ಮಾಜಿ ಸೈನಿಕನಿಗೆ 5 ಎಕರೆ ಕೊಡದ್ದಕ್ಕೆ ಹೈ ವಿಷಾದ

KannadaprabhaNewsNetwork |  
Published : Oct 01, 2026, 04:00 AM ISTUpdated : Oct 01, 2026, 04:36 AM IST
Karnataka High court

ಸಾರಾಂಶ

ದೇಶ ಸೇವೆ ಮಾಡಿದ ಸೈನಿಕನಿಗೆ ನೀಡಲು ರಾಜ್ಯದ ಬಳಿ ಐದು ಎಕರೆ ಭೂಮಿ ಇಲ್ಲದಿರುವುದು ಮತ್ತು ಐದು ಎಕರೆ ಬದಲಿಗೆ 2,400 ಚದರ ಅಡಿ ನಿವೇಶನವಷ್ಟೇ ಮಂಜೂರು ಮಾಡಲು ಅನಿವಾರ್ಯವಾಗಿ ಆದೇಶ ಹೊರಡಿಸಬೇಕಾಗಿರುವುದಕ್ಕೆ ಹೈಕೋರ್ಟ್‌ ವಿಷಾದ ವ್ಯಕ್ತಪಡಿಸಿದೆ.

ಬೆಂಗಳೂರು : ದೇಶ ಸೇವೆ ಮಾಡಿದ ಸೈನಿಕನಿಗೆ ನೀಡಲು ರಾಜ್ಯದ ಬಳಿ ಐದು ಎಕರೆ ಭೂಮಿ ಇಲ್ಲದಿರುವುದು ಮತ್ತು ಐದು ಎಕರೆ ಬದಲಿಗೆ 2,400 ಚದರ ಅಡಿ ನಿವೇಶನವಷ್ಟೇ ಮಂಜೂರು ಮಾಡಲು ಅನಿವಾರ್ಯವಾಗಿ ಆದೇಶ ಹೊರಡಿಸಬೇಕಾಗಿರುವುದಕ್ಕೆ ಹೈಕೋರ್ಟ್‌ ವಿಷಾದ ವ್ಯಕ್ತಪಡಿಸಿದೆ.

ಐದು ಎಕರೆ ಜಮೀನು ಮಂಜೂರು ಮಾಡಲು ಸರ್ಕಾರ ವಿಫಲ

ಹೈಕೋರ್ಟ್‌ ಏಕ ಸದಸ್ಯ ಪೀಠದ ಆದೇಶದಂತೆ ತಮಗೆ ಐದು ಎಕರೆ ಜಮೀನು ಮಂಜೂರು ಮಾಡಲು ಸರ್ಕಾರ ವಿಫಲವಾಗಿದೆ ಎಂದು ನಗರದ ಮಾಜಿ ಸೈನಿಕ ಜಿ.ವೇಮಣ್ಣ ಎಂಬುವರು ನ್ಯಾಯಾಂಗ ನಿಂದನೆ ಅರ್ಜಿ ಸಲ್ಲಿಸಿದ್ದರು. ಇದೇ ವೇಳೆ ಏಕ ಸದಸ್ಯ ಪೀಠದ ಆದೇಶ ಪ್ರಶ್ನಿಸಿ ರಾಜ್ಯ ಸರ್ಕಾರ ತಕರಾರು ಮೇಲ್ಮನವಿ ಸಲ್ಲಿಸಿತ್ತು.

ಎರಡು ಅರ್ಜಿಗಳನ್ನು ಒಟ್ಟಿಗೆ ವಿಚಾರಣೆ

ಈ ಎರಡು ಅರ್ಜಿಗಳನ್ನು ಒಟ್ಟಿಗೆ ವಿಚಾರಣೆ ನಡೆಸಿದ ನ್ಯಾ.ಡಿ.ಕೆ.ಸಿಂಗ್‌ ಹಾಗೂ ನ್ಯಾ.ಎಚ್‌.ಶಾಂತಿಭೂಣಷ್‌ ಅವರಿದ್ದ ವಿಭಾಗೀಯ ನ್ಯಾಯಪೀಠ, ಯೋಧನಿಗೆ ನೀಡಲು ಐದು ಎಕರೆ ಭೂಮಿ ರಾಜ್ಯ ಸರ್ಕಾರದ ಬಳಿಯಿಲ್ಲ. ಕರ್ನಾಟಕ ಭೂ ಮಂಜೂರಾತಿ ಅಧಿನಿಯಮಗಳ ನಿಯಮ 8(8) ಕ್ಕೆ ತಂದಿರುವ ತಿದ್ದುಪಡಿ ಅನುಸಾರ ಐದು ಎಕರೆ ಬದಲಿಗೆ 2,400 ಚದರ ಅಡಿ ನಿವೇಶನವಷ್ಟೇ ನೀಡಲು ಅವಕಾಶವಿದೆ. ಈ ನಿಯಮ ಅನ್ವಯ ವೇಮಣ್ಣಗೆ 2,400 ಚದರ ಅಡಿ ನಿವೇಶನವಷ್ಟೇ ನೀಡಲು ಆದೇಶ ಮಾಡಲಾಗುತ್ತಿದೆ ಎಂದು ವಿಷಾದ ವ್ಯಕ್ತಪಡಿಸಿದೆ.

ನಾಲ್ಕು ತಿಂಗಳ ಅವಧಿಯಲ್ಲಿ ವೇಮಣ್ಣಗೆ ಐದು ಎಕರೆ ಜಮೀನು ಮಂಜೂರು ಮಾಡಲು ಸರ್ಕಾರಕ್ಕೆ 2022ರ ಡಿ.6ರಂದು ಏಕ ಸದಸ್ಯಪೀಠದ ಮಾಡಿದ ಆದೇಶವನ್ನು ರದ್ದುಪಡಿಸಿದೆ. ಇದೇ ವೇಳೆ ತಿದ್ದುಪಡಿ ನಿಯಮ ಅನುಸಾರ ವೇಮಣ್ಣ ಅವರ ನ್ಯಾಯಾಂಗ ನಿಂದನೆ ಅರ್ಜಿ ಪರಿಗಣನೆಗೆ ಉಳಿಯುವುದಿಲ್ಲ ಎಂದು ತಿಳಿಸಿ ಅವರ ಅರ್ಜಿ ವಜಾಗೊಳಿಸಿದೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.
Read more Articles on

Recommended Stories

ಮಾಫಿ ಸಾಕ್ಷಿ ಪ್ರದೂಷ್‌ ಹೇಳಿಕೆ ದಾಖಲು ಅ. 5ರಂದು ಮುಂದುವರಿಕೆ
ನಗರದಲ್ಲಿ ಮತ್ತೆ ಮಳೆಗೆ ಜನ ಹೈರಾಣು