ಕನ್ನಡಪ್ರಭ ವಾರ್ತೆ ಶ್ರೀರಂಗಪಟ್ಟಣ
ಗ್ರಾಮದ ಮನೆ, ದೇವಸ್ಥಾನ, ಕಚೇರಿ ಸೇರಿದಂತೆ ಹೆದ್ದಾರಿ ಎರಡು ಕಡೆಗಳಲ್ಲಿ ಚರಂಡಿ ನಿರ್ಮಿಸಿ ಕಾಮಗಾರಿ ನಡೆಸಬೇಕು. ಆದರೆ, ಸುಮಾರು 30 ಮೀಟರ್ ಕಡಿಮೆ ಇರುವ ನಮ್ಮ ಕೇವಲ ಎರಡು-ಮೂರು ಮನೆಗಳ ಮುಂದೆ ಮಾತ್ರ ಚರಂಡಿ ನಿರ್ಮಿಸದೆ ಹೆದ್ದಾರಿ ಕಾಮಗಾರಿ ನಡೆಸುತ್ತಿದ್ದಾರೆ ಎಂದು ದೂರಿದರು.
ಇದನ್ನು ಪ್ರಶ್ನಿಸಲು ಮುಂದಾದರೆ ಕಾಮಗಾರಿಗೆ ತೊಂದರೆ ನೀಡುತ್ತಿರುವುದಾಗಿ ಪೊಲೀಸ್ ಠಾಣೆಗೆ ದೂರು ನೀಡುವುದಾಗಿ ಗುತ್ತಿಗೆದಾರ ಹೆದರಿಸುತ್ತಿದ್ದಾರೆ. ಅಲ್ಲದೇ, ಮನೆ ಮುಂಭಾಗದಲ್ಲಿ 3 ತೆಂಗಿನ ಮರಗಳಿದ್ದು ಅದನ್ನ ನೀವೆ ಕತ್ತರಿಸಿಕೊಡಿ ನಂತರ ಚರಂಡಿ ಮಾಡಿಕೊಡುವುದಾಗಿ ಹಾರಿಕೆ ಉತ್ತರ ನೀಡುತ್ತಿದ್ದಾರೆ ಎಂದು ನಿವಾಸಿ ಲೋಹಿತ್ ಬೇಸರ ವ್ಯಕ್ತಪಡಿಸಿದರು.ಮನೆ ಪಕ್ಕದಲ್ಲೇ ಖಾಸಗಿ ಶಾಲೆ ಇದ್ದು, ಅಲ್ಲಿಯ ವರೆವಿಗೂ ಚರಂಡಿ ನಿರ್ಮಿಸಿದ್ದಾರೆ. ಉಳಿದ ಕೇವಲ 30 ಮೀಟರ್ ಚರಂಡಿ ನಿರ್ಮಿಸದೆ ತೊಂದರೆ ನೀಡುತ್ತಿದ್ದಾರೆ. ಮನೆ ಕೆಲಭಾಗದಲ್ಲಿದ್ದು, ಮಳೆ ನೀರು ಬಂದರೆ ನೇರವಾಗಿ ಮನೆಗೆ ನುಗ್ಗಲಿದೆ. ಇದರಿಂದ ಮನೆಯಲ್ಲಿ ವಾಸಮಾಡಲು ಸಾಧ್ಯವಿಲ್ಲ.ಈ ಬಗ್ಗೆ ಸಂಬಂಧ ಪಟ್ಟ ಎಂಜಿನಿಯರ್ ರನ್ನು ದೂರವಾಣಿ ಮೂಲಕ ಸಂಪರ್ಕಿಸಿದರೆ, ಸ್ಥಳಕ್ಕೆ ಬಂದು ಪರಿಶೀಲಿಸುತ್ತೇನೆ ಎಂದು ಹೇಳುತ್ತಾರೆ ವಿನಃ ಈ ವರೆವಿಗೂ ಸ್ಥಳಕ್ಕೆ ಬಂದಿಲ್ಲ. ಈಗಾಗಲೇ ಕಾಮಗಾರಿ ಮುಗಿಯುವ ಹಂತಕ್ಕೆ ತಲುಪಿದ್ದು, ಚರಂಡಿ ನಿರ್ಮಿಸಿಕೊಡುವಂತೆ ಸ್ಥಳೀಯರು ಒತ್ತಾಯಿಸಿದರು.
ಈ ವೇಳೆ ಹಿಂದೂ ಜಾಗರಣೆ ವೇದಿಕೆ ಚಂದನ್, ಉದ್ಯೋಗದಾತ ಸಂಸ್ಥೆ ರುಕ್ಮಾಂಗದ ಸೇರಿಂದತೆ ಕಿರಂಗೂರು ಗ್ರಾಮಸ್ಥರು ಇದ್ದರು.