ಮೈಲಾಪುರ ಗ್ರಾಮದಲ್ಲಿ ಹೇಮರಡ್ಡಿ ಮಲ್ಲಮ್ಮ ಜಯಂತಿಕನ್ನಡಪ್ರಭ ವಾರ್ತೆ ನವಲಿ
ಇಲ್ಲಿನ ಸಮೀಪದ ಮೈಲಾಪುರ ಗ್ರಾಮದಲ್ಲಿ ರಡ್ಡಿ ಸಮಾಜದ ವತಿಯಿಂದ ಹೇಮರೆಡ್ಡಿ ಮಲ್ಲಮ್ಮನ 602ನೇ ಜಯಂತಿ ಹಮ್ಮಿಕೊಳ್ಳಲಾಗಿತ್ತು.ಹರಿಹರ ಪೀಠದ ಶ್ರೀ ವೇಮಾನಂದ ಸ್ವಾಮೀಜಿ ಹಾಗೂ ಗಣ್ಯರು ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ಕೊಪ್ಪಳ ಜಿಲ್ಲಾ ಉಸ್ತುವಾರಿ ಸಚಿವ ಶಿವರಾಜ್ ಎಸ್. ತಂಗಡಗಿ ಮಾತನಾಡಿ, ರಡ್ಡಿ ಸಮಾಜ ಎಂದರೆ ಎಲ್ಲ ಸಮಾಜವನ್ನು ಒಟ್ಟುಗೂಡಿಸಿಕೊಂಡು ಹೋಗುವಂಥದ್ದು. ಆರ್ಥಿಕವಾಗಿ, ಶೈಕ್ಷಣಿಕವಾಗಿ, ಸಾಮಾಜಿಕವಾಗಿ, ರಾಜಕೀಯವಾಗಿ ಬಲಿಷ್ಠವಾಗಿ ಬೆಳೆದು ಬಂದ ಸಮಾಜ ಎಂದು ಹೇಳಿದರು.ಕಾಂಗ್ರೆಸ್ ಜಿಲ್ಲಾಧ್ಯಕ್ಷ ಅಮರೇಗೌಡ ಪಾಟೀಲ್ ಬಯ್ಯಾಪುರ ಮಾತನಾಡಿ, ಶಿವಶರಣೆ ಹೇಮರಡ್ಡಿ ಮಲ್ಲಮ್ಮನ ಜೀವನ ಎಲ್ಲರಿಗೂ ಮಾದರಿಯಾಗಿದೆ. ಹೇಮರಡ್ಡಿ ಮಲ್ಲಮ್ಮನ ಜಯಂತಿಯನ್ನು ಸರ್ಕಾರದ ವತಿಯಿಂದ ಆಚರಿಸಲು ಮುಖ್ಯಮಂತ್ರಿ ಸಿದ್ದರಾಮಯ್ಯ ಆದೇಶ ಹೊರಡಿಸಿದ್ದು, ಸಮಾಜದ ಬೇಡಿಕೆ ಈಡೇರಿದಂತಾಗಿದೆ ಎಂದು ಹೇಳಿದರು.
ಮಲ್ಲಮ್ಮನ ಆದರ್ಶ ಗುಣಗಳನ್ನು ಪ್ರತಿಯೊಬ್ಬರೂ ಜೀವನದಲ್ಲಿ ಅಳವಡಿಸಿಕೊಳ್ಳಬೇಕು. ಪೂಜ್ಯ ಸ್ಥಾನ ಹೊಂದಿದ ಶಿವಶರಣೆ ಹೇಮರಡ್ಡಿ ಮಲ್ಲಮ್ಮ ಸಮಾಜಕ್ಕೆ ಮಾರ್ಗದರ್ಶಕಿಯಾಗಿದ್ದಾರೆ ಎಂದು ಹೇಳಿದರು.ಕನಕಗಿರಿ ಕ್ಷೇತ್ರದ ಮಾಜಿ ಶಾಸಕ ಬಸವರಾಜ್ ದಢೇಸೂಗೂರು ಮಾತನಾಡಿದರು. ಮಾಜಿ ಶಾಸಕ ಜಿ. ವೀರಪ್ಪ ಕೆಸರಹಟ್ಟಿ, ವಿರೂಪಾಕ್ಷಪ್ಪ ಸಿಂಗನಾಳ, ಗಿರಿ ಗೌಡ್ರು, ಕೊಪ್ಪಳ ಜಿಲ್ಲಾ ರೆಡ್ಡಿ ಸಮಾಜದ ಅಧ್ಯಕ್ಷ ಜಗದೀಶಪ್ಪ ಸಾಹುಕಾರ, ಕಾರಟಗಿ ತಾಲೂಕು ರೆಡ್ಡಿ ಸಮಾಜದ ಅಧ್ಯಕ್ಷ ಯಂಕನಗೌಡ ಪಾಟೀಲ್, ರೆಡ್ಡಿ ಸಮಾಜದ ಹಿರಿಯರಾದ ಆರ್.ಪಿ. ರೆಡ್ಡಿ, ಮನೋಹರಗೌಡ ಹೇರೂರ, ತಿಮ್ಮನಗೌಡ ಸಾಹುಕಾರ, ಗಂಗಾವತಿ ಅಮರ ಆಸ್ಪತ್ರೆಯ ಡಾ. ಅಮರೇಶ, ಚಂದ್ರು ಸಿಂಧನೂರ, ತಿಮ್ಮನಗೌಡ ಗುಡೂರ, ಶರಣಪ್ಪ ಭಾವಿ ಸಿದ್ದಾಪುರ, ಚಂದ್ರಶೇಖರ ಮುಸಾಲಿ ಗುಂಡೂರು, ಶಿವಶರಣೆ ಗೌಡ ಯರಡೋಣ, ಶ್ರೀನಿವಾಸ್ ರೆಡ್ಡಿ ಕಾರಟಗಿ ಹಾಗೂ ಹೇಮವೇಮ ರೆಡ್ಡಿ ಸಂಘದ ಯುವಕರು ಉಪಸ್ಥಿತರಿದ್ದರು. ಶಿವರಾಜ್ ಬನ್ನೂರ ಕಾರ್ಯಕ್ರಮ ನಿರೂಪಿಸಿದರು.