ಉ.ಕರ್ನಾಟಕದಲ್ಲೇ ಇಂಡಿಗೆ ಗರಿಷ್ಠ ಅನುದಾನ

KannadaprabhaNewsNetwork |  
Published : Jul 23, 2025, 01:50 AM IST
ಇಂಡಿ ಶಾಸಕ ಯಶವಂತರಾಯಗೌಡ ಪಾಟೀಲ ಸುದ್ದಿಗೋಷ್ಠಿ. | Kannada Prabha

ಸಾರಾಂಶ

ಕನ್ನಡಪ್ರಭ ವಾರ್ತೆ ವಿಜಯಪುರ ಜುಲೈ 14ರಂದು ಇಂಡಿಯಲ್ಲಿ ನಡೆದ ವಿವಿಧ ಕಾಮಗಾರಿಗಳ ಶಂಕುಸ್ಥಾಪನೆ ಹಾಗೂ ಉದ್ಘಾಟನೆ ಕಾರ್ಯಕ್ರಮ ಯಶಸ್ವಿಯಾಗಿದೆ. ಉತ್ತರ ಕರ್ನಾಟಕದಲ್ಲೇ ಗರಿಷ್ಠ ಮೊತ್ತದ ಯೋಜನೆಗಳನ್ನು ನಮ್ಮ ಕ್ಷೇತ್ರಕ್ಕೆ ನೀಡುವ ಮೂಲಕ ರಾಜ್ಯ ಸರ್ಕಾರ ಕ್ಷೇತ್ರದ ಜನತೆಗೆ ಅನುಕೂಲ ಕಲ್ಪಿಸಿದೆ ಎಂದು ಇಂಡಿ ಶಾಸಕ ಯಶವಂತರಾಯಗೌಡ ಪಾಟೀಲ ಹೇಳಿದರು. ಅಲ್ಲದೇ, ಇದೀಗ ಇಂಡಿಗೆ ವಸತಿ ಶಾಲೆ‌ ನೀಡಿದ ಕಾರ್ಮಿಕ‌ ಸಚಿವ ಸಂತೋಷ ಲಾಡ್‌ ಅವರಿಗೆ ಅಭಿನಂದನೆ ಸಲ್ಲಿಸುವುದಾಗಿ ತಿಳಿಸಿದರು.

ಕನ್ನಡಪ್ರಭ ವಾರ್ತೆ ವಿಜಯಪುರ

ಜುಲೈ 14ರಂದು ಇಂಡಿಯಲ್ಲಿ ನಡೆದ ವಿವಿಧ ಕಾಮಗಾರಿಗಳ ಶಂಕುಸ್ಥಾಪನೆ ಹಾಗೂ ಉದ್ಘಾಟನೆ ಕಾರ್ಯಕ್ರಮ ಯಶಸ್ವಿಯಾಗಿದೆ. ಉತ್ತರ ಕರ್ನಾಟಕದಲ್ಲೇ ಗರಿಷ್ಠ ಮೊತ್ತದ ಯೋಜನೆಗಳನ್ನು ನಮ್ಮ ಕ್ಷೇತ್ರಕ್ಕೆ ನೀಡುವ ಮೂಲಕ ರಾಜ್ಯ ಸರ್ಕಾರ ಕ್ಷೇತ್ರದ ಜನತೆಗೆ ಅನುಕೂಲ ಕಲ್ಪಿಸಿದೆ ಎಂದು ಇಂಡಿ ಶಾಸಕ ಯಶವಂತರಾಯಗೌಡ ಪಾಟೀಲ ಹೇಳಿದರು. ಅಲ್ಲದೇ, ಇದೀಗ ಇಂಡಿಗೆ ವಸತಿ ಶಾಲೆ‌ ನೀಡಿದ ಕಾರ್ಮಿಕ‌ ಸಚಿವ ಸಂತೋಷ ಲಾಡ್‌ ಅವರಿಗೆ ಅಭಿನಂದನೆ ಸಲ್ಲಿಸುವುದಾಗಿ ತಿಳಿಸಿದರು.

