ಮಂಗಳೂರು ; ರಫ್ತು ಇಂದಿನ ಅನಿವಾರ್ಯತೆ ಆಗಿದ್ದು, ಜವಳಿ ಕ್ಷೇತ್ರ ಆ ದಿಸೆಯಲ್ಲಿ ಸಾಕಷ್ಟು ಅವಕಾಶಗಳನ್ನು ಹೊಂದಿದೆ. ಕೃಷಿಯನ್ನು ಬಿಟ್ಟರೆ ಹೆಚ್ಚು ಜನರಿಗೆ ಉದ್ಯೋಗಾವಕಾಶ ಒದಗಿಸಿದ ಕ್ಷೇತ್ರ ಎಂದು ಜಿಲ್ಲಾ ಕೈಗಾರಿಕಾ ಕೇಂದ್ರದ ಜಂಟಿ ನಿರ್ದೇಶಕ ಗೋಕುಲದಾಸ ನಾಯಕ್ ಹೇಳಿದರು.ಅವರು ಗುರುವಾರ ಕರಾವಳಿ ಅಭಿವೃದ್ಧಿ ಮಂಡಳಿಯಲ್ಲಿ ನಡೆದ ಜವಳಿ ರಫ್ತು ಕಾರ್ಯಾಗಾರದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಕೈಮಗ್ಗ ಮತ್ತು ಜವಳಿ ಇಲಾಖೆ ಸಹಾಯಕ ನಿರ್ದೇಶಕ ಅಶೋಕ ಸುರಪೂರ ಮಾತನಾಡಿ, ವ್ಯಾಪಕ ಪೆಟ್ರೋಲಿಯಮ್ ಉತ್ಪನ್ನಗಳ ಆಮದಿನಿಂದ ಆಗುತ್ತಿರುವ ವ್ಯತ್ಯಾಸ ಜವಳಿ ರಫ್ತು ಸರಿದೂಗಿಸುವ ನಿಟ್ಟಿನಲ್ಲಿ, ಜವಳಿ ಮಂತ್ರಾಲಯ, ಭಾರತ ಸರ್ಕಾರ, ಜವಳಿ ಕ್ಷೇತ್ರಕ್ಕೆ ಸಂಬಂಧಿಸಿದಂತೆ ಯುಎಸ್‌ಡಿ 100 ಬಿಲಿಯನ್ ರಫ್ತು ಹೊಂದಿದ್ದು ಜವಳಿ ರಫ್ತಿಗೆ ಉತ್ತೇಜನ ನೀಡಲಾಗುತ್ತಿದೆ. ಆದ್ದರಿಂದ ಜವಳಿ ರಫ್ತಿಗೆ ಉದ್ಯಮಿಗಳು ಮುಂದೆ ಬರಬೇಕು ಎಂದರು.ಅಂಚೆ ಇಲಾಖೆಯ ಗೋಪಿನಾಥ, ಖಿಣಿ ಇಸಿಜಿಸಿಯ ವಿಕಾಸ್ ಕುಮಾರ್, ಡಾ.ಸತ್ಯನಾರಾಯಣ ಶೇಷಗಿರಿ, ಸತೀಶ ಕೋಟಾ, ಚಂದ್ರಶೇಖರ ವಿ. ಪಟಗಾರ ಸಂಪನ್ಮೂಲ ವ್ಯಕ್ತಿಗಳಾಗಿ ಭಾಗವಹಿಸಿದ್ದರು. ಚರಣ್ ನಿರೂಪಿಸಿದರು.