ಚೆನ್ನಕೇಶವ ದೇಗುಲದ ಮುಖ್ಯ ದ್ವಾರದಲ್ಲಿ ಭದ್ರತಾ ಗುಣಮಟ್ಟ ಪರಿಶೀಲನೆ

KannadaprabhaNewsNetwork |  
Published : Nov 13, 2025, 12:15 AM IST
12ಎಚ್ಎಸ್ಎನ್7 : ಬೇಲೂರು ಶ್ರೀ ಚೆನ್ನಕೇಶವ ದೇಗುಲಕ್ಕೆ ಸೂಕ್ತ ಭದ್ರತೆ ವ್ಯವಸ್ಥೆ ಇಲ್ಲ ಎಂದು ವರದಿ ಬಿತ್ತರವಾದ ಹಿನ್ನಲೆಯಲ್ಲಿ  ASC ತಂಡದಿಂದ‌ ಮೆಟಲ್‌ ಡಿಟೆಕ್ಟರ್ ಬಳಸಿ    ಪರಿಶೀಲನೆ ನಡೆಸಲಾಯಿತು. | Kannada Prabha

ಸಾರಾಂಶ

ದೆಹಲಿಯ ಕೆಂಪುಕೋಟೆ ಬಳಿ ಸ್ಪೋಟಗೊಂಡು ಕನಿಷ್ಠ ೧೨ ಜನ ಸಾವನ್ನಪ್ಪಿದ್ದು ಪ್ರಾಥಮಿಕ ತನಿಖೆಯಲ್ಲಿ ಉಗ್ರರ ಕೃತ್ಯ ಎಂದು ತಿಳಿದುಬಂದಿದೆ. ಭದ್ರತಾ ಸುರಕ್ಷತೆಗಾಗಿ ಮುಜರಾಯಿ ಇಲಾಖೆ, ಸಾರ್ವಜನಿಕರ ಪ್ರದೇಶ, ರೈಲು ಹಾಗೂ ಬಸ್ ನಿಲ್ದಾಣ ಬಳಿ ಕಟ್ಟೆಚ್ಚರ ವಹಿಸಿ ಭದ್ರತಾ ಪರಿಶೀಲನೆ ನಡೆಸುವಂತೆ ಹಾಗು ನಿಗಾ ವಹಿಸುವಂತೆ ಸರ್ಕಾರದ ಆದೇಶ ಮಾಡಿದೆ. ಚನ್ನಕೇಶವ ದೇವಾಲಯದಲ್ಲಿ ವಿಧ್ವಂಸಕ‌ ಕೃತ್ಯಗಳ‌ ತಪಾಸಣೆ ತಂಡದಿಂದ ಭದ್ರತಾ ಪರಿಶೀಲನೆ ನಡೆಸಲಾಯಿತು. ಆ್ಯಂಟಿ ಸಬೊಟೆಜ್ ಚೆಕ್ ತಂಡದವರು ಮೆಟಲ್ ಡಿಟೆಕ್ಟರ್‌ಗಳನ್ನು ಉಪಯೋಗಿಸಿ ದೇವಸ್ಥಾನದ ಒಳಭಾಗ ಹಾಗೂ ಸುತ್ತಮುತ್ತಲ ಪ್ರದೇಶವನ್ನು ಸೂಕ್ಷ್ಮವಾಗಿ ಪರಿಶೀಲಿಸಿದರು.

ಕನ್ನಡಪ್ರಭ ವಾರ್ತೆ ಬೇಲೂರುವಿಶ್ವವಿಖ್ಯಾತ ಬೇಲೂರು ಚೆನ್ನಕೇಶವ ದೇಗುಲಕ್ಕೆ ಸೂಕ್ತ ಭದ್ರತೆ ವ್ಯವಸ್ಥೆ ಇಲ್ಲ ಎಂದು ವರದಿ ಬಿತ್ತರವಾದ ಹಿನ್ನೆಲೆಯಲ್ಲಿ ಎಎಸ್‌ಸಿ ತಂಡದಿಂದ‌ ಮೆಟಲ್‌ ಡಿಟೆಕ್ಟರ್‌ ಬಳಸಿ ಭದ್ರತಾ ಗುಣಮಟ್ಟ ಪರಿಶೀಲನೆ ನಡೆಸಲಾಯಿತು.

ಚನ್ನಕೇಶವ ದೇವಾಲಯದಲ್ಲಿ ವಿಧ್ವಂಸಕ‌ ಕೃತ್ಯಗಳ‌ ತಪಾಸಣೆ ತಂಡದಿಂದ ಭದ್ರತಾ ಪರಿಶೀಲನೆ ನಡೆಸಲಾಯಿತು. ಆ್ಯಂಟಿ ಸಬೊಟೆಜ್ ಚೆಕ್ (ASC) ತಂಡದವರು ಮೆಟಲ್ ಡಿಟೆಕ್ಟರ್‌ಗಳನ್ನು ಉಪಯೋಗಿಸಿ ದೇವಸ್ಥಾನದ ಒಳಭಾಗ ಹಾಗೂ ಸುತ್ತಮುತ್ತಲ ಪ್ರದೇಶವನ್ನು ಸೂಕ್ಷ್ಮವಾಗಿ ಪರಿಶೀಲಿಸಿದರು.

