26ರ ಜೂನ್‌ ವೇಳೆಗೆ ಹೇಮಾವತಿ ಕಾಮಗಾರಿ ಪೂರ್ಣ

KannadaprabhaNewsNetwork |  
Published : Jun 23, 2025, 11:49 PM ISTUpdated : Jun 24, 2025, 12:31 PM IST
ಹೇಮಾವತಿ ನಾಲಾ ಕಾಮಾಗಾರಿ ಸ್ಥಳಕ್ಕೆ ಕಾವೇರಿ ನೀರಾವರಿ ನಿಗಮದ ಇಂಜನಿಯರ್ಗಳೊಂದಿಗೆ ಶಾಸಕ ಸಿ.ಬಿ.ಸುರೇಶ್ಬಾಬು ಹಾಗೂ ಮುಖಂಡರುಗಳು ಬೇಟಿ ನೀಡಿದರು. | Kannada Prabha

ಸಾರಾಂಶ

ಮುಂದಿನ 2026 ರ ಜೂನ್ ವೇಳೆಗೆ ಹೇಮಾವತಿ ನಾಲಾ ಕಾಮಗಾರಿ ಪರಿಪೂರ್ಣಗೊಳ್ಳಲಿದೆ ಎಂದು ಶಾಸಕ ಸಿ.ಬಿ.ಸುರೇಶ್ ಬಾಬು ಹೇಳಿದರು.

 ಚಿಕ್ಕನಾಯಕನಹಳ್ಳಿ : ಮುಂದಿನ 2026 ರ ಜೂನ್ ವೇಳೆಗೆ ಹೇಮಾವತಿ ನಾಲಾ ಕಾಮಗಾರಿ ಪರಿಪೂರ್ಣಗೊಳ್ಳಲಿದೆ ಎಂದು ಶಾಸಕ ಸಿ.ಬಿ.ಸುರೇಶ್ ಬಾಬು ಹೇಳಿದರು.

ತಾಲೂಕಿನ 26 ಕೆರೆಗಳಿಗೆ ನೀರು ಹರಿಸುವ ಹೇಮಾವತಿ ಕುಡಿಯುವ ನೀರಿನ ಯೋಜನೆಯ ಕಾಮಗಾರಿ ಸ್ಥಳಕ್ಕೆ ಕಾವೇರಿ ನಿರಾವರಿ ನಿಗಮದ ಅಧಿಕಾರಿಗಳೊಂದಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿ ಮಾತನಾಡಿದ ಅವರು,

ಕಳೆದ 15 ವರ್ಷಗಳಿಂದ ನಡೆಯುತ್ತಿರುವಂತಹ ಹೇಮಾವತಿ ನಾಲಾ ಕಾಮಗಾರಿಗೆ ಅಡ್ಡಿಯಾಗಿದ್ದ ಭೂಸ್ವಾಧೀನ ಪ್ರಕ್ರಿಯೆ ಕೈ ಬಿಟ್ಟ ಪ್ರಕರಣಗಳಲ್ಲಿ ಸೇರಿದ್ದಂತಹ ಗ್ಯಾರೇಹಳ್ಳಿ ಭಾಗದ ರೈತರ ಮನವೊಲಿಸಿ ಕಾಮಗಾರಿಯನ್ನು ಮುಂದುವರೆಸುವಂತೆ ಮಾಡಲಾಗಿದೆ. ತಾಲೂಕಿನ ಶೆಟ್ಟಿಕೆರೆ ಭಾಗದ ನಾಲಾದ ಸೇತುವೆಗಳ ಭಾಗದಲ್ಲಿ ಹೂಳು ತುಂಬಿ ನೀರು ಸರಗವಾಗಿ ಹರಿಯಲು ತೊಂದರೆಯಾಗುತ್ತಿತ್ತು. ಈ ಭಾಗದಲ್ಲಿ ಸುಮಾರು 60  ರಿಂದ 90 ಅಡಿಗಳಷ್ಟು ಆಳದವರೆಗೆ ಕೆನಾಲ್‌ ಇದೆ. 28 ಲಕ್ಷ ರು. ವೆಚ್ಚದಲ್ಲಿ ಅದನ್ನು ತೆಗೆಸುವ ಕೆಲಸ ಮಾಡಲಾಗುತ್ತಿದೆ. ಈ ಬಾರಿ ಪೆಮ್ಮಲದೇವರಹಳ್ಳಿ ಕೆರೆ, ಶೆಟ್ಟಿಕೆರೆ ಮಾರ್ಗವಾಗಿ ಹುಳಿಯಾರು ಕೆರೆಯನ್ನು ಹೇಮಾವತಿ ತಲುಪುವುದು ನಿಶ್ಚಿತ ಎಂದರು.

