ಹೇಮರೆಡ್ಡಿ ಮಲ್ಲಮ್ಮ ಬದುಕು ಸ್ತ್ರೀಯರಿಗೆ ಮಾದರಿ

KannadaprabhaNewsNetwork | Published : May 12, 2025 12:21 AM
10 ಎಚ್‍ಆರ್‍ಆರ್ 01-02ಹರಿಹರÀದ ತಾಲೂಕು ಕಚೇರಿ ಸಭಾಂಗಣದಲ್ಲಿ ತಾಲೂಕು ಆಡಳಿತದ ವತಿಯಿಂದ ಶನಿವಾರ ನಡೆದ ಶಿವಶರಣೆ ಮಹಾಸಾದ್ವಿ ಶಿವಶರಣೆ ಹೇಮರೆಡ್ಡಿ ಮಲ್ಲಮ್ಮನವರ 603ನೇ ಜಯಂತಿ ಕಾರ್ಯಕ್ರಮ ನಡೆಯಿತು. | Kannada Prabha

ಮಾನವ ಸಮಾಜಕ್ಕೆ ಮಾರ್ಗದರ್ಶನ, ಉತ್ತಮ ಸಂದೇಶ ನೀಡಿದ ಸ್ತ್ರೀ ಬಳಗದಲ್ಲಿ ಹೇಮರೆಡ್ಡಿ ಮಲ್ಲಮ್ಮ ಶ್ರೇಷ್ಠರಾಗಿದ್ದಾರೆ ಎಂದು ಶಾಸಕ ಬಿ.ಪಿ. ಹರೀಶ್ ಹೇಳಿದ್ದಾರೆ.

- ಹರಿಹರದಲ್ಲಿ ಹೇಮರೆಡ್ಡಿ ಮಲ್ಲಮ್ಮ ಜನ್ಮದಿನಾಚರಣೆಯಲ್ಲಿ ಶಾಸಕ ಹರೀಶ್‌

- - -

ಕನ್ನಡಪ್ರಭ ವಾರ್ತೆ ಹರಿಹರ

ಮಾನವ ಸಮಾಜಕ್ಕೆ ಮಾರ್ಗದರ್ಶನ, ಉತ್ತಮ ಸಂದೇಶ ನೀಡಿದ ಸ್ತ್ರೀ ಬಳಗದಲ್ಲಿ ಹೇಮರೆಡ್ಡಿ ಮಲ್ಲಮ್ಮ ಶ್ರೇಷ್ಠರಾಗಿದ್ದಾರೆ ಎಂದು ಶಾಸಕ ಬಿ.ಪಿ. ಹರೀಶ್ ಹೇಳಿದರು.

ನಗರದ ತಾಲೂಕು ಕಚೇರಿ ಸಭಾಂಗಣದಲ್ಲಿ ತಾಲೂಕು ಆಡಳಿತ ವತಿಯಿಂದ ಶನಿವಾರ ನಡೆದ ಮಹಾಸಾದ್ವಿ ಶಿವಶರಣೆ ಹೇಮರೆಡ್ಡಿ ಮಲ್ಲಮ್ಮ ಅವರ 603ನೇ ಜಯಂತಿ ಕಾರ್ಯಕ್ರಮದಲ್ಲಿ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಮಲ್ಲಮ್ಮ ಅಂದಿನ ಕಾಲದಲ್ಲಿ ಶ್ರೀಶೈಲ ಮಲ್ಲಿಕಾರ್ಜುನನನ್ನು ಆರಾಧ್ಯ ದೈವವಾಗಿ ಪೂಜಿಸಿ, ಸಾಂಸಾರಿಕ ಜೀವನದ ಅಡೆತಡೆಗಳನ್ನು ಎದುರಿಸಿದ್ದರು. ಸಮಾಜಕ್ಕೆ ಕೊಡುಗೆ ನೀಡುವ ಮೂಲಕ ಮಹಾನ್ ಮಾನವತಾವಾದಿಗಳು, ದೈವಾಂಶ ಸಂಭೂತರೂ ಆಗಿದ್ದ ಅವರು, ಇಂದಿನ ಸ್ತ್ರೀಯರಿಗೆ ಮಾದರಿಯಾಗಿದ್ದಾರೆ ಎಂದರು.

