯ ಮೈದಾನದಲ್ಲಿ, ಜು.7ರಂದು, ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದ ಸಂಸದ ಡಾ.ಕೆ.ಸುಧಾಕರ್ ಮತದಾರರಿಗೆ ಹಾಗೂ ಮುಖಂಡರಿಗೆ ಧನ್ಯವಾದ ಸಲ್ಲಿಸಿದ್ದಾರೆ. ಜೆಡಿಎಸ್ ಯುವ ಮೋರ್ಚಾ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಸೇರಿದಂತೆ ಬಿಜೆಪಿ-ಜೆಡಿಎಸ್ ನಾಯಕರು ಪಾಲ್ಗೊಳ್ಳುವರು ಎಂದರು.

ಎಪಿಎಂಸಿ ಮಾಜಿ ನಿರ್ದೇಶಕ ಗಂಗಣ್ಣ ಮಾತನಾಡಿ, ನಮ್ಮ ಕೆಂಗಲ್ ಗ್ರಾಮವನ್ನು ಸಮಗ್ರ ಅಭಿವೃದ್ಧಿಗೆ ಮುಂದಾಗುವೆ ಎಂದು ತಿಳಿಸಿರುವ ಜಗದೀಶ್ ಚೌದರಿ ಪರ ನಾವಿರುತ್ತೇವೆ ಎಂದರು.

ಈ ಸಂದರ್ಭದಲ್ಲಿ ಗ್ರಾಪಂ ಮಾಜಿ ಅಧ್ಯಕ್ಷ ಚಿಕ್ಕೇಗೌಡ, ಮುರಳೀಧರ್(ಮಧು), ನಿರ್ಮಾಪಕ ಗೆದ್ದಲಹಳ್ಳಿ ನಾಗರಾಜು, ಹೊಯ್ಸಳ ಸೇನೆ ಅಧ್ಯಕ್ಷ ಶ್ರೀನಿವಾಸ್, ಟಿ.ಉಮೇಶ್, ರುದ್ರಣ್ಣ, ಕುಮಾರ್, ಗಂಗಣ್ಣ, ರಂಗಪ್ಪ,ಜಿ ಸಿದ್ದಯ್ಯ, ಶಿವಪ್ರಕಾಶ್, ಸಿದ್ದರಾಜು, ಹನುಮಂತರಾಯಪ್ಪ, ಮುನಿರಾಜು, ರವಿ, ಅಶೋಕ್, ಲಕ್ಷ್ಮಣಪ್ಪ, ಕೆ.ಬಿ.ಹನುಮಂತರಾಯಪ್ಪ, ಶಫೀ(ಪಿಂದು), ವಕೀಲ ಕುಮಾರ್ ನಾಯ್ಕ್, ಶಾಲಾ ಶಿಕ್ಷಕರು, ಇತರರಿದ್ದರು.

ಫೋಟೋ 8 :

ಕೆಂಗಲ್ ಗ್ರಾಮದಲ್ಲಿ ಸರ್ಕಾರಿ ಶಾಲಾ ಮಕ್ಕಳಿಗೆ ನೋಟ್ ಪುಸ್ತಕ ಹಾಗೂ ಬ್ಯಾಗ್ ವಿತರಣೆಯನ್ನು ಬಿಜೆಪಿ ತಾಲೂಕು ಅಧ್ಯಕ್ಷ ಜಗದೀಶ್ ಚೌಧರಿ ಹಾಗೂ ಮುಖಂಡರು ವಿತರಿಸಿದರು

Share this article