ಕನ್ನಡಪ್ರಭ ವಾರ್ತೆ ಅಥಣಿ
ರಾಜ್ಯದಲ್ಲಿಯೇ ಅತೀ ಹೆಚ್ಚು ಅಥಣಿ ಮತಕ್ಷೇತ್ರಕ್ಕೆ 9 ಸರ್ಕಾರಿ ಪ್ರೌಢಶಾಲೆಗಳು ಮಂಜೂರಾಗಿವೆ ಎಂದು ಶಾಸಕ ಲಕ್ಷ್ಮಣ ಸವದಿ ಹೇಳಿದರು.ತಾಲೂಕಿನ ಖವಟಕೊಪ್ಪ ಗ್ರಾಮದ ಸರ್ಕಾರಿ ಕನ್ನಡ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಪ್ರೌಢಶಾಲಾ ಶಿಕ್ಷಣದ 9ನೇ ತರಗತಿಯ ಕೊಠಡಿ ಉದ್ಘಾಟಿಸಿ ಮಾತನಾಡಿದ ಅವರು, ಸ್ವಾತಂತ್ರ್ಯದ ನಂತರದಿಂದ ಇಲ್ಲಿಯವರೆಗೂ ಅಥಣಿ ಪಟ್ಟಣದಲ್ಲಿ ಒಂದು ಸರ್ಕಾರಿ ಪ್ರೌಢಶಾಲೆ ಇರಲಿಲ್ಲ. ಇದಕ್ಕೆ ಅನೇಕ ತಾಂತ್ರಿಕ ಅಡಚಣೆಗಳನ್ನು ಶಿಕ್ಷಣ ಇಲಾಖೆ ಕೊಡುತ್ತಿತ್ತು. ಹೀಗಾಗಿ 75 ವರ್ಷಗಳಿಂದಲೂ ಅಥಣಿಯಲ್ಲಿ ಸರ್ಕಾರಿ ಪ್ರೌಢಶಾಲೆ ಇರಲಿಲ್ಲ. ನಾನು ಶಿಕ್ಷಣ ಸಚಿವ ಮಧು ಬಂಗಾರನವರಿಗೆ ವಿಶೇಷ ಮನವಿ ಮಾಡಿದ ಪರಿಣಾಮ ಅಥಣಿ ಸೇರಿದಂತೆ ತಾಲೂಕಿನ 9 ಗ್ರಾಮಗಳಿಗೆ ಸರ್ಕಾರಿ ಪ್ರೌಢಶಾಲೆಗಳು ಮಂಜೂರಾಗಿವೆ ಎಂದರು.ಖವಟಕೊಪ್ಪ ಗ್ರಾಮಸ್ಥರು ಗ್ರಾಮದ ಅಭಿವೃದ್ಧಿಗಾಗಿ ಸ್ಮಶಾನ ಭೂಮಿಯ ಮಂಜೂರಾತಿ, ಗುಣಮಟ್ಟದ ವಿದ್ಯುತ್‌ಗಾಗಿ ಗ್ರಾಮದ ಸಮೀಪದಲ್ಲಿ ನಿರ್ಮಿಸುತ್ತಿರುವ 110 ಕೆವಿ ವಿದ್ಯುತ್ ವಿತರಣಾ ಘಟಕವನ್ನು ಬೇಗ ಪೂರ್ಣಗೊಳಿಸಬೇಕು. ಈ ರೀತಿ ಅನೇಕ ಬೇಡಿಕೆಗಳನ್ನು ನನ್ನ ಮುಂದೆ ಇಟ್ಟಿದ್ದು, ಇವುಗಳನ್ನು ಹಂತ ಹಂತವಾಗಿ ಈಡೇರಿಸುವೆ ಎಂದರು. ಕೌಲಗುಡ್ಡದ ಸಿದ್ದಯೋಗಿ ಅಮರೇಶ್ವರ ಮಹಾರಾಜರು ಸಾನ್ನಿಧ್ಯ ವಹಿಸಿ ಮಾತನಾಡಿ, ಶಿಕ್ಷಕರು ಸಂಬಳಕ್ಕಾಗಿ ದುಡಿಯದೇ ಮಕ್ಕಳ ಬದುಕನ್ನು ಕಟ್ಟುವ ಶಿಲ್ಪಿಗಳಾಗಬೇಕು ಎಂದರು.