ಹೇಮರಡ್ಡಿ ಮಲ್ಲಮ್ಮ ಒಂದು ಜಾತಿಗೆ ಸೀಮಿತರಲ್ಲ: ಅಭಿನವ ಮೃತ್ಯುಂಜಯ ಶ್ರೀ

KannadaprabhaNewsNetwork |  
Published : May 12, 2026, 02:45 AM IST
ಪೋಟೊ ಕ್ಯಾಪ್ಸನ್:ಡಂಬಳ ಗ್ರಾಮದ ಹೇಮರಡ್ಡಿ ಮಲ್ಲಮ್ಮ ದೇವಸ್ಥಾನದ ಆವರಣದಲ್ಲಿ  ಹೇಮರಡ್ಡಿ ಮಲ್ಲಮ್ಮ ಸೇವಾ ಸಮಿತಿ, ಕಪ್ಪತ್ತಮಲ್ಲೇಶ್ವರ ಟ್ರಸ್ಟ್ ಕಮೀಟಿ ಇವರ ಸಂಯೋಗದಲ್ಲಿ ಮಹಾಸಾದ್ವಿ ಶಿವಶರಣೆ ಹೇಮರಡ್ಡಿ ಮಲ್ಲಮ್ಮ ಅವರ 604ನೇ ಜಯಂತೋತ್ಸವದ ಧರ್ಮಸಭೆಯ ಸಾನಿಧ್ಯ ವಹಿಸಿ ಆಶೀರ್ವಚನ ನೀಡಿದ ಮಣಕವಾಡದ ಅಭಿನವ ಮೃತ್ಯುಂಜಯ ಮಹಾಸ್ವಾಮಿಗಳು. | Kannada Prabha

ಸಾರಾಂಶ

ಸಂಸಾರದ ಜಂಜಾಟಗಳ ನಡುವೆಯೂ ಭಕ್ತಿ ಮತ್ತು ಸಹನೆಯಿಂದ ಅಧ್ಯಾತ್ಮದ ಉತ್ತುಂಗಕ್ಕೇರಿದ ಹೇಮರಡ್ಡಿ ಮಲ್ಲಮ್ಮನವರ ಜೀವನ ಆಧುನಿಕ ಯುಗದ ಸ್ತ್ರೀಯರಿಗೆ ಹಾಗೂ ಸಮಾಜಕ್ಕೆ ದಾರಿದೀಪವಾಗಿದೆ.

ಡಂಬಳ: ಹೇಮರಡ್ಡಿ ಮಲ್ಲಮ್ಮ ತಾಯಿ ಒಂದು ಜಾತಿಗೆ ಸೀಮಿತವಲ್ಲ. ಸಹನಾ ಶಕ್ತಿಯಾಗಿ ತ್ಯಾಗ, ನ್ಯಾಯ, ಕಾಯಕದ ಮೂಲಕ ಅವರು ಹಾಕಿಕೊಟ್ಟಿರುವ ವಿಚಾರಗಳು, ಅವರು ತೋರಿದ ತಾಳ್ಮೆ ಮತ್ತು ಭಕ್ತಿಯ ಹಾದಿಯಲ್ಲಿ ಸಾಗಬೇಕು ಎಂದು ಮಣಕವಾಡದ ಅಭಿನವ ಮೃತ್ಯುಂಜಯ ಸ್ವಾಮಿಗಳು ತಿಳಿಸಿದರು.

ಗ್ರಾಮದ ಹೇಮರಡ್ಡಿ ಮಲ್ಲಮ್ಮ ದೇವಸ್ಥಾನದ ಆವರಣದಲ್ಲಿ ಹೇಮರಡ್ಡಿ ಮಲ್ಲಮ್ಮ ಸೇವಾ ಸಮಿತಿ, ಕಪ್ಪತ್ತಮಲ್ಲೇಶ್ವರ ಟ್ರಸ್ಟ್ ಕಮಿಟಿ ಸಹಯೋಗದಲ್ಲಿ ಮಹಾಸಾಧ್ವಿ ಹೇಮರಡ್ಡಿ ಮಲ್ಲಮ್ಮನವರ ಜಯಂತ್ಯುತ್ಸವದ ಧರ್ಮಸಭೆಯ ಸಾನ್ನಿಧ್ಯ ವಹಿಸಿ ಮಾತನಾಡಿ, ಸಂಸಾರದ ಜಂಜಾಟಗಳ ನಡುವೆಯೂ ಭಕ್ತಿ ಮತ್ತು ಸಹನೆಯಿಂದ ಅಧ್ಯಾತ್ಮದ ಉತ್ತುಂಗಕ್ಕೇರಿದ ಹೇಮರಡ್ಡಿ ಮಲ್ಲಮ್ಮನವರ ಜೀವನ ಆಧುನಿಕ ಯುಗದ ಸ್ತ್ರೀಯರಿಗೆ ಹಾಗೂ ಸಮಾಜಕ್ಕೆ ದಾರಿದೀಪವಾಗಿದೆ ಎಂದರು.

