- ಸೀನಿಯರ್ ಛೇಂಬರ್ ಇಂಟರ್ ನ್ಯಾಷನಲ್ ವತಿಯಿಂದ ವೀಲ್ ಛೇರ್ ವಿತರಣೆ
ಕನ್ನಡಪ್ರಭ ವಾರ್ತೆ, ನರಸಿಂಹರಾಜಪುರಅಸಹಾಯಕರಿಗೆ ನಮ್ಮ ಕೈಯಲಾದ ಸಹಾಯ ಮಾಡುವುದೇ ನಿಜವಾದ ಧರ್ಮ ಎಂದು ಸೀನಿಯರ್ ಛೇಂಬರ್ ಇಂಟರ್ ನ್ಯಾಷನಲ್ ಪೂರ್ವಾಧ್ಯಕ್ಷ ಎಚ್.ಬಿ.ರಘುವೀರ್ ಹೇಳಿದರು.
ಬುಧವಾರ ಪಟ್ಟಣದ ೧ ನೇ ವಾರ್ಡಿನ ಕೃಷ್ಣಮೂರ್ತಿ ಅವರಿಗೆ ವೀಲ್‌ಛೇರ್ ವಿತರಣಾ ಕಾರ್ಯಕ್ರಮದಲ್ಲಿ ಮಾತನಾಡಿ, ನಾವು ದಾನ ಮಾಡಿದ್ದು ಪ್ರಯೋಜನವಾಗಿ ಅದು ಸದ್ಬಳಕೆಯಾಗಬೇಕು. ಸೀನಿಯರ್ ಛೇಂಬರ್ ಇಂಟರ್ ನ್ಯಾಷನಲ್ ನಿಂದ ಈ ಬಾರಿ ಅನೇಕ ಜನೋಪಯೋಗಿ ಕಾರ್ಯಕ್ರಮ ಹಮ್ಮಿಕೊಂಡಿದ್ದು ನೊಂದವರ, ಆರ್ಥಿಕವಾಗಿ ಹಿಂದುಳಿದವರ ಹಾಗೂ ಅಸಹಾಯಕರ ನೆರವಾಗಿ ಮುಂದಾಗಿರುವುದು ನಿಜಕ್ಕೂ ಸಂತಸ ತಂದಿದೆ ಎಂದರು.ಸೀನಿಯರ್ ಛೇಂಬರ್ ಇಂಟರ್ ನ್ಯಾಷನಲ್ ಸಂಸ್ಥೆ ಅಧ್ಯಕ್ಷ ಎಸ್.ಎಸ್.ಜಗದೀಶ್ ಮಾತನಾಡಿ, ಈ ಬಾರಿ ಅನೇಕ ಕಾರ್ಯಕ್ರಮ ಆಯೋಜಿಸಲಾಗಿತ್ತು. ನಮ್ಮ ಸಂಸ್ಥೆ ಸದಸ್ಯರು ದಾನ ನೀಡಿರುವುದು ನಿಜಕ್ಕೂ ಶ್ಲಾಘನೀಯ. ಸಂಸ್ಥೆಯ ರಾಷ್ಟ್ರೀಯ ಅಧ್ಯಕ್ಷ ಎಂ.ಆರ್.ಜಯೇಶ್ ಮಾರ್ಗದರ್ಶನಂತೆ ಸದಸ್ಯರ ಸಹಕಾರದಿಂದ ಗ್ರಾಮೀಣ ಭಾಗದ ಸರ್ಕಾರಿ ಶಾಲಾ ಮಕ್ಕಳಿಗೆ ಪಠ್ಯ ಪುಸ್ತಕ, ಸಮವಸ್ತ್ರ, ಛತ್ರಿ, ರೈನ್‌ಕೋಟ್ ಇನ್ನಿತರೆ ಪರಿಕರಗಳನ್ನು ವಿತರಿಸಿದ್ದೇವೆ. ಇದೆಲ್ಲಾ ನಮ್ಮ ಸಂಸ್ಥೆ ಸದಸ್ಯರು