ಬೇಡ್ತಿ- ಅಘನಾಶಿನಿ ತಿರುವು ಯೋಜನೆ ವಿರೋಧಿಸಿ ನವೆಂಬರ್ 3ರಂದು ಹೆದ್ದಾರಿ ತಡೆ

KannadaprabhaNewsNetwork |  
Published : Oct 25, 2026, 02:15 AM IST
ಉಪಳೇಶ್ವರದಲ್ಲಿ ಶನಿವಾರ ಜನಸಂಪರ್ಕ ಅಭಿಯಾನ ನಡೆಯಿತು. | Kannada Prabha

ಸಾರಾಂಶ

ಯೋಜನೆಯನ್ನು ನಿಲ್ಲಿಸುವುದೇ ನಮ್ಮ ಉದ್ದೇಶ. ಜನರು ಕೈಜೋಡಿಸಬೇಕು. ಯೋಜನೆಯಿಂದ ಆಗಬಹುದಾದ ಅಪಾಯ ಮತ್ತು ಹಾನಿಯ ಬಗ್ಗೆ ತಿಳಿದುಕೊಳ್ಳಬೇಕು.

ಯಲ್ಲಾಪುರ: ಬೇಡ್ತಿ- ಅಘನಾಶಿನಿ ನದಿ ತಿರುವು ಯೋಜನೆ ವಿರೋಧಿಸಿ ನ. 3ರಂದು ಹಮ್ಮಿಕೊಂಡಿರುವ ರಸ್ತೆತಡೆ ಪ್ರತಿಭಟನೆಗೆ ಹೆಚ್ಚಿನ ಸಂಖ್ಯೆಯಲ್ಲಿ ಜನರು ಪಾಲ್ಗೊಳ್ಳುವಂತೆ ಮನವಿ ಮಾಡಲು ರಸ್ತೆ ತಡೆ ಸಂಚಾಲನಾ ಸಮಿತಿಯಿಂದ ಕಿರವತ್ತಿ, ಮಾದೇಕೊಪ್ಪ ಹಾಗೂ ಚಂದಗುಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಉಪಳೇಶ್ವರದಲ್ಲಿ ಶನಿವಾರ ಜನಸಂಪರ್ಕ ಅಭಿಯಾನ ನಡೆಸಲಾಯಿತು.ಸಮಿತಿಯ ಅಧ್ಯಕ್ಷ ಎನ್.ಕೆ. ಭಟ್, ಪ್ರಧಾನ ಸಂಚಾಲಕ ಹರಿಪ್ರಕಾಶ ಕೋಣೆಮನೆ, ವಿಧಾನಪರಿಷತ್ ಮಾಜಿ ಸದಸ್ಯ ಶಾಂತಾರಾಮ ಸಿದ್ದಿ, ಸಂಚಾಲಕರಾದ ರಾಘವೇಂದ್ರ ಭಟ್ಟ ಹಾಸಣಗಿ, ವೆಂಕಟ್ರಮಣ ಕಿರಕುಂಭತ್ತಿ, ಸುಬ್ಬಣ್ಣ ಉದ್ದಾಬೈಲ್ ಹಾಗೂ ಕೊಳ್ಳ ಸಮಿತಿಯ ಸಂಚಾಲಕ ನರಸಿಂಹ ಸಾತೊಡ್ಡಿ ಅವರು ಯೋಜನೆಯಿಂದಾಗಬಹುದಾದ ಪರಿಣಾಮಗಳ ಕುರಿತು ಮಾಹಿತಿ ನೀಡಿದರು. ಪ್ರತಿಭಟನೆಗೆ ಸಂಬಂಧಿಸಿದಂತೆ ಮನೆಮನೆ ಸಂಪರ್ಕದ ಅಗತ್ಯ ಹಾಗೂ ಹೋರಾಟದ ರೂಪುರೇಷೆಗಳನ್ನು ವಿವರಿಸಿದರು.ಕಿರವತ್ತಿ- ಮದನೂರು ಭಾಗದಿಂದ ಗೌಳಿ ಸಮುದಾಯದವರು ದೊಡ್ಡ ಸಂಖ್ಯೆಯಲ್ಲಿ ಪ್ರತಿಭಟನೆಯಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದು ಸಮುದಾಯದ ಮುಖಂಡ ದೋಂಡು ಪಾಟೀಲ್ ತಿಳಿಸಿದರು. ಮಾದೇಕೊಪ್ಪದಲ್ಲಿ ನಡೆದ ಸಭೆಯಲ್ಲಿ ಗೌಳಿ ಸಮುದಾಯದ ಪ್ರಮುಖರು, ವಿಠ್ಠಲ- ರುಕ್ಮಾಯಿ ದೇವಾಲಯದ ಪ್ರಮುಖರು ಹಾಗೂ ಸಮುದಾಯದ ಮುಖಂಡರು ಭಾಗವಹಿಸಿದ್ದರು.ಕಿರವತ್ತಿಯ ಒಂಬತ್ತು ಗ್ರಾಮಗಳ ಪ್ರಮುಖರ ಸಭೆ ನಡೆಸಿ, ಪ್ರತಿ ಮನೆಗೂ ಪ್ರತಿಭಟನೆಯ ಸಂದೇಶ ತಲುಪಿಸುವ ಮೂಲಕ ನ. 3ರ ಹೋರಾಟದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳಲು ನಿರ್ಧರಿಸಲಾಯಿತು. ಈ ಭಾಗದಿಂದ ಸುಮಾರು ಎರಡರಿಂದ ಎರಡೂವರೆ ಸಾವಿರ ಜನರು ರಸ್ತೆ ತಡೆ ಪ್ರತಿಭಟನೆಯಲ್ಲಿ ಭಾಗವಹಿಸುವ ನಿರೀಕ್ಷೆಯಿದೆ ಎಂದು ಭೀರು ಶಿಂಧೆ ಹಾಗೂ ದೋಂಡು ಪಾಟೀಲ್ ತಿಳಿಸಿದರು.

