ಲವ್ ಜಿಹಾದ್ ತಡೆಗೆ ಶ್ರೀರಾಮ ಸೇನೆಯಿಂದ ಹೆಲ್ಪ್‌ಲೈನ್

KannadaprabhaNewsNetwork |  
Published : May 30, 2024, 12:46 AM IST
ಲವ್‌ ಜಿಹಾದ್‌ ತಡೆಗೆ ಶ್ರೀರಾಮ ಸೇನೆಯ ಸಹಾಯವಾಣಿ ಕಾರ್ಯಾರಂಭ | Kannada Prabha

ಸಾರಾಂಶ

ಸಹಾಯವಾಣಿ ಮೊಬೈಲ್ ಸಂಖ್ಯೆ 9090443444. ಕೇವಲ ಲವ್‌ ಜಿಹಾದ್‌ ಪ್ರಕರಣಗಳ ಸಹಾಯಾರ್ಥ ಮಾತ್ರವೇ ಈ ನಂಬರ್‌ ಕಾರ್ಯ ನಿರ್ವಹಿಸಲಿದೆ.

ಕನ್ನಡಪ್ರಭ ವಾರ್ತೆ ಮಂಗಳೂರು

ರಾಜ್ಯದಲ್ಲಿ ಲವ್‌ ಜಿಹಾದ್‌ ತಡೆಗಟ್ಟಲು, ಹಿಂದೂ ಯುವತಿಯರ ರಕ್ಷಣೆಗಾಗಿ ಹಾಗೂ ಅವರನ್ನು ಮಾತೃ ಧರ್ಮದಲ್ಲೇ ಉಳಿಸಿಕೊಳ್ಳುವ ನಿಟ್ಟಿನಲ್ಲಿ ಶ್ರೀರಾಮ ಸೇನೆ ಸಹಾಯವಾಣಿ ಆರಂಭಿಸಿದೆ. ರಾಜ್ಯದ ಆರು ಜಿಲ್ಲೆಗಳಲ್ಲಿ ಏಕಕಾಲದಲ್ಲಿ ಈ ಸಹಾಯವಾಣಿ ಬುಧವಾರ ಕಾರ್ಯಾರಂಭ ಮಾಡಿದೆ.ಮಂಗಳೂರಿನ ಆರ್ಯ ಸಮಾಜದಲ್ಲಿ ಬುಧವಾರ ಸಹಾಯವಾಣಿಗೆ ಚಾಲನೆ ನೀಡಿ ಮಾತನಾಡಿದ ಶ್ರೀರಾಮ ಸೇನೆ ರಾಜ್ಯ ಪ್ರಧಾನ ಕಾರ್ಯದರ್ಶಿ ಆನಂದ ಶೆಟ್ಟಿ ಅಡ್ಯಾರ್, ಮಂಗಳೂರು ಸೇರಿದಂತೆ ಹುಬ್ಬಳ್ಳಿ- ಧಾರವಾಡ, ಕಲಬುರ್ಗಿ, ದಾವಣಗೆರೆ ಬಾಗಲಕೋಟೆಯಲ್ಲಿ ಈ ಸಹಾಯವಾಣಿ ಆರಂಭ ಮಾಡಲಾಗಿದೆ. ರಾಜ್ಯದ ಎಲ್ಲೆಡೆಯಿಂದ ಜನರು ಈ ಸಹಾಯವಾಣಿ ಸಂಪರ್ಕ ಮಾಡಬಹುದು ಎಂದು ಹೇಳಿದರು.

ಸಹಾಯವಾಣಿ ಸಂಖ್ಯೆ: ಸಹಾಯವಾಣಿ ಮೊಬೈಲ್ ಸಂಖ್ಯೆ 9090443444. ಕೇವಲ ಲವ್‌ ಜಿಹಾದ್‌ ಪ್ರಕರಣಗಳ ಸಹಾಯಾರ್ಥ ಮಾತ್ರವೇ ಈ ನಂಬರ್‌ ಕಾರ್ಯ ನಿರ್ವಹಿಸಲಿದೆ. ಲವ್ ಜಿಹಾದ್‌ಗೆ ಒಳಪಡುವ ಯುವತಿಯರು ತಮ್ಮ ನೋವನ್ನು ಯಾರಲ್ಲೂ ಹೇಳಿಕೊಳ್ಳಲಾಗದೆ ಕೊರಗುತ್ತಿರುತ್ತಾರೆ. ಅಂಥವರು ಈ ಸಂಖ್ಯೆಗೆ ಕರೆ ಮಾಡಿ ಸಹಾಯ ಕೋರಬಹುದು. ಅಲ್ಲದೆ, ಯುವತಿಯರ ಮನೆಯವರು, ಹಿತೈಷಿಗಳು ಕೂಡ ಕರೆ ಮಾಡಬಹುದು ಎಂದು ಆನಂದ ಶೆಟ್ಟಿ ಅಡ್ಯಾರು ತಿಳಿಸಿದರು.ಕಾನೂನು ಮೀರಲ್ಲ: ಶ್ರೀರಾಮ ಸೇನೆಯ ಈ ಸಹಾಯವಾಣಿ ತಂಡದಲ್ಲಿ ಹಿರಿಯ ಸಲಹೆಗಾರರು, ಕೌನ್ಸೆಲರ್‌ಗಳು, ಮಾಜಿ ಪೊಲೀಸ್‌ ಅಧಿಕಾರಿಗಳು, ವಕೀಲರ ತಂಡ ಇರಲಿದೆ. ಪ್ರಕರಣ ಗಮನಕ್ಕೆ ಬಂದ ಕೂಡಲೆ ಆ ಘಟನೆ ಯಾವ ಹಂತದಲ್ಲಿದೆ ಎಂಬುದನ್ನು ಪರಿಶೀಲಿಸಿ, ಕರೆ ಮಾಡಿದವರ ಸತ್ಯಾಸತ್ಯತೆ ಖಚಿತಪಡಿಸಿಕೊಂಡು ಸೂಕ್ತ ಸಹಾಯಹಸ್ತ ನೀಡಲಾಗುವುದು. ಯಾವುದೇ ಕಾರಣಕ್ಕೂ ಈ ಸಹಾಯವಾಣಿ ತಂಡ ಕಾನೂನು ಮೀರಿ ಹೋಗಲ್ಲ. ಅನೈತಿಕ ಪೊಲೀಸ್ ಗಿರಿ ಮಾಡಲ್ಲ ಎಂದು ಹೇಳಿದರು.