ಸಹಕಾರದಿಂದ ನೆರವೇರಿದೆ. ಮುಂದೆಯೂ ಕೂಡ ಸದಸ್ಯರೆಲ್ಲಾ ಸಹಕಾರದಿಂದ ಇನ್ನೂ ಅತ್ಯುತ್ತಮ ಕಾರ್ಯಕ್ರಮ ಆಯೋಜಿಸಲಾಗುವುದು ಎಂದರು. ಅತಿಥಿಯಾಗಿದ್ದ ಪಪಂ ಅಧ್ಯಕ್ಷೆ ಜುಬೇದಾ ಮಾತನಾಡಿ, ನನ್ನ ಕೋರಿಕೆ ಮೇರಿಗೆ ನನ್ನ ವಾರ್ಡಿನ ಫಲಾನುಭವಿಗೆ ಸೀನಿಯರ್ ಛೇಂಬರ್ ಇಂಟರ್ ನ್ಯಾಷನಲ್ ಸಂಸ್ಥೆ ವೀಲ್‌ಛೇರ್‌ನ್ನು ನೀಡಿರುವುದು ಸಂತಸವಾಗಿದೆ. ಯಾವುದೇ ಸೇವಾ ಸಂಸ್ಥೆಗಳು ಹೆಸರಿಗೆ ಇರದೆ ಸಮಾಜ ಮುಖಿ ಕಾರ್ಯಕ್ರಮ ಹಮ್ಮಿಕೊಳ್ಳುವ ಮೂಲಕ ಸಮಾಜದ ಸೇವೆ ಮಾಡಲು ಮುಂದಾಗಬೇಕು ಎಂದು ಕರೆ ನೀಡಿದರು. ಸೀನಿಯರ್ ಛೇಂಬರ್ ಇಂಟರ್ ನ್ಯಾಷನಲ್ ಸಂಸ್ಥೆ ಉಪಾಧ್ಯಕ್ಷ ಪಿ.ಎಸ್.ವಿದ್ಯಾನಂದಕುಮಾರ್ ಮಾತನಾಡಿ, ಕಳೆದ 8 ವರ್ಷದಿಂದ ನಮ್ಮ ಸಂಸ್ಥೆಯಿಂದ ಅನೇಕ ಸಾಮಾಜಿಕ ಕಾರ್ಯಕ್ರಮ ಆಯೋಜಿಸುತ್ತಾ ಬಂದಿದ್ದೇವೆ. ಸೇವೆ,ತ್ಯಾಗ ಮತ್ತು ದಾನ ಮಾಡುವುದರಿಂದ ದೊರಕುವ ಸುಖ ಮತ್ಯಾವುದರಿಂದಲೂ ಸಿಗುವುದಿಲ್ಲ. ದಾನ ಮಾಡುವ ಮನೋಭಾವ ಎಲ್ಲರಿಗೂ ಇರುವುದಿಲ್ಲ. ದಾನ ಮಾಡುವ ಅವಕಾಶಗಳೇ ಸಿಗುವುದಿಲ್ಲ. ನಮ್ಮ ಸಂಸ್ಥೆಯ ಮೂಲಕ ಸದಸ್ಯರಿಗೆ ದಾನ ಮಾಡುವ ಸೇವಾ ಭಾಗ್ಯ ದೊರೆತಿದೆ ಎಂದರು.ಪೂರ್ವಾಧ್ಯಕ್ಷ ಎಚ್.ಬಿ.ರಘುವೀರ್, ಕೃಷ್ಣಮೂರ್ತಿ ಅವರಿಗೆ ವೀಲ್ ಛೇರ್‌ನ್ನು ವಿತರಿಸಿದರು. ಸಂಸ್ಥೆ ಸದಸ್ಯರಾದ ಕೆ.ಎಸ್.ರಾಜಕುಮಾರ್, ಕುಮಾರ್.ಜಿ.ಶೆಟ್ಟಿ ಇದ್ದರು.