ಉಪಳೇಶ್ವರದಲ್ಲಿ ಮಾಜಿ ಎಂಎಲ್ಸಿ ಶಾಂತಾರಾಮ ಸಿದ್ದಿ ಅವರು, ಯೋಜನೆಯನ್ನು ನಿಲ್ಲಿಸುವುದೇ ನಮ್ಮ ಉದ್ದೇಶ. ಜನರು ಕೈಜೋಡಿಸಬೇಕು. ಯೋಜನೆಯಿಂದ ಆಗಬಹುದಾದ ಅಪಾಯ ಮತ್ತು ಹಾನಿಯ ಬಗ್ಗೆ ತಿಳಿದುಕೊಳ್ಳಬೇಕು. ಯೋಜನೆ ಕಾರ್ಯಗತಗೊಳಿಸಿದರೂ ಅದು ಮುಂದುವರಿಯದೆ ಹಳ್ಳ ಹಿಡಿಯಬಹುದು ಎಂಬುದಕ್ಕೆ ಹಿಂದಿನ ಉದಾಹರಣೆಗಳಿವೆ. ಜನರು ಒಗ್ಗಟ್ಟಿನಿಂದ ಈ ಯೋಜನೆಯನ್ನು ವಿರೋಧಿಸಬೇಕು ಎಂದರು.ಪ್ರಧಾನ ಸಂಚಾಲಕ ಹರಿಪ್ರಕಾಶ ಕೋಣೆಮನೆ ಹಾಗೂ ಸಂಚಾಲಕ ರಾಘವೇಂದ್ರ ಭಟ್ಟ ಹಾಸಣಗಿ ಅವರು ರಸ್ತೆ ತಡೆ ಪ್ರತಿಭಟನೆಯ ರೂಪುರೇಷೆಗಳನ್ನು ವಿವರಿಸಿದರು. ಸಭೆಯಲ್ಲಿ ಪಾಂಡ್ರಮೀಸೆ, ಸುನೀಲ್, ಭೀರು ಶಿಂಧೆ, ಬಜ್ಜು ಪಿಂಗಳೆ ಸೇರಿದಂತೆ ಹಲವರು ಪಾಲ್ಗೊಂಡಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಹತ್ತಾರು ಕ್ಷೇತ್ರಗಳಲ್ಲಿ ಕೊಂಕಣಿಗರ ಛಾಪು: ಫಾ. ಥಾಮಸ್ ಫರ್ನಾಂಡೀಸ್
ಕೈಗಾ ಯೋಜನೆಗೆ ಭಾರಿ ವಾಹನಗಳ ಸಂಚಾರಕ್ಕೆ ಅನುಮತಿ