ರಾಷ್ಟ್ರೀಯ ಏಕತೆ ಬೆಸೆಯುವ ಭಾಷೆ ಹಿಂದಿ: ಡಾ. ಹುಸೇನಸಾಬ

KannadaprabhaNewsNetwork |  
Published : Sep 29, 2026, 02:15 AM IST
ಕಾರ್ಯಕ್ರಮದಲ್ಲಿ ಡಾ. ಹುಸೇನಸಾಬ ಅತ್ತಾರ ಮಾತನಾಡಿದರು. | Kannada Prabha

ಸಾರಾಂಶ

ಹಿಂದಿ ಭಾಷೆಯು ಜಾತಿ, ಮತ, ಪಂಥ ಹಾಗೂ ಪ್ರಾದೇಶಿಕ ಗಡಿಗಳನ್ನು ಮೀರಿ ರಾಷ್ಟ್ರೀಯ ಏಕತೆಯನ್ನು ಬೆಸೆಯುವ ಪ್ರಮುಖ ಭಾಷೆಯಾಗಿದೆ.

ಕನ್ನಡಪ್ರಭ ವಾರ್ತೆ ಗದಗ

ಹಿಂದಿ ಭಾಷೆಯು ಜಾತಿ, ಮತ, ಪಂಥ ಹಾಗೂ ಪ್ರಾದೇಶಿಕ ಗಡಿಗಳನ್ನು ಮೀರಿ ರಾಷ್ಟ್ರೀಯ ಏಕತೆಯನ್ನು ಬೆಸೆಯುವ ಪ್ರಮುಖ ಭಾಷೆಯಾಗಿದೆ ಎಂದು ನಿವೃತ್ತ ಪ್ರಾಧ್ಯಾಪಕ ಡಾ. ಹುಸೇನಸಾಬ ಅತ್ತಾರ ಹೇಳಿದರು.

ನಗರದ ವಿದ್ಯಾದಾನ ಸಮಿತಿ ಬಾಲಕಿಯರ ಪಪೂ ಕಾಲೇಜಿನಲ್ಲಿ ಹಿಂದಿ ವಿಭಾಗದಿಂದ ನಡೆದ ಹಿಂದಿ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ, ಹಿಂದಿ ಭಾಷೆಯ ಮಹತ್ವ ಕುರಿತು ಉಪನ್ಯಾಸ ನೀಡಿದ, ಅವರು, ಭಾರತದ ಸ್ವಾತಂತ್ರ್ಯ ಹೋರಾಟದ ಸಂದರ್ಭದಿಂದಲೂ ಹಿಂದಿ ದೇಶದ ಪ್ರಮುಖ ಭಾಷೆಯಾಗಿ ಸರ್ವರನ್ನು ಏಕತೆಗೊಳಿಸಿ ರಾಷ್ಟ್ರೀಯ ಏಕತೆ ಮತ್ತು ದೇಶಪ್ರೇಮವನ್ನು ಬೆಳೆಸುವ ಭಾಷೆಯಾಗಿದೆ. ಇಂದು ಅನೇಕ ಕೇಂದ್ರ ಸರ್ಕಾರದ ಉದ್ಯೋಗಗಳನ್ನು ಪಡೆದುಕೊಳ್ಳಲು ಹಿಂದಿ ಭಾಷೆ ಕಲಿಯುವುದು ಅವಶ್ಯಕವಾಗಿದೆ. ಆದ್ದರಿಂದ ವಿದ್ಯಾರ್ಥಿಗಳು ಹಿಂದಿ ಭಾಷೆಯನ್ನು ಶ್ರದ್ಧೆ ಮತ್ತು ಪ್ರೀತಿಯಿಂದ ಕಲಿಯಬೇಕು ಎಂದರು.

ಅಧ್ಯಕ್ಷತೆ ವಹಿಸಿದ್ದ ವಿದ್ಯಾದಾನ ಸಮಿತಿಯ ಅಧ್ಯಕ್ಷ ಶ್ರೀನಿವಾಸ ಬಿ.ಹುಯಿಲಗೋಳ ಮಾತನಾಡಿ, ಶತಮಾನೋತ್ಸವ ಪೂರೈಸಿದ ವಿದ್ಯಾದಾನ ಸಮಿತಿಯು ಹಲವಾರು ದಶಕಗಳಿಂದ ಹಿಂದಿ, ಸಂಸ್ಕೃತ ಹಾಗೂ ಕನ್ನಡ ಭಾಷೆಗಳಿಗೆ ಪ್ರೋತ್ಸಾಹ ನೀಡುತ್ತ ಬಂದಿದೆ ಎಂದರು.

ಹಿಂದಿ ಉಪನ್ಯಾಸಕ ಪ್ರಾ. ಡಾ. ಬಿ.ಎಸ್. ರಾಠೋಡ ಪ್ರಾಸ್ತಾವಿಕವಾಗಿ ಮಾತನಾಡಿ, ಹಿಂದಿ ಭಾಷೆಯನ್ನು ಕಲಿತ ವಿದ್ಯಾರ್ಥಿಗಳು ದೇಶದ ಯಾವ ಭಾಗದಲ್ಲಿ ಹೋದರು ಉತ್ತಮ ಜೀವನ ನಡೆಸಬಹುದು ಆದ್ದರಿಂದ ಎಲ್ಲ ವಿದ್ಯಾರ್ಥಿಗಳು ಹಿಂದಿ ಭಾಷೆಯಲ್ಲಿ ಪರಿಣಿತಿ ಪಡೆಯಬೇಕೆಂದು ತಿಳಿಸಿದರು.

ಉಪನ್ಯಾಸಕ ಬಿ.ಬಿ. ಮಿರ್ಜಿ, ಪ್ರಶಾಂತ ಪಾಟೀಲ, ಅಶ್ವಿನಿ ಜಾಡರ, ಸಮೀರ ಹಂದಿಗೋಳ, ಬಸವರಾಜ ಬಾರಕೇರ ಹಾಗೂ ವಿದ್ಯಾರ್ಥಿಗಳು ಇದ್ದರು. ಪ್ರಿಯಾ ಹಾಗೂ ಸಂಗಡಿಗರು ಪ್ರಾರ್ಥಿಸಿದರು. ಡಾ. ದತ್ತಪ್ರಸನ್ನ ಪಾಟೀಲ ಪರಿಚಯಿಸಿದರು. ಮನ್ಸೂರಾ ಒಂಟಿ ನಿರೂಪಿಸಿದರು. ಉಪನ್ಯಾಸಕ ಟಿ.ಎಂ. ನದಾಫ ವಂದಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಬದಲಾದ ಜೀವನಶೈಲಿ ಅನಾರೋಗ್ಯಕ್ಕೆ ಕಾರಣ: ಡಾ. ಹಿರೇಮಠ
ರಾಷ್ಟ್ರೀಯ ಸುಭದ್ರತೆಗೆ ಯುವಜನತೆ ಪಾತ್ರ ಮುಖ್ಯ; ರವೀಂದ್ರ