ಪುರಾಣ ಪ್ರಸಿದ್ಧ ಶ್ರೀ ನವಿಲೆ ನಾಗೇಶ್ವರ ದೇವಾಲಯದ ಅಭಿವೃದ್ಧಿಗೆ ಹೆಚ್ಚಿನ ಆದ್ಯತೆ : ಶಾಸಕ ಸಿ ಎನ್ ಬಾಲಕೃಷ್ಣ

KannadaprabhaNewsNetwork |  
Published : Nov 12, 2026, 01:30 AM IST
11ಎಚ್ಎಸ್ಎನ್9 : ಬಾಗೂರು ಹೋಬಳಿಯ  ನವಿಲೆ ಗ್ರಾಮದಿಂದ ಬೋವಿ ಕಾಲೋನಿವರೆಗೆ 1 ಕೋಟಿ ವೆಚ್ಚದಲ್ಲಿ  ಸುಮಾರು 1 ಕಿಲೋಮೀಟರ್  ಡಾಂಬರು ರಸ್ತೆ ಕಾಮಗಾರಿಗೆ     ಶಾಸಕ ಸಿಎನ್ ಬಾಲಕೃಷ್ಣ   ಭೂಮಿ ಪೂಜೆ ನೆರವೇರಿಸಿದರು. | Kannada Prabha

ಸಾರಾಂಶ

ಗ್ರಾಮದಲ್ಲಿ ಈಗಾಗಲೇ ದೇವಾಲಯದ ಆವರಣದಲ್ಲಿ ಅನ್ನ ದಾಸೋಹ ಮಂಟಪ, ಶೌಚಾಲಯ ಹಾಗೂ ಸ್ನಾನ ಮನೆ ನಿರ್ಮಾಣ ಜೊತೆಗೆ ಸುಮಾರು ₹10 ಕೋಟಿ ವೆಚ್ಚದಲ್ಲಿ ಕಲ್ಯಾಣ ಮಂಟಪ ನಿರ್ಮಾಣದ ಕಾರ್ಯ ನಡೆಯುತ್ತಿದೆ. ಗ್ರಾಮದ ಪರಿಮಿತಿಯಲ್ಲಿ ವಿವಿಧ ಬಡಾವಣೆಗಳ ರಸ್ತೆ ಅಭಿವೃದ್ಧಿ, ₹2 ಕೋಟಿ ವೆಚ್ಚದಲ್ಲಿ ನೂತನ ಆರೋಗ್ಯ ಕೇಂದ್ರ ಕಟ್ಟಡ ನಿರ್ಮಾಣ, ಪ್ರೌಢಶಾಲೆ ಹಾಗೂ ಪ್ರಾಥಮಿಕ ಶಾಲೆಗಳಿಗೆ ಹೊಸ ಕೊಠಡಿ ಹಾಗೂ ಹಳೆಯ ಕೊಠಡಿ ದುರಸ್ತಿ ಕಾರ್ಯ ಸೇರಿ ತಿಪಟೂರು ಮತ್ತು ಚನ್ನರಾಯಪಟ್ಟಣ ತಾಲೂಕು ಕೇಂದ್ರಗಳಿಂದ ದೇವಾಲಯಕ್ಕೆ ಹೆಚ್ಚಿನ ಬಸ್ ಸೌಕರ್ಯ ಕಲ್ಪಿಸಲಾಗಿದೆ ಎಂದರು.

ಕನ್ನಡಪ್ರಭ ವಾರ್ತೆ ಬಾಗೂರು (ನುಗ್ಗೇಹಳ್ಳಿ )

ಹೋಬಳಿಯ ನಾಗರನವಿಲೆ ಗ್ರಾಮದ ನಾಗೇಶ್ವರ ಸ್ವಾಮಿ ದೇವಾಲಯದ ಅಭಿವೃದ್ಧಿ ಕೆಲಸಗಳಿಗೆ ಧಾರ್ಮಿಕ ದತ್ತಿ ಇಲಾಖೆ ವತಿಯಿಂದ ಹೆಚ್ಚಿನ ಅನುದಾನ ನೀಡುವಂತೆ ಮುಜರಾಯಿ ಸಚಿವರನ್ನು ಒತ್ತಾಯಿಸುವುದಾಗಿ ಶಾಸಕ ಸಿ.ಎನ್. ಬಾಲಕೃಷ್ಣ ಹೇಳಿದರು.

ಹೋಬಳಿಯ ನವಿಲೆ ಗ್ರಾಮದಿಂದ ಭೋವಿ ಕಾಲೋನಿವರೆಗೆ ₹1 ಕೋಟಿ ವೆಚ್ಚದಲ್ಲಿ ಸುಮಾರು 1 ಕಿಲೋಮೀಟರ್ ಡಾಂಬರು ರಸ್ತೆ ಕಾಮಗಾರಿಗೆ ಭೂಮಿ ಪೂಜೆ ನೆರವೇರಿಸಿ ಮಾತನಾಡಿದರು.

