ಏ.19ರಂದು ಪಾದಯಾತ್ರೆ, ಓಟ

KannadaprabhaNewsNetwork |  
Published : Apr 17, 2026, 04:00 AM IST
ಇಂಡಿ | Kannada Prabha

ಸಾರಾಂಶ

ಕನ್ನಡಪ್ರಭ ವಾರ್ತೆ ವಿಜಯಪುರ ಸಮಾನತೆಯ ಹರಿಕಾರ, ಕರ್ನಾಟಕದ ಸಾಂಸ್ಕೃತಿಕ ನಾಯಕ ಮಹಾತ್ಮ ಬಸವೇಶ್ವರ ಅವರ ಜಯಂತಿ ನಿಮಿತ್ತ ಅವರ ಜನ್ಮಭೂಮಿ ಬಸವನ ಬಾಗೇವಾಡಿಯಿಂದ ವಿಜಯಪುರದ ಬಸವೇಶ್ವರ ವೃತ್ತದ ವರೆಗೆ ಪಾದಯಾತ್ರೆ ಮತ್ತು 50 ಕಿ.ಮೀ ಓಟವನ್ನು ಈ ವರ್ಷ ಬಾರಿ ವಿಶಿಷ್ಟವಾಗಿ ಆಯೋಜಿಸಲಾಗಿದೆ ಎಂದು ಆಯೋಜಕ ಬಿ.ಬಿ.ಪಾಟೀಲ ತಿಳಿಸಿದ್ದಾರೆ.

ಕನ್ನಡಪ್ರಭ ವಾರ್ತೆ ವಿಜಯಪುರ

ಸಮಾನತೆಯ ಹರಿಕಾರ, ಕರ್ನಾಟಕದ ಸಾಂಸ್ಕೃತಿಕ ನಾಯಕ ಮಹಾತ್ಮ ಬಸವೇಶ್ವರ ಅವರ ಜಯಂತಿ ನಿಮಿತ್ತ ಅವರ ಜನ್ಮಭೂಮಿ ಬಸವನ ಬಾಗೇವಾಡಿಯಿಂದ ವಿಜಯಪುರದ ಬಸವೇಶ್ವರ ವೃತ್ತದ ವರೆಗೆ ಪಾದಯಾತ್ರೆ ಮತ್ತು 50 ಕಿ.ಮೀ ಓಟವನ್ನು ಈ ವರ್ಷ ಬಾರಿ ವಿಶಿಷ್ಟವಾಗಿ ಆಯೋಜಿಸಲಾಗಿದೆ ಎಂದು ಆಯೋಜಕ ಬಿ.ಬಿ.ಪಾಟೀಲ ತಿಳಿಸಿದ್ದಾರೆ.

ಸಮಾನತೆಯ ಸಂಕೇತವಾಗಿರುವ ಬಸವಾದಿ ಶರಣರ ವಿಚಾರಗಳನ್ನು ಅಳವಡಿಸಿಕೊಳ್ಳುವುದು ಮತ್ತು ಎಲ್ಲ ಜೀವಿಗಳ ಮೇಲೆ ದಯೆ ತೋರುವುದು. ಕಾಯಕವೇ ಕೈಲಾಸ ಮತ್ತು ದಾಸೋಹ ತತ್ವಗಳನ್ನು ಮುನ್ನಡೆಸುವುದೇ ಬಸವ ಜ್ಯೋತಿ ಯಾತ್ರೆಯ ಉದ್ದೇಶವಾಗಿದೆ. ಜಿಲ್ಲೆಯ ಹಂದಿನಗೂರು ಗ್ರಾಮದ ಬಿ.ಬಿ.ಪಾಟೀಲ ಅವರು ಕಳೆದ 40 ವರ್ಷಗಳಿಂದ ಬೆಂಗಳೂರಿನಲ್ಲಿ ತಂತ್ರಜ್ಞರಾಗಿದ್ದು, ಜತೆಗೆ ಬಸವಾದಿ ಶರಣರ ತತ್ವ ಪ್ರಸಾರ ಕಾರ್ಯದಲ್ಲಿ ತೊಡಗಿದ್ದಾರೆ. 2012ರಿಂದ ಪ್ರತಿವರ್ಷ ಬಸವ ಜಯಂತಿಯಂದು ಬಸವಣ್ಣನವರ ಜನ್ಮಸ್ಥಳ ಬಸವನ ಬಾಗೇವಾಡಿಯಿಂದ ವಿಜಯಪುರದ ಬಸವೇಶ್ವರ ವೃತ್ತದವರೆಗೆ ಓಟದ ಮೂಲಕ ಬಸವ ಜ್ಯೋತಿಯನ್ನು ತರುವ ಕಾರ್ಯ ಮಾಡುತ್ತಿದ್ದು, ಈ ಬಾರಿ ವಿಜಯಪುರ ಸೈಕ್ಲಿಂಗ್ ಗ್ರುಪ್ ಇವರೊಂದಿಗೆ ಕೈಜೊಡಿಸಿದ್ದು, ಈಗಾಗಲೇ 100ಕ್ಕೂ ಹೆಚ್ಚು ಜನ ಈ ಯಾತ್ರೆಯಲ್ಲಿ ನೋಂದಣಿ ಮಾಡಿಕೊಂಡಿದ್ದಾರೆ.

