ಭಾರತದಲ್ಲಿ ಹೆಚ್ಚು ಹಾವಿನ ಕಡಿತದಿಂದ ಸಾವು

KannadaprabhaNewsNetwork |  
Published : Sep 22, 2026, 02:15 AM IST
ಸೋಮವಾರ ನಡೆದ ವಿಶ್ವ ಹಾವು ಕಡಿತ ಜಾಗೃತಿ ಕಾರ್ಯಕ್ರಮದಲ್ಲಿ ಡಿಎಚ್‌ಓ ಡಾ.ಪರಶುರಾಮ ಮಾತನಾಡಿದರು.  | Kannada Prabha

ಸಾರಾಂಶ

ಹಾವು ಕಡಿತ ಜಾಗತಿಕ ಸಮಸ್ಯೆ. ಜಗತ್ತಿನ ಎಲ್ಲ ದೇಶಗಳಲ್ಲೂ ಬಗೆ-ಬಗೆಯ ಹಾವುಗಳಿದ್ದು, ಅವುಗಳ ಕಡಿತವೂ ಸಾಮಾನ್ಯ. ಆದರೆ, ಇತರೆ ದೇಶಗಳಿಗೆ ಹೋಲಿಸಿದರೆ, ಭಾರತದಲ್ಲಿ ಹಾವುಗಳ ಸಂಖ್ಯೆ ಅಧಿಕ.

ಧಾರವಾಡ:

ಹಾವು ಕಡಿತದ ಸಾವುಗಳು ಸಂಭವಿಸುವ ದೇಶಗಳಲ್ಲಿ ಭಾರತ ಮೊದಲ ಸ್ಥಾನದಲ್ಲಿದೆ. ಗ್ರಾಮೀಣ ಪ್ರದೇಶಗಳಲ್ಲಿ ರೈತರು, ಕಾರ್ಮಿಕರು ಮತ್ತು ಮಕ್ಕಳು ಹಾವು ಕಡಿತಕ್ಕೆ ಹೆಚ್ಚು ಬಲಿಯಾಗುತ್ತಿದ್ದಾರೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ. ಪರಶುರಾಮ ಎಫ್.ಕೆ ಹೇಳಿದರು.

ತಮ್ಮ ಕಚೇರಿಯಲ್ಲಿ ಸೋಮವಾರ ವಿಶ್ವ ಹಾವು ಕಡಿತ ಜಾಗೃತಿ ಕಾರ್ಯಕ್ರಮ ಉದ್ಘಾಟಿಸಿದ ಅವರು, ಹಾವು ಕಡಿತ ಜಾಗತಿಕ ಸಮಸ್ಯೆ. ಜಗತ್ತಿನ ಎಲ್ಲ ದೇಶಗಳಲ್ಲೂ ಬಗೆ-ಬಗೆಯ ಹಾವುಗಳಿದ್ದು, ಅವುಗಳ ಕಡಿತವೂ ಸಾಮಾನ್ಯ. ಆದರೆ, ಇತರೆ ದೇಶಗಳಿಗೆ ಹೋಲಿಸಿದರೆ, ಭಾರತದಲ್ಲಿ ಹಾವುಗಳ ಸಂಖ್ಯೆ ಅಧಿಕ. ಇದರೊಟ್ಟಿಗೆ ಜಾಗೃತಿ ಕೊರತೆಯಿಂದ ಗ್ರಾಮೀಣ ಭಾಗದಲ್ಲಿ ಹಾವು ಕಡಿತದಿಂದ ಮೃತಪಡುವವರ ಸಂಖ್ಯೆಯೂ ಏರಿಕೆಯಾಗಿದೆ. ಇದರಿಂದ ಸಾವಿನ ಪ್ರಮಾಣ ವರ್ಷದಿಂದ ವರ್ಷಕ್ಕೆ ಹೆಚ್ಚುತ್ತಿದೆ ಎಂದರು.

