ಕನ್ನಡಪ್ರಭ ವಾರ್ತೆ ರೋಣ
ಸೋಮವಾರ ತಾಲೂಕಿನ ಇಟಗಿ ಗ್ರಾಮದ ಶ್ರೀ ಅನ್ನದಾನೇಶ್ವರ ಮಠದ ಆವರಣದಲ್ಲಿ ಶ್ರೀ ಅನ್ನದಾನೇಶ್ವರ ಸಂಸ್ಥಾನಮಠ ಹಾಲಕೇರಿ-ಇಟಗಿ, ವಿಜಯಮಾರ್ಗ ಟ್ರಸ್ಟ್ ಆಶ್ರಯದಲ್ಲಿ ಜರುಗಿದ ಉಚಿತ ಸೇನಾ ತರಬೇತಿ ಶಿಬಿರ-2026 ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದರು.
ಯುವಶಕ್ತಿಯೇ ದೇಶದ ನಿಜವಾದ ಆಸ್ತಿ. ಭಾರತೀಯ ಸಶಸ್ತ್ರ ಪಡೆ ಸೇರಿ ದೇಶದ ಗಡಿ ಕಾಯುವ ಹಾಗೂ ಆಂತರಿಕ ಭದ್ರತೆಯನ್ನು ಕಾಯ್ದುಕೊಳ್ಳುವ ಸೇವಾ ಮನೋಭಾವ ಪ್ರತಿಯೊಬ್ಬ ಯುವಕರಲ್ಲೂ ಬೆಳೆಯಬೇಕು. ಇಂತಹ ಸೇನಾ ತರಬೇತಿ ಶಿಬಿರಗಳು ಯುವಕರಲ್ಲಿದ್ದ ಸುಪ್ತ ಕೌಶಲ್ಯ, ಶಕ್ತಿ ಸಾಮರ್ಥ್ಯ, ಶಿಸ್ತು, ನಾಯಕತ್ವ ಗುಣ ಹಾಗೂ ದೇಶಭಕ್ತಿಯನ್ನು ಹೊರತರಲು ಅತ್ಯುತ್ತಮ ವೇದಿಕೆಯಾಗಲಿವೆ. ಯುವಕರು ಸೇನಾ ತರಬೇತಿ ಶಿಬಿರದ ಪ್ರಯೋಜನ ಪಡೆದು ಸುಂದರ ಭವಿಷ್ಯ ರೂಪಿಸಿಕೊಳ್ಳಬೇಕು ಎಂದರು.ಕಾರ್ಯಕ್ರಮ ಉದ್ಘಾಟಿಸಿದ ಅನ್ನದಾನೇಶ್ವರ ಮಠದ ಶ್ರೀ ಮುಪ್ಪಿನ ಬಸವಲಿಂಗ ಸ್ವಾಮೀಜಿ ಮಾತನಾಡಿ, ಧಾರ್ಮಿಕ ಮತ್ತು ಸಾಮಾಜಿಕ ಕಾರ್ಯಗಳೊಂದಿಗೆ ದೇಶದ ಯುವಜನತೆಯನ್ನು ಸನ್ಮಾರ್ಗದಲ್ಲಿ ಮುನ್ನಡೆಸುವ ಮತ್ತು ಅವರಿಗೆ ಸೈನಿಕ ತರಬೇತಿಯಂತಹ ಉತ್ತಮ ಅವಕಾಶ ಕಲ್ಪಿಸುವಲ್ಲಿ ಶ್ರಮಿಸುತ್ತಿರುವ ವಿಜಯಮಾರ್ಗ ಟ್ರಸ್ಟ್ ಕಾರ್ಯ ಶ್ಲಾಘನೀಯ. ಯುವಕರು ಈ ಉಚಿತ ಸೇನಾ ತರಬೇತಿ ಶಿಬಿರದ ಸದುಪಯೋಗ ಪಡೆದುಕೊಂಡು ಸೇನೆಗೆ ಸೇರ್ಪಡೆಯಾಗುವ ಮೂಲಕ ದೇಶಕ್ಕೆ ಕೀರ್ತಿ ತರಬೇಕು ಎಂದು ಹಾರೈಸಿದರು.
ಕಾರ್ಯಕ್ರಮದಲ್ಲಿ ಬೈರನಹಟ್ಟಿ ವಿರಕ್ತಮಠದ ಶಾಂತಲಿಂಗ ಸ್ವಾಮೀಜಿ, ಧರ್ಮರ ಮಠದ ಷಣ್ಮುಕಪ್ಪಜ್ಜನವರು, ಸಂಯುಕ್ತಾ ಬಂಡಿ, ಡಾ.ಶಿವಲಿಂಗಸರ್ಜಾ ದೇಶಾಯಿ, ಸುಮಂಗಲಾ ದೇಸಾಯಿ, ಮಾಜಿ ಸೈನಿಕರ ಸಂಘದ ತಾಲೂಕ ಅಧ್ಯಕ್ಷ ಪ್ರಭುಗೌಡ ಪಾಟೀಲ ಮುಂತಾದವರಿದ್ದರು. ಉಪನ್ಯಾಸಕ ಅಕ್ಷಯ ಪಾಟೀಲ ನಿರೂಪಿಸಿದರು.