ಕನ್ನಡಪ್ರಭ ವಾರ್ತೆ ಗುಬ್ಬಿ
ಹಾಗಲವಾಡಿ ಕೆರೆಗೆ ಹೇಮಾವತಿ ನೀರನ್ನು ಹರಿಸಲು ಭೂ ಸ್ವಾಧೀನ ಪ್ರಕ್ರಿಯೆ ಪೂರ್ಣಗೊಂಡಿದ್ದು ಶೀಘ್ರದಲ್ಲಿಯೇ ಹಾಗಲವಾಡಿ ಕೆರೆಗೆ ಹೇಮೆಮಾವತಿ ನೀರನ್ನು ಹರಿಸಲಾಗುವುದು ಎಂದು ಶಾಸಕ ಶ್ರೀನಿವಾಸ್ ತಿಳಿಸಿದರು. ತಾಲೂಕಿನ ಹಾಗಲವಾಡಿ ಹೋಬಳಿಯ ಹೊಸಕೆರೆ, ಯಕ್ಕಲಕಟ್ಟೆ, ಗಣೇಶಪುರ ಹಾಗೂ ಗಳಿಗೆಕೆರೆ ಗ್ರಾಮದಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಶನಿವಾರ ಭೂಮಿಪೂಜೆ ಸಲ್ಲಿಸಿ ಮಾತನಾಡಿದ ಅವರು, ಗುತ್ತಿಗೆದಾರರು ಕಾಮಗಾರಿಯನ್ನು ವಿಳಂಬ ಮಾಡಿರುವುದರಿಂದ ಮತ್ತೊಮ್ಮೆ ಕಾಮಗಾರಿ ಪ್ರಾರಂಭಿಸಲು ಟೆಂಡರ್ ಕರೆದು ಶೀಘ್ರದಲ್ಲಿ ಕಾಮಗಾರಿ ಪ್ರಾರಂಭಿಸಲು ಸೂಚನೆ ನೀಡಲಾಗುವುದು. ಕೆರೆಗೆ ಹೇಮಾವತಿ ನೀರನ್ನು ಹರಿಸಿ, ಈ ಭಾಗದ ರೈತರಿಗೆ ಅನುಕೂಲ ಮಾಡಿಕೊಡಲಾಗುವುದು. ಹಾಗಲವಾಡಿ ಕೆರೆಗೆ ಹೇಮಾವತಿ ನೀರು ಹರಿಸುವುದರಿಂದ ಈ ಭಾಗದ ರೈತರ ಜೀವನ ಮಟ್ಟ ಹಾಗೂ ಆರ್ಥಿಕ ಮಟ್ಟ ಸುಧಾರಿಸುತ್ತದೆ. ಈ ವರ್ಷದಲ್ಲಿ ಹಾಗಲವಾಡಿ ಕೆರೆಗೆ ಹೇಮೆ ಹರಿಯಲಿದೆ ಈ ಭಾಗದ ಬಹುದಿನದ ಕನಸು ನನಸು ಆಗಲಿದೆ. ಇದರಿಂದ ರೈತಾಪಿ ವರ್ಗಕ್ಕೆ ಅನುಕೂಲವಾಗುತ್ತದೆ ಎಂದು ತಿಳಿಸಿದರು.ಹಾಗಲವಾಡಿ ಹೋಬಳಿಗೆ ಹೆಚ್ಚು ಅನುದಾನ ಹಾಕಿದ್ದು ಬಹುತೇಕ ಎಲ್ಲ ರಸ್ತೆಗಳು ಕೂಡ ಪೂರ್ಣಗೊಂಡಿದ್ದು ಸಣ್ಣ ಪುಟ್ಟ ರಸ್ತೆಗಳನ್ನು ಕೂಡ ಶೀಘ್ರದಲ್ಲಿ ಮಾಡಲಾಗುತ್ತದೆ. ಈ ಭಾಗದಲ್ಲಿ ಸೇತುವೆಗಳು ರಸ್ತೆಗಳು ಕೂಡ ತೋಟದ ಮನೆಗಳ ರಸ್ತೆಗಳು ಕೂಡ ಮಾಡುತ್ತಿದ್ದು ರೈತರು ಸಹಕಾರ ನೀಡಬೇಕು ಎಂದು ತಿಳಿಸಿದರು.ಇದೇ ಸಂದರ್ಭದಲ್ಲಿ ಗ್ರಾಮ ಪಂಚಾಯಿತಿ ಅಧ್ಯಕ್ಷ ರೇಣುಕಯ್ಯ , ಸದಸ್ಯರಾದ ದಯಾನಂದ್ , ಕಮಲಮ್ಮ, ದಕ್ಷಿಣಾಮೂರ್ತಿ, ಮುಖಂಡರಾದ ಗುರು ರೇಣುಕಾರಾಧ್ಯ, ಮೆಡಿಕಲ್ ರಾಜು , ಕೃಷ್ಣಪ್ಪ, ಅಂಬರೀಷ್ , ಆರಾಧ್ಯ , ಮಂಜುನಾಥ್ , ಸಂದೀಪ್, ಸಣ್ಣರಂಗಯ್ಯ, ರಂಗಸ್ವಾಮಿ, ನರಸಿಂಹಮೂರ್ತಿ ಗುತ್ತಿಗೆದಾರ ಶಿವಕುಮಾರ್ ಹಾಗೂ ಗ್ರಾಮಸ್ಥರು ಭಾಗವಹಿಸಿದ್ದರು.