ವಿವಿಧ ಹಾವುಗಳ ಪೈಕಿ ನಾಗರ ಹಾವು, ಕೊಳಕು ಮಂಡಲ, ಕಟ್ಟು ಹಾವು, ಉರಿಮಂಡಲ ಹೆಚ್ಚು ವಿಷಕಾರಿಗಳಾಗಿವೆ. ಈ ನಾಲ್ಕು ಜಾತಿಯ ಹಾವುಗಳು ಗ್ರಾಮೀಣ ಮತ್ತು ನಗರ ಪ್ರದೇಶದ ಜನ ವಸತಿ ಪ್ರದೇಶಗಳಲ್ಲಿ ಹೆಚ್ಚಿದ್ದು, ಇವುಗಳ ಕಡಿತದಿಂದಲೇ ಗರಿಷ್ಠ ಸಂಖ್ಯೆಯ ಜನ ಮೃತಪಡುತ್ತಿದ್ದಾರೆ. ಇವುಗಳ ಚಲನವಲನ, ಆಹಾರ ಪದ್ಧತಿ ಇತ್ಯಾದಿ ವಿಷಯಗಳ ಬಗ್ಗೆ ಮತ್ತು ಕಡಿತದಿಂದ ಪಾರಾಗಲು ತೆಗೆದುಕೊಳ್ಳಬೇಕಾದ ಮುನ್ನೆಚ್ಚರಿಕೆ ಕ್ರಮಗಳನ್ನು ಅರಿತರೆ ಸುಲಭವಾಗಿ ಪಾರಾಗಬಹುದು ಎಂದು ಹೇಳಿದರು.

ಭಾರತದಲ್ಲಿ 300 ವಿಧದ ಹಾವುಗಳಿದ್ದು, ಅವುಗಳೆಲ್ಲವೂ ಅಪಾಯಕಾರಿಯಲ್ಲ, ಹಾಗಾಗಿ ದೇಶದಲ್ಲಿ ಹಾವು ಕಡಿತದಿಂದ ಮೃತ ಪಡುವವರಲ್ಲಿ ಶೇ. 90ಕ್ಕೂ ಅಧಿಕ ಜನರು ನಾಲ್ಕು ಜಾತಿಯ ಹಾವುಗಳ ಕಡಿತದಿಂದ ಮಾತ್ರ ಮೃತಪಡುತ್ತಿದ್ದಾರೆ. ಆದ್ದರಿಂದ ರೈತರು ರಾತ್ರಿ ಜಮೀನುಗಳಿಗೆ ಹೋದಾಗ ಕಡ್ಡಾಯವಾಗಿ ಟಾರ್ಚ್‌ ಲೈಟ್ ಮತ್ತು ಶೂ ಬಳಸಬೇಕು ಹಾಗೂ ಸೂಕ್ತ ಕಳೆ, ಹುಲ್ಲುಗಾವಲು, ಅರಣ್ಯ ಪ್ರದೇಶ, ಜಮೀನಿನಲ್ಲಿ ಕೆಲಸ ಮಾಡುವಾಗ ಗಮ್ ಬೂಟ್ ಬಳಸುವುದು ಸೂಕ್ತ. ಹಾವು ಕಚ್ಚಿದಾಗ, ಗಾಯವನ್ನು ಕತ್ತರಿಸುವುದು, ವಿಷವನ್ನು ಬಾಯಿಯಿಂದ ಹೀರುವುದು, ಗಾಯವನ್ನು ಸುಡುವುದು, ಬಿಗಿಯಾಗಿ ಹಗ್ಗ ಕಟ್ಟುವುದು ಅಥವಾ ಮನೆ ಮದ್ದು ಹಚ್ಚುವುದು ಮಾಡಬಾರದು ಎಂಬ ಸಲಹೆ ನೀಡಿದರು.

ಡಾ. ಮಹೇಶ ಚಿತ್ತರಗಿ ಪ್ರಾಸ್ತಾವಿಕ ಮಾತನಾಡಿದರೆ, ರಮೇಶ ಭಜಂತ್ರಿ ಉಪನ್ಯಾಸ ನೀಡಿದರು. ಡಾ. ಶಶಿಧರ ಕಳಸೂರಮಠ, ಡಾ. ರವೀಂದ್ರ ಬೊವೇರ, ಡಾ. ಮಂಜುನಾಥ ಸೊಪ್ಪಿನಮಠ, ಡಾ. ಸಂಜಯ ಡುಮ್ಮಗೋಳ, ಡಾ. ಕಿರಣ ಕುಲಕರ್ಣಿ, ಡಾ. ತನುಜಾ ಕೆ.ಎನ್, ಬಿ.ಆರ್. ಪಾತ್ರೋಟ ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಮೋದಿ ಜನ್ಮದಿನ: ನಾಳೆ ಬೃಹತ್ ರಕ್ತದಾನ ಶಿಬಿರ
ಸಮಾಜಮುಖಿ ಚಿಂತನೆ, ಅಭಿವೃದ್ಧಿಗೆ ಸದಾಕಾಲ ಮನ್ನಣೆ: ಸಂಸದ ಬೊಮ್ಮಾಯಿ