ವರ್ಷದೊಳಗೆ 14 ಪ್ರಕರಣ:

ಕಳೆದೊಂದು ವರ್ಷದಿಂದ ರಾಜ್ಯದ ವಿವಿಧೆಡೆಗಳ 14 ಲವ್‌ ಜಿಹಾದ್‌ ಪ್ರಕರಣಗಳನ್ನು ನಮ್ಮ ಸಂಘಟನೆ ಭೇದಿಸಿದೆ. ಇವುಗಳಲ್ಲಿ ನಾಲ್ಕು ಪ್ರಕರಣಗಳು ಇತ್ಯರ್ಥದ ಕೊನೆ ಹಂತದಲ್ಲಿದ್ದರೆ, 10 ಪ್ರಕರಣಗಳು ಇನ್ನೂ ಚಾಲ್ತಿಯಲ್ಲಿದ್ದು, ಸಹಾಯವಾಣಿಯ ಮೂಲಕ ಅವುಗಳನ್ನು ನಿಭಾಯಿಸಲಿದ್ದೇವೆ. ಮುಂಬರುವ ಎಲ್ಲ ಪ್ರಕರಣಗಳಲ್ಲೂ ಹಿಂದೂ ಯುವತಿಯರ ರಕ್ಷಣೆಗೆ ಈ ಸಹಾಯವಾಣಿ ಬದ್ಧವಾಗಿದೆ ಎಂದರು.

ದೇಶಾದ್ಯಂತ ಈಗಲೂ ಲವ್‌ ಜಿಹಾದ್‌ ಪ್ರಕರಣಗಳು ಅಲ್ಲಲ್ಲಿ ಬೆಳಕಿಗೆ ಬರುತ್ತಿರುವುದು ಕಳವಳಕಾರಿ ಸಂಗತಿ. ಇದರ ವಿರುದ್ಧ ರಾಜಕೀಯ ಹೊರತಾಗಿಯೂ ಹೋರಾಟ ನಡೆಸಬೇಕಾದ ಅನಿವಾರ್ಯತೆಯಿದೆ. ಲವ್‌ ಜಿಹಾದ್‌ ಜಾಲವನ್ನು ನಿಷ್ಕ್ರಿಯಗೊಳಿಸಲು ಹಿಂದೂ ಯುವತಿಯರು ಕೂಡ ಮುನ್ನೆಚ್ಚರಿಕೆ ವಹಿಸಬೇಕು ಎಂದು ಹೇಳಿದರು.

ಶ್ರೀರಾಮ ಸೇನೆ ಮಂಗಳೂರು, ಉಡುಪಿ ವಿಭಾಗ ಅಧ್ಯಕ್ಷ ಮಧುಸೂಧನ್‌ ಉರ್ವಸ್ಟೋರ್‌, ಉಡುಪಿ ಜಿಲ್ಲಾಧ್ಯಕ್ಷ ಜಯರಾಮ್ ಅಂಬೆಕಲ್ಲು, ಹಾಸನ ಜಿಲ್ಲಾಧ್ಯಕ್ಷ ಹೇಮಂತ ಜಾನಕೆರೆ, ಮಂಗಳೂರು ಕಾರ್ಯಾಧ್ಯಕ್ಷ ಅರುಣ್‌ ಕದ್ರಿ, ಉಡುಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸುದರ್ಶನ್‌ ಪೂಜಾರೆ ಇದ್ದರು.ಮುಸ್ಲಿಂ ಯುವತಿಯರು ಬಂದರೆ ರಕ್ಷಣೆ

ಮುಸ್ಲಿಂ ಯುವತಿಯರು ಸ್ವಯಂ ಪ್ರೇರಣೆಯಿಂದ ವಿವಾಹವಾಗಿ ಹಿಂದೂ ಧರ್ಮಕ್ಕೆ ಬಂದರೆ ಅವರನ್ನು ಸ್ವೀಕಾರ ಮಾಡುವುದು ಮಾತ್ರವಲ್ಲ, ಅವರಿಗೆ ರಕ್ಷಣೆ ಕೊಡುತ್ತೇವೆ. ಹಿಂದೂ ಸಂಸ್ಕಾರವನ್ನು ಕಲಿಸುತ್ತೇವೆ ಎಂದೂ ಆನಂದ ಶೆಟ್ಟಿ ಅಡ್ಯಾರು ತಿಳಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಸಿದ್ದರಾಮಯ್ಯ ಭೇಟಿ ಮಾಡಿದ ರಮೇಶ್‌ ಜಾರಕಿಹೊಳಿ : ಕುತೂಹಲ!
ಬೆಂಗ್ಳೂರಲ್ಲಿರುವ ನಟಿ ಶಿಲ್ಪಾ ಶೆಟ್ಟಿ ಪಬ್‌ ಮೇಲೆ ಐಟಿ ದಾಳಿ