ಹೇಮರೆಡ್ಡಿ ಮಲ್ಲಮ್ಮ ಸ್ತ್ರೀಕುಲಕ್ಕೆ ತಿಲಕ. ಇಂದಿನ ತಾಂತ್ರಿಕ ಯುಗದಲ್ಲಿ ಮನುಷ್ಯ ಸಣ್ಣಪುಟ್ಟ ಕಷ್ಟಗಳಿಗೂ ಧೃತಿಗೆಡುತ್ತಿದ್ದಾನೆ. ಅಂತಹ ಸಂದರ್ಭದಲ್ಲಿ ಮಲ್ಲಮ್ಮನವರ ಬದುಕು ನಮಗೆ ಸ್ಥಿತಪ್ರಜ್ಞೆ ಕಲಿಸುತ್ತದೆ. ಸ್ತ್ರೀ ಶಕ್ತಿಯ ಸಂಕೇತವಾಗಿರುವ ಅವರು, ಸಂಸಾರದಲ್ಲಿದ್ದುಕೊಂಡೇ ಅಧ್ಯಾತ್ಮದ ಉತ್ತುಂಗ ಹೇಗೆ ತಲುಪಬಹುದು ಎಂಬುದನ್ನು ಮಾನವಕುಲಕ್ಕೆ ತೋರಿಸಿಕೊಟ್ಟ ಮಹಾನ್ ಮಾತೆ ಎಂದರು.

ಹರ್ಲಾಪುರದ ಡಾ. ಅಭಿನವ ಕೊಟ್ಟೂರೇಶ್ವರ ಸ್ವಾಮಿಗಳು ಮಾತನಾಡಿ, ಧರ್ಮ, ನಿಸ್ವಾರ್ಥ, ಅಹಿಂಸೆ, ಸತ್ಯ, ನ್ಯಾಯಯುತವಾಗಿ ನಡೆದು ಮಾದರಿ ಜೀವನ ಸಾಗಿಸಿದವರು ಹೇಮರಡ್ಡಿ ಮಲ್ಲಮ್ಮ. ಅವರು ಎಲ್ಲ ಮಹಿಳೆಯರಿಗೆ ಆದರ್ಶ ಎಂದರು.

ಜೆ.ಟಿ. ಮಠದ ವ್ಯವಸ್ಥಾಪಕ ಜಿ.ವಿ. ಹಿರೇಮಠ ಪ್ರಾಸ್ತಾವಿಕವಾಗಿ ಮಾತನಾಡಿದರು. ಕಾರ್ಯಕ್ರಮದಲ್ಲಿ ವೇ.ಮೂ. ರಾಜಶೇಖರಯ್ಯ ಹಿರೇಮಠ, ಅಧ್ಯಕ್ಷ ಮಲ್ಲಿಕಾರ್ಜುನ ಪ್ಯಾಟಿ, ಉಪಾಧ್ಯಕ್ಷ ಬಸವರಾಜ ಶಿರೋಳ, ಕಾರ್ಯದರ್ಶಿ ಶಶಿಕುಮಾರ ಸಣ್ಣಪ್ಯಾಟಿ, ಹಿರಿಯರು ವಿ.ಟಿ. ಮೇಟಿ, ಮಹೇಶ ಗಡಗಿ, ಮಲ್ಲಣ್ಣ ಯರಾಶಿ, ಸಿ.ಟಿ. ಪ್ಯಾಟಿ, ಮುಖಂಡ ಬಸವರಡ್ಡಿ ಬಂಡಿಹಾಳ, ಶರಣು ಬಂಡಿಹಾಳ, ಸುರೇಶ ಗಡಗಿ, ಮಹೇಶ ಕವಲೂರ, ಮುತ್ತಣ್ಣ ಕೊಂತಿಕಲ್ಲ, ಹೇಮಣ್ಣ ಕುಸುಗಲ್ಲ, ಶಿರಗೂರಪ್ಪ ಚಿಕರಡ್ಡಿ, ಪರಡ್ಡಿ ಬಾವಿ, ಕುಮಾರಡ್ಡಿ ಪ್ಯಾಟಿ, ಬಾಳಪ್ಪ ಗಡಗಿ, ಮುತ್ತಣ್ಣ ಅಣ್ಣಿಗೇರಿ, ಶ್ರೀಧರ ಪ್ಯಾಟಿ, ಶಿವು ಕೆಂಚರಡ್ಡಿ, ಭೀಮಪ್ಪ ಗದಗಿನ, ಸಿದ್ದು ಗಡಗಿ, ಯಂಕಣ್ಣ ಗಡಗಿ, ಶಂಕ್ರಪ್ಪ ಗಡಗಿ, ಸಂತೋಷ ಮಾಳೆಕೊಪ್ಪ, ಶ್ರೀದೇವಿ ಹಿರೇಮಠ, ಜ್ಯೋತಿ ಬಾವಿ, ಜ್ಯೋತಿ ಗಡಗಿ, ರಾಜೇಶ್ವರಿ ಗಡಗಿ, ನಂದಿತಾ ಪ್ಯಾಟಿ, ನೀಲಾಂಬಿಕಾ ಗಡಗಿ, ಮಲ್ಲಮ್ಮ ಕುಸುಗಲ್ಲ, ನಿರ್ಮಲಾ ಕೊಂತಿಕಲ್ಲ, ಸುಮಂಗಲಾ ಶಿರೋಳ, ಇಂದುಮತಿ ಕೊಂತಿಕಲ್ಲ, ವಿಶಾಲಾ ಕೊಂತಿಕಲ್ಲ, ಮಂಜುನಾಥ ಬಿಸನಳ್ಳಿ ಇತರರು ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಜಿಲ್ಲಾ ಸಮ್ಮೇಳನಾಧ್ಯಕ್ಷ ಅಬ್ದುಲ್ ರಶೀದ್‌ಗೆ ಕಸಾಪ ಆಹ್ವಾ‌ನ
ಕುಡಿವ ನೀರಿನ ಸಮಸ್ಯೆ ಉದ್ಭವಿಸದಂತೆ ನೋಡಿಕೊಳ್ಳಿ: ದೇಶಪಾಂಡೆ