ಈ ಸಮಸ್ಯೆಗೆ ಸೂಕ್ತ ಹಾಗೂ ಶಾಶ್ವತ ಪರಿಹಾರಕ್ಕಾಗಿ 150 ಕೋಟಿ ಅನುದಾನಕ್ಕೆ ಕೇಂದ್ರ ಹಾಗೂ ರಾಜ್ಯ ಸರ್ಕಾರಕ್ಕೆ ಪ್ರಸ್ತಾವನೆ ಕಳುಹಿಸಲಾಗಿದೆ. ಬಗ್ಗೆ ನಮ್ಮ ಸಂಸದರು ಈ ಬಗ್ಗೆ ಮಾಹಿತಿಯನ್ನು ಕೇಳಿದ್ದಾರೆ. ಅವರಿಗೂ ಈ ಬಗ್ಗೆ ವರದಿ ನೀಡಲಾಗುವುದು.

ಈ ಸಂದರ್ಭದಲ್ಲಿ ಕಾವೇರಿ ನೀರಾವರಿ ನಿಗಮದ ಸೂಪರಿಡೆಂಟ್ ಎಂಜಿನಿಯರ್ ಸುವರ್ಣ ಜಿ, ಭೂಮಿ ನೀಡಿದ ರೈತರ ಖಾತೆಗಳಿಗೆ ನೇರವಾಗಿ ಪರಿಹಾರದ ಹಣ ಜಮಾ ಆಗಲಿದೆ. ಇನ್ನು ಬಾಕಿ ಇರುವಂತಹ ಪ್ರಕರಣಗಳಲ್ಲಿನ ರೈತರನ್ನು ಮನವೊಲಿಸಿ ಕಾಮಗಾರಿ ಮಾಡಲಾಗುವುದು ನಂತರ ಅವರಿಗೆ ಪರಿಹಾರವನ್ನು ನೀಡಲಾಗುವುದು ಇದಕ್ಕೆ ರೈತರು ಸಹಕರಿಸಿ ಎಂದರು.

ಕಾವೇರಿ ನೀರಾವರಿ ನಿಗದ ಹೇಮಾವತಿ ನಾಲಾವಲಯದ ಎಇಇ ಮುಳಿಧರ್ ಎಚ್.ಆರ್ , ಪುರಸಭೆಯ ಸ್ಥಾಯಿ ಸಮಿತಿ ಅಧ್ಯಕ್ಷ ಸಿ.ಡಿ.ಸುರೇಶ್, ಹೇಮಾವತಿ ನಾಲಾವಲಯದ ಎಇಇ ಸೈಯದ್ಇ ಬ್ರಾಹಿಂ, ಎಇ ಸೌಜನ್ಯ, ಮುಖಂಡರುಗಳಾದ ನಿವೃತ್ತ ಎಎಸ್ಐ ಕೃಷ್ಣಪ್ಪ, ನಿವೃತ್ತ ಪಶು ವೈದ್ಯಾಧಿಕಾರಿ ಚಂದ್ರಶೇಖರ್ ಸೇರಿದಂತೆ ಗುತ್ತಿಗೆದಾರರುಗಳು ಹಾಜರಿದ್ದರು.

PREV
Read more Articles on

Recommended Stories

ಧರ್ಮಸ್ಥಳ ಗ್ರಾಮ ಕೇಸ್‌ ರೀತಿ ಶ್ವಾನ ಮೂಳೆ ಪತ್ತೆಗೆ ಎಸ್‌ಐಟಿ?
ಎಸ್ಸೆಸ್ಸೆಲ್ಸಿ- ಪಿಯು : ಈ ವರ್ಷವೂ 3 ಪರೀಕ್ಷೆ ಉದ್ದೇಶ ಫೇಲ್‌