ಹಿಂದಿ ಭಾಷೆಯ ಬಳಕೆ ಹೆಚ್ಚಲಿ: ಆನಂದ್ ರಾಯಮನೆ

KannadaprabhaNewsNetwork |  
Published : Oct 04, 2026, 03:00 AM IST
ಹಿಂದಿ ಭಾಷೆಯ ಬಳಕೆ ಹೆಚ್ಚಲಿ: ಆನಂದ್ ರಾಯಮನೆ | Kannada Prabha

ಸಾರಾಂಶ

ಅಳ್ವಾಸ್ ಕಾಲೇಜಿನ ಹಿಂದಿ ವಿಭಾಗ ಆಯೋಜಿಸಿದ್ದ ಹಿಂದಿ ದಿನಾಚರಣೆ ಕಾರ್ಯಕ್ರಮ

ಮೂಡುಬಿದಿರೆ: ಹಿಂದಿ ಭಾಷೆ ಕೇವಲ ಒಂದು ದಿನದ ಆಚರಣೆಗೆ ಸೀಮಿತವಾಗದೆ, ದೈನಂದಿನ ಜೀವನದ ಸಂವಹನ ಹಾಗೂ ಜ್ಞಾನಾರ್ಜನೆಯಲ್ಲಿಯೂ ಬಳಕೆಯಾಗಬೇಕು ಎಂದು ಸುಬೇದಾರ್ ಲೆಫ್ಟಿನೆಂಟ್ ಡಾ ಆನಂದ್ ರಾಯಮನೆ ಹೇಳಿದರು.

ಅಳ್ವಾಸ್ ಕಾಲೇಜಿನ ಹಿಂದಿ ವಿಭಾಗ ಆಯೋಜಿಸಿದ್ದ ಹಿಂದಿ ದಿನಾಚರಣೆ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದರು.

ಡಿಜಿಟಲ್ ಯುಗದಲ್ಲಿ ಭಾರತೀಯ ಭಾಷೆಗಳನ್ನು ಇಂಗ್ಲಿಷ್ ಅಕ್ಷರಗಳಲ್ಲಿ ಬರೆಯುವ ಪ್ರವೃತ್ತಿ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ, ವಿದ್ಯಾರ್ಥಿಗಳು ಭಾಷೆಯ ಮೂಲ ಸ್ವರೂಪವನ್ನು ಉಳಿಸಿಕೊಂಡು ಅದರ ಸರಿಯಾದ ಬಳಕೆಯನ್ನು ಉತ್ತೇಜಿಸಬೇಕು ಎಂದರು.

ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪರೀಕ್ಷಾಂಗ ವಿಭಾಗದ ಕುಲಸಚಿವ ಡಾ. ಎನ್.ಪಿ. ನಾರಾಯಣ ಶೆಟ್ಟಿ ಮಾತನಾಡಿ, ಭಾಷೆ ಮತ್ತು ರಾಜಕೀಯವನ್ನು ಪರಸ್ಪರ ಬೆರೆಸದೆ, ಭಾಷೆಯನ್ನು ಜನರನ್ನು ಬೆಸೆಯುವ ಮಾಧ್ಯಮವಾಗಿ ನೋಡಬೇಕು ಎಂದರು.

ಯಶಸ್ವಿನಿ ಹಾಗೂ ಹರ್ಷಿಣಿ ಪ್ರಾರ್ಥಿಸಿ, ಹಾನಿಯಾ ಶೇಕ್ ಸ್ವಾಗತಿಸಿದರು. ಬಿಸಿಎ ವಿದ್ಯಾರ್ಥಿನಿ ನೇಹಾ ಮುಖ್ಯ ಅತಿಥಿಯನ್ನು ಪರಿಚಯಿಸಿದರು. 2025–26ನೇ ಸಾಲಿನ ಮನಮೋಹನ ವಾಲ್ ಮ್ಯಾಗಜಿನ್ ಸ್ಪರ್ಧೆಯಲ್ಲಿ ಪ್ರಥಮ ಬಿಎಸ್ಸಿ ವಿದ್ಯಾರ್ಥಿಗಳು ದ್ವಿತೀಯ ಹಾಗೂ ದ್ವಿತೀಯ ಬಿಸಿಎ ವಿದ್ಯಾರ್ಥಿಗಳು ಪ್ರಥಮ ಬಹುಮಾನ ಪಡೆದರು. ಹಿಂದಿ ಸಾಹಿತಿಗಳ ಹೆಸರುಗಳನ್ನು ಬರೆಯುವ ಸ್ಪರ್ಧೆಯಲ್ಲಿ ಹಿತಾ ಪಿ. ಶೆಟ್ಟಿ ದ್ವಿತೀಯ ಹಾಗೂ ಜನಾ ಶೇಕ್ ಪ್ರಥಮ ಬಹುಮಾನ ಪಡೆದರು. ಹಾಡುಗಾರಿಕೆ ಸ್ಪರ್ಧೆಯಲ್ಲಿ ಎಸ್ತಿತಾ ಜೇನ್ ಡಿಸೋಜಾ ಹಾಗೂ ಸಮನ್ವಿತಾ ಎಂ.ಎಚ್. ದ್ವಿತೀಯ ಬಹುಮಾನ ಪಡೆದರೆ, ಕುಮಾರ್ ಪ್ರಥಮ ಬಹುಮಾನ ಪಡೆದರು. ವಿಭಾಗದ ಮುಖ್ಯಸ್ಥ ಡಾ. ದತ್ತಾತ್ರೇಯ ಹೆಗಡೆ ಇದ್ದರು.

ಬಿಸಿಎ ವಿದ್ಯಾರ್ಥಿಗಳಾದ ಸಹನಾ ಭರಡೆ, ನಬಿಹಾ ಶೇಕ್, ಹಾನಿಯಾ, ನೇಹಾ ಹಾಗೂ ಸ್ವಾತಿ ನಿರೂಪಿಸಿದರು. ಸ್ವಾತಿ ವಂದಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಸಾರ್ವಜನಿಕರ ಸಮಸ್ಯೆಗಳಿಗೆ ತ್ವರಿತವಾಗಿ ಸ್ಪಂದಿಸಿ
ಭ್ರಷ್ಟರ ಕೈಯಲ್ಲಿ ಸಿಕ್ಕು ಕಸಾಪ ಸಂಸ್ಥೆಯ ನೈತಿಕತೆ ಹಾಳು: ಪ್ರೊ.ಎಸ್.ಜಿ.ಸಿದ್ದರಾಮಯ್ಯ