ಹೇಮರಡ್ಡಿ ಮಲ್ಲಮ್ಮ ಮಹಿಳಾಕುಲಕ್ಕೆ ಮಾದರಿ: ಕೃಷ್ಣಗೌಡ ಪಾಟೀಲ

KannadaprabhaNewsNetwork |  
Published : Nov 23, 2025, 03:00 AM IST
ಗದಗ ವೀರೇಶ್ವರ ಪುಣ್ಯಾಶ್ರಮದಲ್ಲಿ ಕಾರ್ತಿಕ ಮಾಸದ ದೀಪೋತ್ಸವ ಕಾರ್ಯಕ್ರಮ ನಡೆಯಿತು. | Kannada Prabha

ಸಾರಾಂಶ

ಶಿವಶರಣೆ ಹೇಮರೆಡ್ಡಿ ಮಲ್ಲಮ್ಮನವರ ತತ್ವಾದರ್ಶಗಳು ಸಾರ್ವಕಾಲಿಕ ಶ್ರೇಷ್ಠವಾಗಿವೆ ಪ್ರತಿಯೊಬ್ಬರೂ ತಮ್ಮ ಜೀವನದಲ್ಲಿ ಅಳವಡಿಸಿಕೊಂಡರೇ ನೆಮ್ಮದಿಯಿಂದ ಜೀವನ ನಡೆಸಲು ಸಾಧ್ಯವಾಗುತ್ತದೆ.

