ಕನ್ನಡಪ್ರಭವಾರ್ತೆ ತುರುವೇಕೆರೆ
ಪಟ್ಟಣವು ವೇಗವಾಗಿ ಬೆಳವಣಿಗೆಯಾಗುತ್ತಿದೆ. ಈಗಾಗಾಲೇ ಒಳಚರಂಡಿ ವ್ಯವಸ್ಥೆ ಕಲ್ಪಿಸಲಾಗಿದೆ. ಆದರೂ ಕೆಲವು ಕಡೆಗಳಲ್ಲಿ ಅವ್ಯವಸ್ಥೆಯಾಗಿದ್ದು ಸರಿಪಡಿಸುವ ಕಾರ್ಯವೂ ನಡೆಯುತ್ತಿದೆ. ಮನೆ ಮನೆಗೆ ಕುಡಿಯುವ ನೀರಿನ ನಲ್ಲಿ ವ್ಯವಸ್ಥೆ ಕಾಮಗಾರಿ ಪ್ರಾರಂಭಿಸಲಾಗಿದೆ. ಸದ್ಯಕ್ಕೆ 3 ವಾರ್ಡ್ ಗಳಿಗೆ ನೀಡಲಾಗುವುದು. ನಂತರ ಪಟ್ಟಣದ ಎಲ್ಲ ವಾರ್ಡ್ ಗಳಿಗೂ ವಿಸ್ತರಿಸಲಾಗುವುದು. ಮೀನಾಕ್ಷಿ ನಗರದ ಕೊಳಚೆ ಪ್ರದೇಶದಲ್ಲಿ ಚರಂಡಿ ಜೊತೆಗೆ ಸಿ.ಸಿ.ರಸ್ತೆ ನಿರ್ಮಾಣ ಸೇರಿ ಅಭಿವೃದ್ದಿಪಡಿಸಲಾಗುವುದು ಎಂದರು. ಭೂಮಿ ಪೂಜೆಯಲ್ಲಿ ಪಟ್ಟಣ ಪಂಚಾಯತಿ ಅಧ್ಯಕ್ಷೆ ಸ್ವಪ್ನ ನಟೇಶ್, ಉಪಾಧ್ಯಕ್ಷೆ ಭಾಗ್ಯ ಮಹೇಶ್, ಸದಸ್ಯರಾದ ಚಿದಾನಂದ್, ಎನ್.ಆರ್.ಸುರೇಶ್, ಮಧು, ಮುಖ್ಯಾಧಿಕಾರಿ ಶ್ರೀನಾಥ್ ಬಾಬು ಮುಖಂಡರಾದ ಪುರದ ಪಿ.ಟಿ.ಗಂಗಾಧರ್, ಮಹೇಶ್, ಕಾಳಂಜೀಹಳ್ಳಿಯ ಡಿ.ಟಿ.ಜಗದೀಶ್, ಸುರೇಶ್, ಗುತ್ತಿಗೆದಾರ ಕೆ.ಎಸ್.ಜಗದೀಶ್, ಕೊಳಚೆ ಮಂಡಳಿ ಎಇಇ ಜಾನ್, ಎ.ಇ.ರಕ್ಷೀತ್ ಸೇರಿದಂತೆ ಹಲವಾರು ಮುಖಂಡರು ಇದ್ದರು.