ಕನ್ನಡಪ್ರಭ ವಾರ್ತೆ ಕೆಜಿಎಫ್ಕೊಳಕು ಮುಕ್ತ ನಗರವನ್ನಾಗಿಸಲು ನಗರಸಭೆ ಪೌರಾಯುಕ್ತರು, ಎಇಇ ಹಾಗೂ ಆರೋಗ್ಯ ಇಲಾಖೆಯ ಸಿಬ್ಬಂದಿ ಬೆಳಂಬೆಳಿಗ್ಗೆ ಪೌರಾಕಾರ್ಮಿಕರ ಜೊತೆ ನಗರ ಸ್ವಚ್ಚಗೊಳಿಸಲು ಸಾಧ್ಯವಾಗುತ್ತದೆ ಎಂದು ನೂತನ ಪೌರಾಯುಕ್ತ ಅಂಜಿನೇಯಲು ನಗರವನ್ನು ಸ್ವಚ್ಛಗೊಳಿಸಲು ಮುಂದಾಗಿದ್ದಾರೆ.ನಗರದ ಪ್ರತಿ ವಾರ್ಡ್ಗಳಲ್ಲಿ ಅಯಾ ನಗರಸಭೆ ಸದಸ್ಯರ ಜೊತೆ ಸಾರ್ವಜನಿಕರಿಗೆ ತಮ್ಮ ಕಸವನ್ನು ತಮ್ಮ ಮನೆಯ ಮುಂದೆ ಬರುವ ವಾಹನಕ್ಕೆ ನೀಡಬೇಕು, ಬೀದಿಗಳು, ಗಲ್ಲಿಗಳಲ್ಲಿ ಕಸವನ್ನು ಸುರಿಯಬೇಡಿ, ಕಸವನ್ನು ಮೂಲದಲ್ಲೇ ಹಸಿಕಸ ಒಣ ಕಸವನ್ನು ವಿಂಗಡಿಸಿ ನಗರಸಭೆ ವಾಹನಕ್ಕೆ ನೀಡಬೇಕೆಂದು ಹೇಳಿದರು.ಕಸ ಎಸೆಯುವವರಿಗೆ ದಂಡ ಹಾಕಿ
ನಗರದ ೩೫ ವಾರ್ಡ್‌ಳಲ್ಲಿ ಸಂಚಿರಿಸಿ ಬ್ಲಾಕ್ ಸ್ಪಾಟ್‌ಗಳನ್ನು ಪತ್ತೆ ಹಚ್ಚಿ ಸ್ವಚ್ಛಗೊಳಿಸಲಾಯಿತು. ಸಾರ್ವಜನಿರು ಬೀದಿಗಳಲ್ಲಿ ಕಸವನ್ನು ಎಸೆಯುತ್ತಿರುವವನ್ನು ಹಿಡಿದು ದಂಡವನ್ನು ಹಾಕಿ ಕಸವನ್ನು ಎಸೆಯದಂತೆ ಅರಿವು ಮೂಡಿಸಲು ಆರೋಗ್ಯ ಇಲಾಖೆಯವರು ಮುಂದಾಗಬೇಕು. ಸಾರ್ವಜನಿಕರು ತಮ್ಮ ಮನೆಗಳಲ್ಲಿ ಉತ್ಪಾದನೆಯಾಗುವ ಕಸವನ್ನು ಬೀದಿಗಳಲ್ಲಿ ಎಸೆದು ಬ್ಲಾಕ್ ಸ್ಪಾಟ್‌ಗಳನ್ನು ಮಾಡಿದರೆ ಅಂತವರ ಮನೆಗಳನ್ನು ಪತ್ತೆ ಹಚ್ಚಿ ಮನೆಗೆಳಿಗೆ ವಿದ್ಯುತ್ ಸಂಪರ್ಕ ಕಡಿತಗೊಳಿಸಲಾಗುವುದರ ಜೊತೆಗೆ ನೀರಿನ ಸಂಪರ್ಕವನ್ನು ಸಹ ನಿಲ್ಲಿಸಲಾಗುವುದೆಂದು ಪೌರಾಯುಕ್ತರು ಸಾರ್ವಜನಿಕರಿಗೆ ಎಚ್ಚರಿಕೆ ನೀಡಿದರು.