ಉಪನ್ಯಾಸ ನೀಡಿದ ದಾವಣಗೆರೆ ಎಜಿಬಿ ಕಾಲೇಜಿನ ಕನ್ನಡ ಉಪನ್ಯಾಸಕಿ ಉಷಾ ಮಾತನಾಡಿ, ಮಹಿಳೆಯರು ಹೇಮರೆಡ್ಡಿ ಮಲ್ಲಮ್ಮ ಅವರ ಸಾಧನೆಗಳು, ಬದುಕಿನ ರೀತಿ ತಿಳಿಯುವ ಸುದಿನ ಇದಾಗಿದೆ. ಮಲ್ಲಮ್ಮನವರ ಸಹಿಷ್ಣುತೆಯನ್ನು ನೆನಪು ಮಾಡಿಕೊಂಡರೇ ಸಾಕು, ಅವರು ಇಡೀ ಸ್ತ್ರೀ ಕುಲಕ್ಕೆ ಮಾದರಿ ಎನಿಸುತ್ತಾರೆ. ಮನೆಯನ್ನು ಮುನ್ನಡೆಸುವಲ್ಲಿ ಸ್ತ್ರೀಯರ ಪಾತ್ರ ಬಹು ಮುಖ್ಯವಾಗಿದೆ. ಹೇಮರೆಡ್ಡಿ ಮಲ್ಲಮ್ಮ ಪಾಲಿಗೆ ಬಂದದ್ದು ಪಂಚಾಮೃತವೆಂದು ಅರಿತು ಜೀವಿಸಿದವರು ಎಂದರು.

ಗ್ರೇಡ್-2 ತಹಸೀಲ್ದಾರ್ ಪುಷ್ಪಾವತಿ, ರಾಜ್ಯ ಪರಿಷತ್ತು ಸದಸ್ಯ ಉಮಣ್ಣ, ಹರಿಹರ ತಾಲೂಕು ರೆಡ್ಡಿ ಸಂಘದ ಎಚ್.ಎಸ್. ಕೊಟ್ರಪ್ಪ ರೆಡ್ಡಿ, ಕಾರ್ಯದರ್ಶಿ ಹನುಮಂತ ರೆಡ್ಡಿ, ಎಪಿಎಂಸಿ ಮಾಜಿ ಅಧ್ಯಕ್ಷ ಹನುಮಂತ ರೆಡ್ಡಿ, ನಿರ್ದೇಶಕ ರಂಗಪ್ಪರೆಡ್ಡಿ, ನಿಂಗಪ್ಪ ರೆಡ್ಡಿ, ಗಿರಿಗೌಡ, ಬಸಪ್ಪ ರೆಡ್ಡಿ, ಮಂಜಪ್ಪ ಬಿದರಿ, ಆನಂದ ರೆಡ್ಡಿ, ಭೂತರೆಡ್ಡಿ, ತಿಮ್ಮಾರೆಡ್ಡಿ, ಮಲ್ಲಿಕಾರ್ಜುನ ಬಾವಿಕಟ್ಟಿ, ರಮೇಶ್, ವಿಶ್ವನಾಥ್ ಕುಂದಗೋಳ ಮಠ ಹಾಗೂ ಇತರರು ಭಾಗವಹಿಸಿದ್ದರು.

- - -

-10ಎಚ್‍ಆರ್‍ಆರ್01-02:

ಹರಿಹರ ತಾಲೂಕು ಕಚೇರಿ ಸಭಾಂಗಣದಲ್ಲಿ ತಾಲೂಕು ಆಡಳಿತ ವತಿಯಿಂದ ಶನಿವಾರ ಶಿವಶರಣೆ ಮಹಾಸಾದ್ವಿ ಹೇಮರೆಡ್ಡಿ ಮಲ್ಲಮ್ಮ ಜಯಂತಿ ಆಚರಿಸಲಾಯಿತು.