ಇದೇ ಸಂದರ್ಭದಲ್ಲಿ ಸರ್ಕಾರದಿಂದ ಮಂಜೂರಾದ ಅನುದಾನದಲ್ಲಿ ಶಾಲಾ ವಿದ್ಯಾರ್ಥಿಗಳಿಗೆ ಶೂ ಮತ್ತು ಸಾಕ್ಸ್‌ಗಳನ್ನು ವಿತರಿಸಲಾಯಿತು. ಈ ವೇಳೆ ಗ್ರಾಮದ ಮುಖಂಡ, ಪಿಕೆಪಿಎಸ್ ಅಧ್ಯಕ್ಷ ಆನಂದ ಕುಲಕರ್ಣಿ, ಡಾ.ಧರೆಪ್ಪ ಚೌಗಲಾ, ನಿವೃತ್ತ ಶಿಕ್ಷಕ ಬಿ.ಕೆ.ಅನ್ನಣ್ಣವರ ಮಾತನಾಡಿದರು.ಈ ಸಂದರ್ಭದಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿ ಎಂ.ಆರ್.ಮುಂಜೆ, ತಾ.ಪಂ ಅಧಿಕಾರಿ ಶಿವಾನಂದ ಕಲ್ಲಾಪುರ, ಗ್ರಾ.ಪಂ ಅಧ್ಯಕ್ಷ ಸಿದ್ರಾಮ ಬಡಿಗೇರ, ಶಾಲಾ ಮೇಲುಸ್ತುವಾರಿ ಸಮಿತಿ ಅಧ್ಯಕ್ಷ ವಿಠಲ್ ಕಾಂಬಳೆ, ಬಿಸಿಯೂಟ ಅಧಿಕಾರಿ ಮಲ್ಲಿಕಾರ್ಜುನ ನಾಮದಾರ, ಅಥಣಿ ಪುರಸಭಾ ಸದಸ್ಯರಾದ ಕಲ್ಲೇಶ ಮಡ್ಡಿ, ಆಸೀಫ್ ತಾಂಬೋಳಿ, ರಾಜು ಬುಲಬುಲೆ, ಮುಖಂಡರಾದ ಎಸ್.ಆರ್.ಘಳಪ್ಪನವರ, ಶಾಂತಿನಾಥ ನಂದೇಶ್ವರ, ಎ.ಎಂ.ಖೋಬ್ರಿ, ಅನಂತ ಬಸರಿಖೋಡಿ, ಸುರೇಂದ್ರ ಶಿವಣ್ಣವರ, ವಿವೇಕ ನಾರಗೊಂಡ, ಕುಮಾರ ಚೌಗಲಾ, ಪ್ರದೀಪ ನಂದಗಾಂವ, ಮಹಾದೇವ ಚೌಗಲಾ, ಮಹಾಂತೇಶ ಠಕ್ಕಣ್ಣವರ, ಸಾಗರ್ ಬುಲ ಬುಲೆ, ಸುರೇಶ ವಾಡೇದ ಸೇರಿದಂತೆ ಅನೇಕರು ಉಪಸ್ಥಿತರಿದ್ದರು. ಶಾಲೆಯ ಮುಖ್ಯೋಪಾಧ್ಯಾಯ ಆರ್.ಸಿ.ಕನ್ನೋಳಿ ಸ್ವಾಗತಿಸಿ, ವಂದಿಸಿದರು.ನನ್ನ ತಂದೆ ಶಿಕ್ಷಣ ಪಡೆದ ಗ್ರಾಮದ ಈ ಶಾಲೆಯ ಶತಮಾನೋತ್ಸವ ಆಚರಣೆಗೆ ಎಲ್ಲ ರೀತಿಯ ಸಹಕಾರ ನೀಡುವೆ. ಖವಟಕೊಪ್ಪ ಗ್ರಾಮಕ್ಕೆ ₹65 ಲಕ್ಷ ವೆಚ್ಚದ ಸರ್ಕಾರಿ ಆಯುಷ್ ಆಸ್ಪತ್ರೆ ಮಂಜೂರಾಗಿದ್ದು, ಕೆಲವೇ ದಿನಗಳಲ್ಲಿ ಟೆಂಡರ್ ಪ್ರಕ್ರಿಯೆ ಪೂರ್ಣಗೊಂಡ ನಂತರ ಕಾಮಗಾರಿ ಪ್ರಾರಂಭಗೊಳ್ಳುವುದು.
-ಲಕ್ಷ್ಮಣ ಸವದಿ, ಶಾಸಕರು.