ಕನ್ನಡಪ್ರಭ ವಾರ್ತೆ ಮದ್ದೂರು
ಪಟ್ಟಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಪಶು ಆಹಾರ, ಸಾಕಾಣಿಕೆ ವೆಚ್ಚ ಎಲ್ಲಾ ಅಧಿಕವಾಗಿದೆ. ಕೇರಳದಲ್ಲಿ ಪ್ರತಿ ಲೀಟರ್ ಹಾಲಿನ ಬೆಲೆ 57 ರು., ಆಂಧ್ರದಲ್ಲಿ 62 ರು, ಮಹಾರಾಷ್ಟ್ರ, ತೆಲಂಗಾಣದಲ್ಲೂ ಬೆಲೆ ಹೆಚ್ಚಿದೆ. ಆದರೆ, ಕರ್ನಾಟಕದಲ್ಲಿ ಪ್ರತಿ ಲೀಟರ್‌ಗೆ 42 ರು. ಇದೆ. ಇದು ರೈತರಿಗೆ ಉತ್ತಮ ಬೆಲೆ ನೀಡಲು ಸಾಲುವುದಿಲ್ಲ. ಅದಕ್ಕಾಗಿ ದರ ಹೆಚ್ಚಳ ಮಾಡಿರುವುದಾಗಿ ಹೇಳಿದರು.
ಪ್ರಸ್ತುತ ಒಂದು ಲೀಟರ್ ನೀರಿಗೆ ಇರುವ ಬೆಲೆ ಹಾಲಿಗೆ ಇಲ್ಲ. ನಮಗೂ ಹಾಲಿನ ದರ ಹೆಚ್ಚಿಸಿ ಎಂದು ರೈತರು ಆಗ್ರಹ ಮಾಡುತ್ತಿದ್ದರು. ರೈತರಿಗೆ 4 ರು. ಕೊಡುವುದು ತಪ್ಪಾ?. ರೈತರಿಗೆ ಹಣ ಕೊಡುವುದನ್ನು ಖಂಡಿಸಿ ಬಿಜೆಪಿ, ಜೆಡಿಎಸ್ ಪ್ರತಿಭಟನೆ ಮಾಡುತ್ತಾರೆ. ರೈತರಿಗೆ ಕೊಡೋ ಹಣದಲ್ಲೂ ರಾಜಕೀಯ ಬೆರೆಸಿದರೆ ಏನು ಹೇಳೋಣ ಎಂದು ಪ್ರಶ್ನಿಸಿದರು.ದರ ಏರಿಕೆಯಿಂದ ಬಂದ ಹಣದಲ್ಲಿ ಒಂದು ರುಪಾಯಿಯನ್ನು ಕೆಎಂಎಫ್ ಇಟ್ಟುಕೊಳ್ಳುವ ಹಾಗಿಲ್ಲ. 46 ರು. ಹಣವನ್ನು ನೇರವಾಗಿ ರೈತರಿಗೆ ಕೊಡಬೇಕೆಂದು ತೀರ್ಮಾನಿಸಲಾಗಿದೆ. ಹಾಲು ತೆಗೆದುಕೊಂಡ ಮೇಲೆ ಮೊಸರು ಇತರೆ ಉತ್ಪನ್ನಗಳ ಬೆಲೆಗಳೂ ಹೆಚ್ಚಾಗಲಿವೆ. ಹೀಗಾಗಿ ಮೊಸರಿನ ಬೆಲೆಯೂ ಹೆಚ್ಚಾಗಿದೆ. ಏಪ್ರಿಲ್ 1 ರಿಂದಲೇ ರೈತರಿಗೆ 4 ರುಪಾಯಿ ಸಿಗುತ್ತೆ ಎಂದರು.
ವಿದ್ಯುತ್ ದರ ಏರಿಕೆ ಬಗ್ಗೆ ಪ್ರತಿಕ್ರಿಯಿಸಿ, ನಾವು ಉಚಿತ ವಿದ್ಯುತ್ ನೀಡುತ್ತಿದ್ದೇವೆ. ವಿದ್ಯುತ್ ಡಿಮ್ಯಾಂಡ್ ಹೆಚ್ಚಾದಂತೆ ದರವೂ ಹೆಚ್ಚಾಗಬೇಕಲ್ಲವೇ. ಒಂದೇ ಬಾರಿ ಎಲ್ಲವನ್ನೂ ಮಾಡಲಾಗುವುದಿಲ್ಲ. ವಿದ್ಯುತ್ ನಿಯಂತ್ರಣ ಮಾಡಲು ಒಂದು ಬೋರ್ಡ್ ಇದೆ. ಆ ಬೋರ್ಡ್ ಹೆಚ್ಚು ಮಾಡೋದು, ಸರ್ಕಾರ ಅಲ್ಲ ಎಂದು ಸ್ಪಷ್ಟಪಡಿಸಿದರು.
ರಾಜಕೀಯ ಬೆಳೆ ಬೇಯಿಸಿಕೊಳ್ಳುವ ಛತ್ರಿ ಬುದ್ಧಿ ನನಗಿಲ್ಲ ಎಂಬ ಎಚ್‌ಡಿಕೆ ಹೇಳಿಕೆಗೆ, ಅವರಿಗೆ ಛತ್ರಿ ಬುದ್ಧಿ ಇಲ್ಲ ಅಂದ್ರೆ ಅವರ ಅಣ್ಣನಿಗೆ ಇದ್ಯಾ? ಎಂದು ಪ್ರಶ್ನಿಸಿದರು.