ದಿ.19 ಭಾನುವಾರ ಸಂಜೆ 7 ಗಂಟೆಗೆ ಬಸವನ ಬಾಗೇವಾಡಿಯಿಂದ ಆರಂಭಗೊಳ್ಳುವ ಈ ಯಾತ್ರೆ ಮಸಬಿನಾಳ, ಉಕ್ಕಲಿ, ಉಕುಮನಾಳ ಮಾರ್ಗವಾಗಿ ದಿ.20 ಸೋಮವಾರ ಬೆಳಗ್ಗೆ 7 ಗಂಟೆಗೆ ಶಿವಗಿರಿ ಮೂಲಕ ಒಟ್ಟು 50 ಕಿ.ಮೀ ಸಂಚರಿಸಿ, ವಿಜಯಪುರ ನಗರದ ಬಸವೇಶ್ವರ ವೃತ್ತದಲ್ಲಿ ಯಾತ್ರೆ ಮುಕ್ತಾಯಗೊಳ್ಳಲಿದೆ.

ಈ ಸಂದರ್ಭದಲ್ಲಿ ಬಸವಜ್ಯೋತಿ ಯಾತ್ರೆಗೆ ನಿರಂತರ ಸಹಾಯ ಮತ್ತು ಸಹಕಾರ ನೀಡುತ್ತಿರುವ ಜಿಲ್ಲಾ ಉಸ್ತುವಾರಿ ಹಾಗೂ ಕೈಗಾರಿಕೆ ಸಚಿವ ಡಾ.ಎಂ.ಬಿ.ಪಾಟೀಲ, ಬಸವನ ಬಾಗೇವಾಡಿ ಶಾಸಕ, ಸಚಿವ ಶಿವಾನಂದ ಪಾಟೀಲ, ವಿಜಯಪುರ ನಗರ ಶಾಸಕ ಬಸನಗೌಡ ಪಾಟೀಲ ಯತ್ನಾಳ ಹಾಗೂ ವಿಜಯಪುರದ ನಾಗರಿಕರು ಈ ಬಸವ ಜ್ಯೋತಿಯನ್ನು ಸ್ವಾಗತಿಸಲಿದ್ದಾರೆ. ವಿಶಿಷ್ಟ ಮತ್ತು ಓಟದಲ್ಲಿ ಪಾಲ್ಗೊಳ್ಳುವವರು https://docs.google.com/forms/d/1oZduLf4uofxSTpr5_4_CTUkfo8qNFWJGUHQCA1Ykjgk/viewform?edit_requested=true ಈ ಲಿಂಕ್ ಮೂಲಕ ಉಚಿತವಾಗಿ ನೋಂದಣಿ ಮಾಡಿಕೊಳ್ಳಬಹುದು. ಈ ಯಾತ್ರೆಯಲ್ಲಿ ಅಲ್ಪೋಪಹಾರ ಹಾಗೂ ಪಾನಿಯ ವ್ಯವಸ್ಥೆ ಮಾಡಲಾಗಿದೆ. ಹೆಚ್ಚಿನ ಮಾಹಿತಿಗಾಗಿ ಶಿವನಗೌಡ ಪಾಟೀಲ: 9900536161, ಡಾ.ರಾಜು ಯಲಗೊಂಡ: 8095190218, ಡಾ.ಮಹಾಂತೇಶ ಜಾಲಗೇರಿ: 9480152598 ಸಂಪರ್ಕಿಸಿ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಮಹಿಳಾ ಸ್ವಾತಂತ್ರ ಹೋರಾಟಗಾರ್ತಿ ಅಕ್ಕಮಹಾದೇವಿ
ಭಾಗ್ಯವಂತಿ ಶಿಕ್ಷಣ ಸಂಸ್ಥೆಗೆ ಒಲಿದ ಹ್ಯಾಟ್ರಿಕ್!