ನಗರದ ಪ್ರವಾಸಿ ಮಂದಿರದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಕಾರ್ಯಕ್ರಮದಲ್ಲಿ ಸಿಎಂ ಸಿದ್ಧರಾಮಯ್ಯ, ಡಿಸಿಎಂ ಡಿ.ಕೆ.ಶಿವಕುಮಾರ ಸೇರಿದಂತೆ ಹಲವು ಸಚಿವರು ಭಾಗವಹಿಸಿದ್ದರು. ಈ ಕಾರ್ಯಕ್ರಮದಲ್ಲಿ ಅಪಾರ ಜನಸ್ತೋಮ ಬಂದಿದ್ದು ಕಂಡು ಅಭಿವೃದ್ಧಿ ಕಾಮಗಾರಿ ಮಾಡಿದ್ದಕ್ಕೂ ಸಾರ್ಥಕವಾಯಿತು ಎನಿಸಿತು. ಬೇರೆ ಯಾವ ಕಾರ್ಯಕ್ರಮಕ್ಕೂ ಇಷ್ಟು ಜನ ಭಾಗವಹಿಸುವುದಿಲ್ಲ. ಇಷ್ಟು ಜನ ಭಾಗವಹಿಸಿದ್ದಕ್ಕೆ ಮುಖ್ಯ ಕಾರಣವೇ ನೀರಾವರಿ ಅಭಿವೃದ್ಧಿ ಎಂದರು. ಮುಖ್ಯಮಂತ್ರಿಗಳಿಗೆ, ಉಪಮುಖ್ಯಮಂತ್ರಿಗಳಿಗೆ ಹಾಗೂ ಇಂಡಿ ಕ್ಷೇತ್ರದ ಅಭಿವೃದ್ಧಿಗೆ ಸಹಕರಿಸಿದ ಸಚಿವರಿಗೆ ಹಾಗೂ ಕ್ಷೇತ್ರದ ಜನತೆಗೂ ಅಭಿನಂದನೆ ಸಲ್ಲಿಸುವುದಾತಿ ಹೇಳಿದರು.ನೀರಾವರಿ ಯೋಜನೆಗಳಿಗೆ ₹ 3800 ಕೋಟಿ ಸರ್ಕಾರ ನೀಡಿದೆ. ಜೊತೆಗೆ ಹಲವು ರಸ್ತೆಗಳು, ಪವರ್ ಸ್ಟೇಷನ್‌ಗಳು, ಜಿಟಿಡಿಸಿ ಕಾಲೇಜು, ಮೆಗಾ ಮಾರುಕಟ್ಟೆ ಸೇರಿದಂತೆ ಹಲವು ಕಾರ್ಯಗಳನ್ನು ಕೈಗೊಳ್ಳಳಾಗಿದೆ. ನನ್ನ ಕ್ಷೇತ್ರಕ್ಕೆ ₹ 4559 ಕೋಟಿ ಅನುದಾನ ನೀಡಿ, ಅನೇಕ ಅಭಿವೃದ್ಧಿ ಕಾಮಗಾರಿಗಳನ್ನು ಮಾಡಲು ಅನುಕೂಲ ಮಾಡಿಕೊಟ್ಟಿದ್ದಾರೆ ಎಂದರು.

