ದಾಬಸ್‍ಪೇಟೆ: ರಾಷ್ಟ್ರೀಯ ಹೆದ್ದಾರಿಯ ವಾಹನ ಸವಾರರಿಗೆ ಮತ್ತೊಂದು ದರ ಏರಿಕೆ ಶಾಕ್ ಎದುರಾಗಿದೆ. ಬೆಂಗಳೂರು ಹೊರವಲಯದ ನೆಲಮಂಗಲ-ಹಾಸನ ರಾಷ್ಟ್ರೀಯ ಹೆದ್ದಾರಿ-75ರಲ್ಲಿ ಸೆಪ್ಟೆಂಬರ್ 1ರಿಂದ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಟೋಲ್ ದರ ಏರಿಕೆ ಮಾಡಿದೆ.
ಕಾರು, ಜೀಪ್, ವ್ಯಾನ್ ಹಾಗೂ ಲಘು ವಾಹನಗಳಿಗೆ ಫಾಸ್ಟ್‌ಟ್ಯಾಗ್ ಬಳಕೆದಾರರಿಗೆ ಏಕಮುಖ ಸಂಚಾರಕ್ಕೆ 60 ರು., ಅದೇ ದಿನದ ಮರು ಸಂಚಾರದ (ರಿಟರ್ನ್ ಪಾಸ್) ದರ 85 ರು. ನಿಂದ 90 ರು.ಗಳಿಗೆ ಏರಿಕೆಯಾಗಿದೆ. ಲಘು ವಾಣಿಜ್ಯ ಹಾಗೂ ಸರಕು ವಾಹನಗಳಿಗೆ ಏಕಮುಖ ಸಂಚಾರ ದರ 100ರಿಂದ 105 ರು.ಗಳಿಗೆ ಹಾಗೂ ದಿನದ ಸಂಚಾರದ ದರ 155 ರು.ಗಳಿಗೆ ಹೆಚ್ಚಳವಾಗಿದೆ. ಬಸ್ ಮತ್ತು ಟ್ರಕ್‌ಗಳಿಗೆ ಏಕಮುಖ ಸಂಚಾರಕ್ಕೆ 205 ರು. ಹಾಗೂ ದಿನದ ಸಂಚಾರಕ್ಕೆ 310 ರು. ನಿಗದಿಪಡಿಸಲಾಗಿದೆ. ಮಲ್ಟಿ ಆಕ್ಸಲ್ ಹಾಗೂ ಬೃಹತ್ ವಾಹನಗಳಿಗೆ ಏಕಮುಖ ಸಂಚಾರಕ್ಕೆ 330 ರು. ಹಾಗೂ ದಿನದ ಸಂಚಾರಕ್ಕೆ 495 ರು. ಶುಲ್ಕ ನಿಗದಿ ಮಾಡಲಾಗಿದೆ.
ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಪ್ರಕಾರ, ಟೋಲ್ ಶುಲ್ಕದ ಏರಿಕೆ ವಾರ್ಷಿಕ ದರ ಪರಿಷ್ಕರಣೆಯ ಭಾಗವಾಗಿದ್ದು, ಹಣದುಬ್ಬರ ಮತ್ತು ರಸ್ತೆ ನಿರ್ವಹಣೆಯ ವೆಚ್ಚದ ಏರಿಕೆಗೆ ಅನುಗುಣವಾಗಿ ಮಾಡಲಾಗುತ್ತದೆ. ಈ ಮಾರ್ಗದ ನಿರ್ವಹಣೆ ಮತ್ತು ದುರಸ್ತಿಗಾಗಿ ಹೆಚ್ಚಿನ ಹಣಕಾಸು ಅಗತ್ಯವಿದೆ ಎಂದು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ತಿಳಿಸಿದೆ.ವಾಹನ ಸವಾರರ ಆಕ್ರೋಶ:
ಪೆÇೀಟೋ 6 :