ದಾಬಸ್‍ಪೇಟೆ: ಅತಿ ಹೆಚ್ಚು ಕೈಗಾರಿಕೆಗಳನ್ನು ಹೊಂದಿರುವ ಪಟ್ಟಣಕ್ಕೆ ಸುಸಜ್ಜಿತ ಹೈಟೆಕ್ ಬಸ್ ನಿಲ್ದಾಣ ಶೀಘ್ರದಲ್ಲಿಯೇ ಶಾಸಕರಾದ ಎನ್.ಶ್ರೀನಿವಾಸ್ ನೇತೃತ್ವದಲ್ಲಿಯೇ ನಿರ್ಮಾಣವಾಗಲಿದೆ ಎಂದು ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ತಿಳಿಸಿದರು.
ಶಾಸಕರ ಅನುದಾನದಲ್ಲಿ 2.5 ಕೋಟಿ ಬಳಕೆ: ಇತ್ತೀಚೆಗೆ ಮುಖ್ಯಮಂತ್ರಿಗಳು ಬಿಡುಗಡೆ ಮಾಡಿದ 50 ಕೋಟಿ ಅನುದಾನದಲ್ಲಿ 2.5 ಕೋಟಿ ಅನುದಾನವನ್ನು ನೂತನ ಬಸ್ ನಿಲ್ದಾಣಕ್ಕೆ ಶಾಸಕರು ನೀಡಿದ್ದಾರೆ. ಉಳಿದ ಹಣವನ್ನು ನನ್ನ ಇಲಾಖೆಯಿಂದಲೂ ಅನುದಾನ ನೀಡುತ್ತೇನೆ. ಸದ್ಯದಲ್ಲಿಯೇ ಕಟ್ಟಡ ನಿರ್ಮಾಣವಾಗಲಿದೆ ಎಂದರು.
ನೆಲಮಂಗಲ ಬಸ್ ನಿಲ್ದಾಣ ಬದಲಾವಣೆ: ನೆಲಮಂಗಲ ಬಸ್ ನಿಲ್ದಾಣ ಅವೈಜ್ಞಾನಿಕವಾಗಿ ನಿರ್ಮಿಸಲಾಗಿದ್ದು ಸ್ವಲ್ಪ ಬದಲಾವಣೆ ಮಾಡಬೇಕೆಂದು ಶಾಸಕರು ಮನವಿ ಮಾಡಿದ್ದರು. ಈ ನಿಟ್ಟಿನಲ್ಲಿ ಅಲ್ಪಸ್ವಲ್ಪ ಬದಲಾವಣೆ ಮಾಡುವಂತೆ ಸೂಚನೆ ನೀಡಿದ್ದೇನೆ. 2016ರಲ್ಲಿ ಗುದ್ದಲಿಪೂಜೆ ನೆರವೇರಿಸಿದ್ದರೂ ಕಾರಣಾಂತರಗಳಿಂದ ಸ್ಥಗಿತಗೊಂಡಿತ್ತು. ಇನ್ನೊಂದು ವರ್ಷದಲ್ಲಿ ಪೂರ್ಣ ಮಾಡಿ ಉದ್ಘಾಟಿಸಲಾಗುತ್ತದೆ. ಸೆ. ರಿಂದಲೇ ಕೆಲಸವಾಗಿರುವ ಪೂರ್ಣಗೊಂಡಿರುವ ಸ್ಥಳಗಳಲ್ಲಿ ಬಸ್ ಗಳು ಕೆಲಸ ನಿರ್ವಹಿಸುವಂತೆ ಸೂಚಿಸಿದ್ದೇನೆ ಎಂದರು.ಬಿಬಿಎಂಪಿ ಗಡಿ ವ್ಯಾಪ್ತಿಯಿಂದ 40 ಕಿ.ಮೀ.ವರೆಗೆ ಬಿಎಂಟಿಸಿ ಬಸ್ ಗಳು ಓಡಾಟ ನಡೆಸಬಹುದೆಂದು ನಿಯಮ ಇರುವುದರಿಂದ 40 ಕಿ.ಮೀ ಒಳಗಿರುವ ಅಗತ್ಯವಿರುವ ಹಳ್ಳಿಗಳಿಗೂ ಬಿಎಂಟಿಸಿ ಬಸ್ ಸೌಲಭ್ಯ ಒದಗಿಸುತ್ತೇವೆ. ದಾಬಸ್‍ಪೇಟೆ ಬಸ್ ನಿಲ್ದಾಣ ಅನ್ಯ ಜಿಲ್ಲೆ ತುಮಕೂರು ಡಿಪೋಗೆ ಸೇರುತ್ತಿದೆ. ಹಾಗಾಗಿ ಬಸ್ ನಿಲ್ದಾಣ ಅಭಿವೃದ್ಧಿಯಾಗುತ್ತಿಲ್ಲ. ಹೀಗಾಗಿ ನೆಲಮಂಗಲ ಡಿಪೋಗೆ ದಾಬಸ್‍ಪೇಟೆ ಬಸ್ ನಿಲ್ದಾಣವನ್ನು ಸೇರಿಸುವಂತೆ ಸಾರ್ವಜನಿಕರು ಮನವಿ ಮಾಡಿದಾಗ ಸ್ಪಂದಿಸಿದ ಸಚಿವರು ಕೂಡಲೇ ಅಧಿಕಾರಿಗಳ ಬಳಿ ಈ ಬಗ್ಗೆ ಚರ್ಚಿಸಿ ಕ್ರಮಕೈಗೊಳ್ಳುತ್ತೇನೆ ಎಂದರು.
ಶಾಸಕ ಎನ್.ಶ್ರೀನಿವಾಸ್ ಮಾತನಾಡಿ, ಬಸ್ ನಿಲ್ದಾಣ ನಿರ್ಮಿಸುವ ವಿಚಾರದಲ್ಲಿ ಅವೈಜ್ಞಾನಿಕ ಕಾಮಗಾರಿ ತಡೆಹಿಡಿದಿದ್ದಕ್ಕೆ ಕೆಲವರು ನನ್ನ ಬಗ್ಗೆ ಇಲ್ಲಸಲ್ಲದ ಆರೋಪಗಳನ್ನು ಮಾಡಿ ಅಪಪ್ರಚಾರ ಮಾಡುತ್ತಿದ್ದಾರೆ. 75 ಲಕ್ಷದ ಅನುದಾನದಲ್ಲಿ ಆಗುತ್ತಿದ್ದ ಕಾಮಗಾರಿಯನ್ನು ಸುಮಾರು 5 ಕೋಟಿ ವೆಚ್ಚದಲ್ಲಿ ನಿರ್ಮಿಸಲು ಯೋಜನೆ ರೂಪಿಸಿದ್ದು ಸಾರಿಗೆ ಸಚಿವರು ಖುದ್ದು ಭೇಟಿ ನೀಡಿ ಪರಿಶೀಲಿಸಿರುವುದೇ ಅವರ ಅಪಪ್ರಚಾರಕ್ಕೆ ತಕ್ಕ ಉತ್ತರ ಎಂದರು.
ಪೋಟೋ 7 * 8 :