ಹೇಮರಡ್ಡಿ ಮಲ್ಲಮ್ಮ ಮನುಕುಲದ ಸ್ತ್ರೀ ರತ್ನ: ಮರುಳಾರಾಧ್ಯ ಶಿವಾಚಾರ್ಯ ಸ್ವಾಮಿಗಳು

KannadaprabhaNewsNetwork |  
Published : May 28, 2024, 01:01 AM IST
 26ಕೆಪಿಎಲ್25  ಅಳವಂಡಿ ಗ್ರಾಮದಲ್ಲಿ ನಡೆದ ಶ್ರೀಹೇಮರಡ್ಡಿ ಮಲ್ಲಮ್ಮ ಜಯಂತಿ ಅಂಗವಾಗಿ ನಡೆದ ಮೆರವಣಿಗೆ ಕಾರ್ಯಕ್ರಮದಲ್ಲಿ ಮಹಿಳೆಯರ ಕಳಸ ಹಾಗೂ ಕುಂಭ ಮೆರವಣಿಗೆ ನಡೆಯಿತು. ಗ್ರಾಮಸ್ಥರು ಇದ್ದರು. | Kannada Prabha

ಸಾರಾಂಶ

ಶಿವಶರಣೆ ಹೇಮರಡ್ಡಿ ಮಲಮ್ಮ ಅವರ ಬದುಕು ಮಹಿಳೆಯರ ಬದುಕಿಗೆ ಮಾರ್ಗದರ್ಶನವಾಗಿದೆ.

ಕನ್ನಡಪ್ರಭ ವಾರ್ತೆ ಕೊಪ್ಪಳ

ಶಿವಶರಣೆ ಹೇಮರಡ್ಡಿ ಮಲ್ಲಮ್ಮ ಅವರ ಬದುಕು ಮಹಿಳೆಯರ ಬದುಕಿಗೆ ಮಾರ್ಗದರ್ಶನವಾಗಿದೆ. ಹೀಗಾಗಿ ಮಲ್ಲಮ್ಮ ಮನುಕುಲದ ಸ್ತ್ರೀ ರತ್ನ ಎಂದು ಶ್ರೀಸಿದ್ದೇಶ್ವರ ಮಠದ ಮರುಳಾರಾಧ್ಯ ಶಿವಾಚಾರ್ಯ ಸ್ವಾಮಿಗಳು ತಿಳಿಸಿದರು.

ತಾಲೂಕಿನ ಅಳವಂಡಿ ಗ್ರಾಮದಲ್ಲಿ ಶ್ರೀಶಿವಶರಣೆ ಹೇಮರಡ್ಡಿ ಮಲ್ಲಮ್ಮ ಕ್ಷೇಮಾಭಿವೃದ್ದಿ ಸೇವಾ ಸಮಿತಿ ಹಾಗೂ ಗ್ರಾಮಸ್ಥರ ವತಿಯಿಂದ ಭಾನುವಾರ ನಡೆದ ಶಿವಶರಣೆ ಹೇಮರಡ್ಡಿ ಮಲ್ಲಮ್ಮ ಜಯಂತಿ ಅಂಗವಾಗಿ ನಡೆದ ಮೆರವಣಿಗೆ ಕಾರ್ಯಕ್ರಮಕ್ಕೆ ಭಾನುವಾರ ಚಾಲನೆ ನೀಡಿ ಮಾತನಾಡಿದರು.

ದಾಸೋಹದ ಪರಿಕಲ್ಪನೆಯನ್ನು ಸಮಾಜಕ್ಕೆ ತಿಳಿಸಿದ ಮಹಾ ತಾಯಿ ಮಲ್ಲಮ್ಮ. ಸಂಕಲ್ಪ ಶಕ್ತಿ, ಏಕನಿಷ್ಟೆಯಿಂದ ಲೋಕ ಪೂಜಿತ ವ್ಯಕ್ತಿಯಾಗಿದ್ದಾಳೆ. ಕೌಟುಂಬಿಕ ಸಮಸ್ಯಗಳನ್ನು ಮೆಟ್ಟಿ ನಿಂತು ಸಮಾಜದಲ್ಲಿ ಹೆಣ್ಣಿನ ಮಹತ್ವವನ್ನು ವಿಶ್ವಕ್ಕೆ ಸಾರಿದ್ದಾಳೆ. ವಿಶ್ವಕ್ಕೆ ಮಹಾನ್ ದಾರ್ಶನಿಕ ಯೋಗಿ ವೇಮನನ್ನು ಕೊಟ್ಟಂತ ತಾಯಿಯಾಗಿದ್ದಾಳೆ. ಇಂತಹ ಧಾರ್ಮಿಕ ಕಾರ್ಯಗಳನ್ನು ಸಂಘಟನಾತ್ಮಕವಾಗಿ ಆಚರಿಸುವುದರಿಂದ ಎಲ್ಲರಲ್ಲೂ ಒಂದೇ ಎಂಬ ಭಾವನೆ ಮೂಡಲಿದೆ ಎಂದರು.