ಗದಗ: ಮಹಾಸಾಧ್ವಿ ಶಿವಶರಣೆ ಹೇಮರಡ್ಡಿ ಮಲ್ಲಮ್ಮ ಸಾಕಷ್ಟು ಕಷ್ಟ ಬಂದರೂ ದೃತಿಗೆಡದೇ ಕಠೋರ ತಪಸ್ಸು ಮಾಡುವ ಮೂಲಕ ಶಿವನೊಲುಮೆಯನ್ನು ಪಡೆದು ಸಮಾಜದ ಉದ್ಧಾರಕ್ಕಾಗಿ ಬಾಳಿ ಬದುಕಿ ಇಡೀ ವಿಶ್ವದ ಮಾನವ ಕುಲಕ್ಕೆ ಮತ್ತು ಸರ್ವ ಸಮಾಜದ ಮಹಿಳೆಯರಿಗೆ ಮಾದರಿಯಾಗಿದ್ದಾಳೆ ಎಂದು ಜಿಲ್ಲಾ ಯುವ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಕೃಷ್ಣಗೌಡ ಎಚ್.ಪಾಟೀಲ ಹೇಳಿದರು.ನಗರದ ವೀರೇಶ್ವರ ಪುಣ್ಯಾಶ್ರಮದಲ್ಲಿ ಜಿಲ್ಲಾ ಶಿವಶರಣೆ ಹೇಮರಡ್ಡಿ ಮಲ್ಲಮ್ಮ, ಶ್ರೀ ಮಹಾಯೋಗಿ ವೇಮನ ರಡ್ಡಿ ಸಮಾಜ ಸಂಘದ ಆಶ್ರಯದಲ್ಲಿ ನಡೆದ ಕಾರ್ತಿಕ ಮಾಸದ ದೀಪೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.ಶಿವಶರಣೆ ಹೇಮರೆಡ್ಡಿ ಮಲ್ಲಮ್ಮನವರ ತತ್ವಾದರ್ಶಗಳು ಸಾರ್ವಕಾಲಿಕ ಶ್ರೇಷ್ಠವಾಗಿವೆ ಪ್ರತಿಯೊಬ್ಬರೂ ತಮ್ಮ ಜೀವನದಲ್ಲಿ ಅಳವಡಿಸಿಕೊಂಡರೇ ನೆಮ್ಮದಿಯಿಂದ ಜೀವನ ನಡೆಸಲು ಸಾಧ್ಯವಾಗುತ್ತದೆ. ಮಲ್ಲಮ್ಮನವರು ತಾಳ್ಮೆಯ ಪ್ರತಿರೂಪ, ಸ್ತ್ರೀಯರು ತಾಳ್ಮೆಯಿಂದ ಇದ್ದರೆ ಸಾಧನೆ ಮಾಡಬಹದು ಎನ್ನುವುದಕ್ಕೆ ಹೇಮರೆಡ್ಡಿ ಮಲ್ಲಮ್ಮ ಸಾಕ್ಷಿ ಎಂದು ತಿಳಿಸಿದರು.ಶಿವಶರಣೆ ಹೇಮರೆಡ್ಡಿ ಮಲ್ಲಮ್ಮ ಸಮಾಜಕ್ಕೆ ಆಗಾಧವಾದ ಕೊಡುಗೆ ನೀಡಿದ್ದಾರೆ. ಅದನ್ನು ಎಂದಿಗೂ ಮರೆಯಲು ಸಾಧ್ಯವಿಲ್ಲ. ಮಲ್ಲಮ್ಮನ ಕಾಯಕನಿಷ್ಠೆ, ದೈವಭಕ್ತಿ ಮತ್ತು ಆದರ್ಶಮಯ ಜೀವನದ ಬಲದಿಂದ ಇಂದು ನಾವು ನೀವೆಲ್ಲರೂ ನೆಮ್ಮದಿಯ ಬದುಕು ಕಟ್ಟಿಕೊಂಡಿದ್ದೇವೆ ಎಂದರು.ಈ ವೇಳೆ ಸಮಾಜದ ಪ್ರಮುಖರಾದ ರವೀಂದ್ರನಾಥ ಮೂಲಿಮನಿ, ಎಸ್.ಆರ್.ಹಳ್ಳೂರ, ಎಸ್.ಪಿ.ಪಾಟೀಲ, ಶಂಕರ ಮುದರಡ್ಡಿ, ಬಿ.ಎಚ್.ಮಂಕಣಿ, ವಿ.ಕೆ.ಚೂರಿ, ರವೀಂದ್ರನಾಥ ಕುಲಕರ್ಣಿ, ಎಸ್.ಡಿ.ಗಡಾದ, ಬಿ.ಎಸ್.ಗಿರಡ್ಡಿ, ಬಿ.ಎಂ.ಅವರಡ್ಡಿ, ಮಲ್ಲನಗೌಡ ಕಲಾದಗಿ, ವಿ.ವಿ.ಚೇಗರಡ್ಡಿ, ಬಾಬು ಮಲ್ಲನಗೌಡರ, ರಾಘು ಹೊಸಮನಿ, ಎಸ್.ಎಸ್.ರಡ್ಡೇರ, ಪ್ರಕಾಶ ಬಸರಿಗಿಡದ, ವಿ.ಆರ್.ಬಾಣಾಪೂರ, ಎ.ಎಸ್.ರಡ್ಡೇರ, ದೇವರಡ್ಡಿ ತಿರ್ಲಾಪೂರ, ಜಗದೀಶ ಪ್ಯಾಟಿ, ಎಂ.ಎಸ್.ಕಲಾದಗಿ, ಕೆ.ಬಿ.ಕೊಣ್ಣೂರ, ಪ್ರೇಮಾ ಮೇಟಿ, ಲಕ್ಷ್ಮೀ ಹಳ್ಳೂರ, ಭಾಗ್ಯ ಶಿರೋಳ, ಸರೋಜಾ ಪೈಲ್, ಪುಷ್ಪಾ ಅಬ್ಬಿಗೇರಿ, ಲೀಲಾ ಮುದರಡ್ಡಿ, ಮಂಜುಳಾ ಚಿಂಚಲಿ, ಮಧು ಪಾಟೀಲ, ಶೋಭಾ ಮೇಟಿ, ರಾಜೇಶ್ವರಿ ಶಿರೋಳ ಸೇರಿದಂತೆ ಮುಂತಾದವರು ಇದ್ದರು.

PREV

Recommended Stories

ಸಾಮಾಜಿಕ ಸಮಸ್ಯೆ ಬಗ್ಗೆ ಕವಿತೆ ಮೂಡಿ ಬರಲಿ
ವಿವಾಹ ವಿಚ್ಛೇದನದಿಂದ ಕುಟುಂಬ ವ್ಯವಸ್ಥೆಯ ಮೇಲೆ ಪೆಟ್ಟು: ಸ್ವರ್ಣವಲ್ಲೀ ಶ್ರೀ