ಕನ್ನಡಪ್ರಭ ವಾರ್ತೆ ಕೊರಟಗೆರೆ
ಕೊರಟಗೆರೆ ಪಪಂ ಅಧ್ಯಕ್ಷ ಉಪಾಧ್ಯಕ್ಷರ ಚುನಾವಣೆಯಲ್ಲಿ ಗೈರು ಹಾಜರಾದ ಹಿನ್ನೆಲೆಯಲ್ಲಿ ಜಿ.ಎನ್.ಭಾಗ್ಯಮ್ಮಗಣೇಶ್‌ರವರನ್ನು ಅನರ್ಹಗೊಳಿಸಿ ಆದೇಶ ಮಾಡಿದ್ದನ್ನು ಕರ್ನಾಟಕ ಹೈಕೋರ್ಟ್ ರದ್ದುಗೊಳಿಸಿ ಮೊದಲಿನಂತೆ ಸದಸ್ಯರಾಗಿ ಮುಂದುವರೆಯಲು ಆದೇಶಿಸಿದೆ ಎಂದು ಸದಸ್ಯೆ ಭಾಗ್ಯಮ್ಮ ತಿಳಿಸಿದ್ದಾರೆ.ಪಟ್ಟಣದ ರಾಜೀವ್ ಭವನದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ ಅವರು ಪಪಂ ೨೦೨೦ ರಲ್ಲಿ ನಡೆದ ಅಧ್ಯಕ್ಷ ಉಪಾಧ್ಯಕ್ಷರ ಆಯ್ಕೆ ಚುನಾವಣೆಯಲ್ಲಿ ೯ನೇ ವಾರ್ಡ್‌ನ ಜೆಡಿಎಸ್ ಬೆಂಬಲಿತ ಸದಸ್ಯೆ ಜಿ.ಎನ್.ಭಾಗ್ಯಮ್ಮ ಗಣೇಶ್ ಭಾಗವಹಿಸದೆ ಗೈರು ಹಾಜರಾದ ಮೇರೆಗೆ ಕರ್ನಾಟಕ ಸ್ಥಳೀಯ ಪ್ರಾಧಿಕಾರಗಳ (ಪಕ್ಷಾಂತರ ನಿಷೇಧ) ಅಧಿನಿಯಮ ೧೯೮೭ ರಡಿ ಜಿ.ಎನ್.ಭಾಗ್ಯಮ್ಮ ಗಣೇಶ್ ರವರನ್ನು ಸದಸ್ಯತ್ವದಿಂದ ಅನರ್ಹಗೊಳಿಸಿ ಆದೇಶಿಸಲಾಗಿತ್ತು ಎಂದು ತಿಳಿಸಿದರು.ನಾವು ಅನರ್ಹ ಅದೇಶದ ವಿರುದ್ದ ಕರ್ನಾಟಕ ಘನ ಉಚ್ಚ ನ್ಯಾಯಲಯದಲ್ಲಿ ಪ್ರಶ್ನಿಸಿ ಅರ್ಜಿ ಸಲ್ಲಿಸಿದ್ದು ನ್ಯಾಯಾಲಯ ರಿಟ್ ಅಪೀಲು ಪುರಸ್ಕರಿಸಿ ನನ್ನ ಪಟ್ಟಣ ಪಂಚಾಯಿತಿ ೯ನೇ ವಾರ್ಡ್ ಸದಸ್ಯೆಯನ್ನಾಗಿ ಮುಂದುವರೆಸುವಂತೆ ಆದೇಶಿಸಿದ್ದು ನ್ಯಾಯಾಲಯದ ಆದೇಶದಂತೆ ಜಿಲ್ಲಾಧಿಕಾರಿಗಳು ಸದಸ್ಯೆಯಾಗಿ ಮುಂದುವರೆಸುಂತೆ ಆದೇಶ ನೀಡಿದ್ದಾರೆ ಎಂದರು.ಸದಸ್ಯತ್ವ ಮುಂದುವರೆಸಲು ಉಚ್ಚ ನ್ಯಾಯಾಲಯದ ಮೂಲಕ ನ್ಯಾಯ ದೊರೆಕಿದ್ದು ಉಳಿದ ನನ್ನ ಅವಧಿಯ ದಿನಗಳಲ್ಲಿ ಗೃಹ ಸಚಿವರು ಹಾಗೂ ಕ್ಷೇತ್ರದ ಶಾಸಕರ ಡಾ. ಜಿ.ಪರಮೇಶ್ವರ್ ರವರ ಮಾರ್ಗದರ್ಶನದಲ್ಲಿ ನನ್ನ ವಾರ್ಡ್‌ನಲ್ಲಿ ಅಭಿವೃದ್ಧಿ ಕಾರ್ಯಗಳನ್ನು ಮಾಡಲಾಗುವುದು, ಸದಸ್ಯತ್ವ ಮುಂದುವರೆಸಲು ಸಹಕರಿಸಿದ ಗೃಹ ಸಚಿವರಾದ ಡಾ.ಜಿ.ಪರಮೇಶ್ವರ್ ಮತ್ತು ಪಕ್ಷದ ಹಿರಿಯ ಮುಖಂಡರು ಹಾಗೂ ಕಾರ್ಯಕರ್ತರುಗಳಿಗೆ ಕೃತಜ್ಞನೆ ಸಲ್ಲಿಸಿದರು. ಗ್ರಾಮಾಂತರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಅರಕೆರೆ ಶಂಕರ್ ಕಾಂಗ್ರೆಸ್ ಪಕ್ಷದ ಶಾಲು ಹೊದಿಸುವ ಮೂಲಕ ಅಭಿನಂದಿಸಿದರು. ವೇದಿಕೆಯಲ್ಲಿ ಮಹಿಳಾ ಕಾಂಗ್ರೆಸ್ ಅಧ್ಯಕ್ಷ ಜಯಮ್ಮ, ಯುವ ಕಾಂಗ್ರೆಸ್ ಅಧ್ಯಕ್ಷ ಬೈರೇಶ್, ಪ.ಪಂ.ಅಧ್ಯಕ್ಷೆ ಕೆ.ಓ.ಅನಿತಾ, ಉಪಾದ್ಯಕ್ಷ ಹುಸ್ನಾಫಾರಿಯಾ, ಸ್ಥಾಯಿ ಸಮಿತಿ ಅಧ್ಯಕ್ಷೆ ಎ.ಎಸ್.ಹೇಮಲತಾ, ಕೆ.ಪಿ.ಸಿ.ಸಿ ಸದಸ್ಯ ಹಾಗೂ ಪ.ಪಂ.ಸದಸ್ಯ ಎ.ಡಿ.ಬಲರಾಮಯ್ಯ, ಸದಸ್ಯರುಗಳಾದ ಕೆ.ಆರ್.ಓಬಳರಾಜು, ನಾಗರಾಜು, ಟಿ.ಎ.ಪಿ.ಸಿ.ಎಂ ಅಧ್ಯಕ್ಷ ಶಿವಾನಂದ, ಗ್ರಾ.ಪಂ. ಸದಸ್ಯ ಮಂಜುನಾಥ್, ಮುಖಂಡರುಗಳಾದ ಕೆ.ವಿ.ಮಂಜುನಾಥ್, ಗಣೇಶ್, ಕಾರ್ ಮಹೇಶ್, ಆಟೋ ಕುಮಾರ್, ರಾಘವೇಂದ್ರ, ಸುರೇಶ್, ಕಲೀಂಉಲ್ಲಾ, ನಾಗರಾಜು, ಕಿರಣ್‌ಕುಮಾರ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.