ದೆಹಲಿಯ ಕೆಂಪುಕೋಟೆ ಬಳಿ ಸ್ಪೋಟಗೊಂಡು ಕನಿಷ್ಠ ೧೨ ಜನ ಸಾವನ್ನಪ್ಪಿದ್ದು ಪ್ರಾಥಮಿಕ ತನಿಖೆಯಲ್ಲಿ ಉಗ್ರರ ಕೃತ್ಯ ಎಂದು ತಿಳಿದುಬಂದಿದೆ. ಭದ್ರತಾ ಸುರಕ್ಷತೆಗಾಗಿ ಮುಜರಾಯಿ ಇಲಾಖೆ, ಸಾರ್ವಜನಿಕರ ಪ್ರದೇಶ, ರೈಲು ಹಾಗೂ ಬಸ್ ನಿಲ್ದಾಣ ಬಳಿ ಕಟ್ಟೆಚ್ಚರ ವಹಿಸಿ ಭದ್ರತಾ ಪರಿಶೀಲನೆ ನಡೆಸುವಂತೆ ಹಾಗು ನಿಗಾ ವಹಿಸುವಂತೆ ಸರ್ಕಾರದ ಆದೇಶ ಮಾಡಿದೆ.

ವಿಶ್ವವಿಖ್ಯಾತ ಬೇಲೂರಿನ ಶ್ರೀ ಚನ್ನಕೇಶವ ಸ್ವಾಮಿ ದೇಗುಲಕ್ಕೆ ಯಾವುದೇ ಭದ್ರತಾ ಅಧಿಕಾರಿಗಳು ಸಿಬ್ಬಂದಿ ಕರ್ತವ್ಯ ನಿರ್ವಹಿಸದೆ ಬೇಜವಬ್ದಾರಿ ಕೆಲಸ ಮಾಡುತ್ತಿದ್ದಾರೆ. ಬರುವ ಪ್ರವಾಸಿಗರಿಗೆ ಯಾವುದೇ ರೀತಿ ತಪಾಸಣೆಗೊಳಗಾಗದೇ ನಿಯಮ ಮೀರಿ ಎಲ್ಲೆಂದರಲ್ಲಿ ಹಾದು ಹೋಗುತ್ತಿದ್ದಾರೆ. ಮೆಟಲ್ ಡಿಟೆಕ್ಟರ್‌ ಹಾಗೂ ಸಿಸಿಟಿವಿಗಳು ಇದ್ದರೂ ಬಳಕೆ ಮಾಡದಿರುವ ಬಗ್ಗೆ ಪತ್ರಿಕೆ ವರದಿ ಪ್ರಕಟಿಸಿದ ಹಿನ್ನೆಲೆಯಲ್ಲಿ ಎಚ್ಚೆತ್ತ ಅಧಿಕಾರಿಗಳು ಕೂಡಲೇ ಅಲ್ಲಿ ಸಿಬ್ಬಂದಿ ನೇಮಿಸಿ ಸಿಸಿಟಿವಿಗಳು ಸರಿಯಾಗಿ ಕೆಲಸ ಮಾಡಲು ಕ್ರಮ ಕೈಗೊಂಡಿದ್ದಾರೆ. ಈ ಸಂದರ್ಭದಲ್ಲಿ ದೇವಸ್ಥಾನ ಪ್ರದೇಶದ ಭದ್ರತಾ ವ್ಯವಸ್ಥೆ, ಪ್ರವೇಶದ್ವಾರಗಳ ಸ್ಕ್ಯಾನಿಂಗ್ ವ್ಯವಸ್ಥೆ ಹಾಗೂ ಸಿಸಿಟಿವಿ ಕ್ಯಾಮೆರಾಗಳ ಕಾರ್ಯನಿರ್ವಹಣೆಯನ್ನು ಕೂಡ ಪರಿಶೀಲಿಸಲಾಯಿತು. ಭದ್ರತಾ ದೃಷ್ಟಿಯಿಂದ ಯಾವುದೇ ಅನುಮಾನಾಸ್ಪದ ವಸ್ತುಗಳು ಪತ್ತೆಯಾಗಿಲ್ಲವೆಂದು ಮೂಲಗಳು ತಿಳಿಸಿವೆ.

PREV

Recommended Stories

250 ಕೋಟಿ ಹಗರಣ ಕಡತ ನಾಶ ಮಾಡಿದ್ರೂ ಸಿಕ್ಕಿದವು!?
ಬಿಳಿಕೆರೆ ಬಳಿ ಒಂದು ಗಂಡು ಹುಲಿ ಮರಿ ಸೆರೆ