ಸಿಸಿ ಕ್ಯಾಮರಾ ಕಣ್ಣುನಗರದ ೫೦ ಕ್ಕೂ ಹೆಚ್ಚು ಕಡೆ ಕಸದ ಬ್ಲಾಕ್ ಸ್ಪಾಟ್‌ಗಳನ್ನು ಈಗಾಗಲೇ ಪತ್ತೆ ಹಚ್ಚಲಾಗಿದೆ, ರಾತ್ರಿ ವೇಳೆ ಕಸವನ್ನು ತಂದು ರಸ್ತೆಗಳಲ್ಲಿ ಕಸ ಎಸೆಯುವವರನ್ನು ಪತ್ತೆ ಹಚ್ಚಲು ಸಿಸಿ ಕ್ಯಾಮೆರಾ ಕಣ್ಣಗಾವಲನ್ನು ಹಾಕಲಾಗಿದೆ. ಕಸವನ್ನು ತಂದು ಹಾಕುವರನ್ನು ಪತ್ತೆ ಹಚ್ಚಿ ಅಂತಹವರ ವಿರುದ್ದ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಎಇಇ ಮಂಜುನಾಥ್ ತಿಳಿಸಿದರು. ಓಡಾಟಕ್ಕೆ ಪಾದಚಾರಿ ಮಾರ್ಗದ ಒತ್ತವರಿಯನ್ನು ತೆರವು, ಅನಧಿಕೃತ ಜಾಹೀರಾತು ತೆರವು ಕಾರ್ಯಚರಣೆ ಮಾಡುತ್ತಿದ್ದು, ಒಂದು ವೇಳೆ ಪಾದಚಾರಿ ಮಾರ್ಗದಲ್ಲಿ ಸಾರ್ವಜನಿಕರಿಗೆ ಓಡಾಡಲು ತೊಂದರೆ ಕೊಟ್ಟಲ್ಲಿ ಅಂತಹವರ ಅಂಗಡಿಗಳನ್ನು ಮಟ್ಟುಗೋಲು ಹಾಕಿಕೊಳ್ಳಲಾಗುವುದೆಂದು ವ್ಯಾಪರಿಗಳಿಗೆ ನಗರಸಭೆ ಅಧಿಕಾರಿಗಳು ಎಚ್ಚರಿಕೆಯ ನೋಟಿಸ್ ನಿಡಿದ್ದಾರೆ.
ಪ್ಲಾಸ್ಟಿಕ್ ಮುಕ್ತ ನಗರವನ್ನಾಗಿಸಿ ನಗರದ ಬಹುತೇಕ ಅಂಗಡಿಗಳನ್ನು ಪ್ಲಾಸ್ಟಿಕ್ ಕೈಚೀಲವನ್ನು ವ್ಯಾಪರಿಗಳು ಬಳಸುತ್ತಿದ್ದಾರೆ, ಪ್ಲಾಸ್ಟಿಕ್ ಕಡಿವಾಣಕ್ಕೆ ನಗರಸಭೆ ಸಿಬ್ಬಂದಿಗಳು ಸಾಮೂಹಿಕ ತಪಾಸಣೆಯನ್ನು ಕೈಗೊಳ್ಳಲಿದ್ದಾರೆ, ಒಂದು ಅಕ್ರಮವಾಗಿ ಪ್ಲಾಸ್ಟಿಕ್ ಕವರ್ ಮಾರಾಟ ಕಂಡು ಬಂದಲ್ಲಿ ಅಂಗಡಿ ಮಾಲೀಕರಿಗೆ ದುಪ್ಪಟ್ಟು ದಂಡವನ್ನು ವಿಧಿಸಲಾಗುವುದೆಂದು ತಿಳಿಸಿದರು.