ತಳಿರು ತೋರಣ ಹಾಗೂ ಹೂಗಳಿಂದ ಅಲಂಕರಿಸಿದ ತೆರೆದ ವಾಹನದಲ್ಲಿ ಮಲ್ಲಮ್ಮ ಹಾಗೂ ವೇಮನರ ಭಾವಚಿತ್ರವನ್ನಿರಿಸಿ ಮಹಿಳೆಯರ ಕುಂಭ, ಕಳಸ ಹಾಗೂ ವಾದ್ಯ ಮೇಳದೊಂದಿಗೆ ಬನ್ನಿಕಟ್ಟಿಯಿಂದ ಪ್ರಾರಂಭವಾದ ಮೆರವಣಿಗೆ ಗ್ರಾಮದ ಪ್ರಮುಖ ಬೀದಿಗಳಲ್ಲಿ ಸಂಚರಿಸಿ ಶ್ರೀ ಮಾರುತೇಶ್ವರ ದೇವಸ್ಥಾನದವರೆಗೂ ನಡೆಯಿತು. ನಂತರ ದಾಸೋಹ ಕಾರ್ಯಕ್ರಮ ನಡೆಯಿತು,

ಪ್ರಮುಖರಾದ ಕರಬಸಪ್ಪ ಹಂಚಿನಾಳ, ಬಸವರಾಜ ಮೇಟಿ, ಶ್ರೀನಿವಾಸ ಹ್ಯಾಟಿ, ಪ್ರದೀಪಗೌಡ ಮಾಲಿಪಾಟೀಲ, ಗುರುಬಸವರಾಜ ಹಳ್ಳಿಕೇರಿ, ಸಂಜೀವರಡ್ಡಿ ಮಾದಿನೂರ, ನವೋದಯ ವಿರುಪಾಕ್ಷಪ್ಪ, ಶಂಕರಗೌಡ ಹಿರೇಗೌಡರ, ಚಂದ್ರಶೇಖರ ಶಿಂಗಟಾಲೂರ, ರವೀಂದ್ರ ಸಂಗರಡ್ಡಿ, ಬಸವರಾಜ ಹಾರೋಗೇರಿ, ಅಂದಾನಗೌಡ ಪೋಲಿಸಪಾಟೀಲ, ಭರಮಪ್ಪ ನಗರ, ತೋಟಪ್ಪ ಶಿಂಟ್ರ, ಹೊನ್ನಪ್ಪಗೌಡ, ಚೌಡಪ್ಪ ಜಂತ್ಲಿ, ನಾಗಪ್ಪ ಸವಡಿ, ಗುರುಮೂರ್ತಿಸ್ವಾಮಿ, ದೇವಪ್ಪ ಕಟ್ಟಿಮನಿ, ಪ್ರಕಾಶಸ್ವಾಮಿ, ಮಲ್ಲಪ್ಪ ಬೆಣಕಲ್, ಹನುಮಂತ, ತೋಟಯ್ಯ ಹಾಗೂ ಸಮಾಜದ ಮುಖಂಡರು ಹಾಗೂ ಇತರರು ಇದ್ದರು.

PREV

Recommended Stories

ಮಾನಸಿಕ ದೈಹಿಕ ಸದೃಢತೆಗೆ ಕ್ರೀಡೆ ಸಹಕಾರಿ
ಸಭೆಯಲ್ಲಿ ಪುರಸಭೆ ಮಳಿಗೆಗಳ ಹರಾಜಿನ ಗದ್ದಲ