ಎಲ್ಲವನ್ನು ಗ್ಯಾರಂಟಿಗಾಗಿ ಸುರಿದಿದ್ದಾರೆ, ಇವರ ಬಳಿ ಅಭಿವೃದ್ಧಿಗೆ ಹಣವಿಲ್ಲ ಎಂದು ಹೇಳುತ್ತಿದ್ದ ವಿರೋಧ ಪಕ್ಷಗಳಿಗೆ ಇಂಡಿಯಲ್ಲಿ ನಡೆದ ಈ ಕಾರ್ಯಕ್ರಮವೇ ತಕ್ಕ ಉತ್ತರವಾಗಿದೆ. ಅನುಭವಿ ನಾಯಕ ಸಿದ್ಧರಾಮಯ್ಯನವರು ಸಿಎಂ ಆದರೆ ಅಭಿವೃದ್ಧಿ ಹೇಗೆ ಆಗುತ್ತದೆ ಎಂಬುದಕ್ಕೆ ಇದು ಸಾಕ್ಷಿಯಾಗಿದೆ. ಲಿಂಬೆ ಬೆಳೆಗಾರರ ಹಿತ ಕಾಪಾಡುವ ಕೆಲಸವನ್ನು ನಾವು ಮಾಡುತ್ತೇವೆ. ಲಿಂಬೆ ಬೆಲೆಯ ಮೇಲೆ‌ ಸ್ಥಿರತೆ ಉಳಿಸಬೇಕು ಎಂಬ ಕೆಲಸ ಮಾಡುತ್ತೇವೆ. ನೀರಾವರಿ ಹಾಗೂ ಅಭಿವೃದ್ಧಿಯಿಂದ ನಮ್ಮ ಭಾಗದ ರೈತರ ಬದುಕು ಬದಲಾವಣೆಯಾಗಲಿದೆ. ಲಿಂಬೆಗೆ ಜಿಐ ಟ್ಯಾಗ್ ಮಾಡುಬೇಕು ಎಂಬ ಪರಿಕಲ್ಪನೆ ಕೊಟ್ಟವನು ನಾನು. ಲೈಮ್ ಬೋರ್ಡ್ ಮಾಡಿಸಿದ್ದು ನಾನು. ಲಿಂಬೆಗೆ ಬ್ರ್ಯಾಂಡ್ ಕ್ರಿಯೆಟ್ ಮಾಡಿದ್ದರಿಂದ ರೈತರಿಗೆ ಅನುಕೂಲವಾಗಿದೆ ಎಂದು ಹೇಳಿದರು.ನಾನು ಮೊದಲ ಬಾರಿ ವಿಧಾನಸೌಧದಲ್ಲಿ ಕೇಳಿದ ಪ್ರಶ್ನೆಯೇ ಆರ್ಟಿಕಲ್ 371ಜೆ ವಿಜಯಪುರ ಜಿಲ್ಲೆಗೂ ಅನ್ವಯವಾಗಬೇಕು ಎಂಬುದು. ಜಿಲ್ಲೆಯ ಸಿಂದಗಿ, ಇಂಡಿ ಭಾಗದವರು ಹೈದ್ರಾಬಾದ್ ಭಾಗದಲ್ಲೇ ಇದ್ದೇವೆ. ನಾವು ಹಿಂದುಳಿದಿದ್ದೇವೆ, ಕಲ್ಯಾಣ ಕರ್ನಾಟಕಕ್ಕೆ ₹ 5 ಸಾವಿರ ಕೋಟಿ ಹಣ ನೀಡಿದಂತೆ ನಮಗೂ ವಿಶೇಷ ಅನುದಾನ ನೀಡಬೇಕು ಎಂದು ಮನವಿ ಮಾಡಿದರು.

------ಕೋಟ್‌ಸಚಿವ ಸಂಪುಟ ವಿಸ್ತರಣೆ ಬಗ್ಗೆ ನಾನು ಮಾತನಾಡುವುದಿಲ್ಲ. ನಾನು ಕಾಂಗ್ರೆಸ್ ನಲ್ಲೇ ಹುಟ್ಟಿದ್ದೇನೆ, ಕಾಂಗ್ರೆಸ್‌ನಲ್ಲೇ ಸಾಯುತ್ತೇನೆ. 2018 ರಿಂದ 2023ರ ವರೆಗೆ ಜಿಲ್ಲೆಯಲ್ಲಿ ನಾವು ಮೂರು ಜನ ಶಾಸಕರಿದ್ಧೇವು. ಆಗ ನಮ್ಮಗಳ ಮಧ್ಯೆ ಏನೇನು ಮಾತುಕತೆಯಾಗಿವೆ. ಅದರ ಬಗ್ಗೆ ನಮಗೆ ಮಾತ್ರ ಗೊತ್ತಿದೆ. ಆದರೆ, ಆ ಸಮಯದಲ್ಲಿ ಆಡಿದ ಮಾತುಗಳನ್ನು ಅವರು ಪಾಲಿಸಬೇಕು.ಯಶವಂತರಾಯಗೌಡ ಪಾಟೀಲ, ಇಂಡಿ ಶಾಸಕ

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ರಸಗೊಬ್ಬರ ಬಳಕೆ ಕಡಿಮೆ ಮಾಡಿ : ಸಿಎಂ ಸಲಹೆ
''ತಾಕತ್ತು ಇದ್ದರೆ ನೋಟಿನಲ್ಲಿರುವ ಗಾಂಧೀಜಿಯವರ ಭಾವಚಿತ್ರವನ್ನು ತೆಗೆಯಲಿ''