ಈಗಾಗಲೇ ಚನ್ನರಾಯಪಟ್ಟಣದಿಂದ- ಬಾಗೂರು ಹೋಬಳಿ ಕೇಂದ್ರದ ಮಾರ್ಗವಾಗಿ ನವಿಲೆ ಗ್ರಾಮದವರೆಗೆ ಮತ್ತು ತಿಪಟೂರು - ಚನ್ನರಾಯಪಟ್ಟಣ- ನುಗ್ಗೇಹಳ್ಳಿ ಮಾರ್ಗದ ಮುಖ್ಯ ರಸ್ತೆಯಿಂದ ದೇವಾಲಯದ ಹೊರಗಿನ ರಸ್ತೆ ಅಭಿವೃದ್ಧಿಗೆ ಆದ್ಯತೆ ನೀಡಲಾಗಿದೆ. ಭಕ್ತರಿಗೆ ಹೆಚ್ಚಿನ ಅನುಕೂಲಕ್ಕಾಗಿ ನವಿಲೆ ಗ್ರಾಮದಿಂದ ಭೋವಿ ಕಾಲೋನಿ ಗ್ರಾಮದವರೆಗೆ ಸುಮಾರು 1 ಕಿಲೋ ಮೀಟರ್ ರಸ್ತೆ ಕಾಮಗಾರಿಗೆ ₹1 ಕೋಟಿ ಅನುದಾನದಲ್ಲಿ ಅಭಿವೃದ್ಧಿಪಡಿಸಲಾಗುತ್ತಿದೆ. ಗುತ್ತಿಗೆದಾರರು ಗುಣಮಟ್ಟದ ರಸ್ತೆ ನಿರ್ಮಾಣ ಮಾಡುವಂತೆ ತಿಳಿಸಿದರು.

ಗ್ರಾಮದಲ್ಲಿ ಈಗಾಗಲೇ ದೇವಾಲಯದ ಆವರಣದಲ್ಲಿ ಅನ್ನ ದಾಸೋಹ ಮಂಟಪ, ಶೌಚಾಲಯ ಹಾಗೂ ಸ್ನಾನ ಮನೆ ನಿರ್ಮಾಣ ಜೊತೆಗೆ ಸುಮಾರು ₹10 ಕೋಟಿ ವೆಚ್ಚದಲ್ಲಿ ಕಲ್ಯಾಣ ಮಂಟಪ ನಿರ್ಮಾಣದ ಕಾರ್ಯ ನಡೆಯುತ್ತಿದೆ. ಗ್ರಾಮದ ಪರಿಮಿತಿಯಲ್ಲಿ ವಿವಿಧ ಬಡಾವಣೆಗಳ ರಸ್ತೆ ಅಭಿವೃದ್ಧಿ, ₹2 ಕೋಟಿ ವೆಚ್ಚದಲ್ಲಿ ನೂತನ ಆರೋಗ್ಯ ಕೇಂದ್ರ ಕಟ್ಟಡ ನಿರ್ಮಾಣ, ಪ್ರೌಢಶಾಲೆ ಹಾಗೂ ಪ್ರಾಥಮಿಕ ಶಾಲೆಗಳಿಗೆ ಹೊಸ ಕೊಠಡಿ ಹಾಗೂ ಹಳೆಯ ಕೊಠಡಿ ದುರಸ್ತಿ ಕಾರ್ಯ ಸೇರಿ ತಿಪಟೂರು ಮತ್ತು ಚನ್ನರಾಯಪಟ್ಟಣ ತಾಲೂಕು ಕೇಂದ್ರಗಳಿಂದ ದೇವಾಲಯಕ್ಕೆ ಹೆಚ್ಚಿನ ಬಸ್ ಸೌಕರ್ಯ ಕಲ್ಪಿಸಲಾಗಿದೆ ಎಂದರು.

ಕೃಷಿ ಪತ್ತಿನ ಅಧ್ಯಕ್ಷ ಗಿರೀಶ್, ಪಿಡಬ್ಲ್ಯೂಡಿ ಇಂಜಿನಿಯರ್ ಚಂದ್ರಶೇಖರ್, ತಾಲೂಕು ಪಂಚಾಯಿತಿ ಮಾಜಿ ಸದಸ್ಯ ಓಬಳಾಪುರ ಬಸವರಾಜ್, ಗುತ್ತಿಗೆದಾರರಾದ ಶೋಭಾ ರವಿ, ಮುಖಂಡರಾದ ಜಯದೇವಪ್ಪ, ಕುಮಾರಸ್ವಾಮಿ, ಇಟ್ಟಿಗೆ ನಾಗರಾಜ್, ಸದಾಶಿವಯ್ಯ, ಸಂಪತ್ ಕುಮಾರ್, ಕಾಂತು ರಾಜು, ದಿನೇಶ್ ಸೇರಿ ಗ್ರಾಮಸ್ಥರು ಹಾಜರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಗಡಿನಾಡಿನಲ್ಲಿ ಕನ್ನಡದ ಕಂಪು ಹರಡಲು ‘ಜೊಲ್ಲೆ ಧ್ವನಿ’ ಎಫ್‌ಎಂ
ಅಧಿವೇಶನಕ್ಕೆ 7 ಸಾವಿರ ಪೊಲೀಸರ ನಿಯೋಜನೆ